"ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ!'

ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಟ್ವೀಟ್ ಮಾಡಿರುವ ಅವರು, ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ! ಕಳೆದ 7 ತಿಂಗಳಿಂದ ಗೌರವಧನವಿಲ್ಲದೆ ಪರದಾಡುತ್ತಿರುವ 17 ಮಂದಿ ಅತಿಥಿ ಉಪನ್ಯಾಸಕರು! ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವಲ್ಲದೆ ಮತ್ತೇನು, ಡಿ.ಕೆ. ಶಿವಕುಮಾರ್ ಅವರೇ ಎಂದು ಪ್ರಶ್ನೆ ಮಾಡಿದ್ದಾರೆ.

ಮೈಸೂರಿನ ಪ್ರತಿಷ್ಠಿತ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)ದಲ್ಲಿ ಕಳೆದ 15-20 ವರ್ಷಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟು ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆ ಎರೆಯುತ್ತಿರುವ 17 ಮಂದಿ ಅತಿಥಿ ಉಪನ್ಯಾಸಕರಿಗೆ ಕಳೆದ ಏಳು ತಿಂಗಳಿಂದ ಗೌರವಧನ ಪಾವತಿಸಿಲ್ಲ. ತಿಂಗಳುಗಟ್ಟಲೆ ದುಡಿದರೂ ಸಂಬಳವಿಲ್ಲದೆ ಬದುಕು ಸಾಗಿಸುವುದೇ ದುಸ್ತರವಾಗಿರುವ ಈ ಶಿಕ್ಷಕರ ಗೋಳು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Guest Lecturers Government Accused of Pushing Artists into Darkness Instead of Supporting Their Livelihoods

ಪೇಂಟಿಂಗ್, ಶಿಲ್ಪಕಲೆ, ಗ್ರಾಫಿಕ್ಸ್, ಮುದ್ರಣ, ಅನ್ವಯ ಕಲೆ, ಕಲಾ ಇತಿಹಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಉಪನ್ಯಾಸಕರಿಗೆ ತಮ್ಮ ಕುಟುಂಬದ ಭವಿಷ್ಯವನ್ನೇ ಭದ್ರಪಡಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ಸೃಷ್ಟಿಸಿರುವುದು ನಾಚಿಕೆಗೇಡಿನ ಸಂಗತಿ.

ಇದು ಕೇವಲ ಏಳು ತಿಂಗಳ ಗೌರವಧನದ ಸಮಸ್ಯೆಯಲ್ಲ. ಕಳೆದ 15 ವರ್ಷಗಳಿಂದ ಕಾಯಂ ನೇಮಕಾತಿಯನ್ನೇ ಮಾಡದೆ, ಕೇವಲ ಐವರು ಕಾಯಂ ಸಿಬ್ಬಂದಿಯ ಬಲದಲ್ಲಿ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ನಡೆಸುತ್ತಿರುವುದು ನಿಮ್ಮ ಸರ್ಕಾರದ ಶಿಕ್ಷಣ ಮತ್ತು ಕಲಾ ಕ್ಷೇತ್ರದ ಬಗೆಗಿನ ಬದ್ಧತೆಯನ್ನು ಪ್ರಶ್ನಿಸುವಂತಿದೆ. ಮುಂದಿನ ವರ್ಷ ಇಬ್ಬರು ಸಿಬ್ಬಂದಿ ನಿವೃತ್ತರಾದರೆ ಸಂಸ್ಥೆಯ ಸ್ಥಿತಿ ಏನಾಗಬಹುದು ಎಂಬ ಕನಿಷ್ಠ ಚಿಂತನೆಯೂ ಸರ್ಕಾರಕ್ಕಿಲ್ಲವೇ?

ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನಕ್ಕೆ ಶುಭಕೋರಿದ ಮೋದಿ, ಹೇಳಿದಿಷ್ಟು: ಪ್ರಿಯಾಂಕಾ ಗಾಂಧಿ ವಿಶೇಷ ಪೋಸ್ಟ್‌
ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನಕ್ಕೆ ಶುಭಕೋರಿದ ಮೋದಿ, ಹೇಳಿದಿಷ್ಟು: ಪ್ರಿಯಾಂಕಾ ಗಾಂಧಿ ವಿಶೇಷ ಪೋಸ್ಟ್‌

ನಿಮ್ಮ ಸರ್ಕಾರಿ ಬಂಗಲೆ ನವೀಕರಣಕ್ಕೆ ದುಡ್ಡಿದೆ

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಸರ್ಕಾರಿ ಬಂಗಲೆ ನವೀಕರಣಕ್ಕೆ ದುಡ್ಡಿದೆ, ಜಾಹೀರಾತುಗಳಿಗೆ, ಸಮಾವೇಶಗಳಿಗೆ, ಪ್ರಚಾರಕ್ಕೆ ಹಣವಿದೆ. ಆದರೆ ತಿಂಗಳ ಸಂಬಳವನ್ನೇ ನಂಬಿ ಬದುಕುವ ಶಿಕ್ಷಕರಿಗೆ ಏಳು ತಿಂಗಳ ಗೌರವಧನ ಬಿಡುಗಡೆ ಮಾಡಲು ದುಡ್ಡಿಲ್ಲವೇ. ಒಂದೆಡೆ By Choice I am Educationist, ಶಿಕ್ಷಣದ ಗುಣಮಟ್ಟ, ಸಾಂಸ್ಕೃತಿಕ ಪರಂಪರೆ ಎಂದು ವೇದಿಕೆಗಳ ಮೇಲೆ ದೊಡ್ಡ ದೊಡ್ಡ ಭಾಷಣ ಮಾಡುತ್ತೀರಿ. ಮತ್ತೊಂದೆಡೆ ಕಲೆಯನ್ನೇ ಬದುಕಾಗಿಸಿಕೊಂಡಿರುವ ಉಪನ್ಯಾಸಕರನ್ನು ಬೀದಿಗೆ ತಳ್ಳುತ್ತಿದ್ದೀರಿ. ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆದ್ಯತೆಗಳೇನು ಎಂಬುದಕ್ಕೆ ಕಾವಾ ಕಾಲೇಜಿನ ಈ ದುಸ್ಥಿತಿಯೇ ಸಾಕ್ಷಿ! ತಕ್ಷಣವೇ 17 ಮಂದಿ ಅತಿಥಿ ಉಪನ್ಯಾಸಕರ ಏಳು ತಿಂಗಳ ಬಾಕಿ ಗೌರವಧನ ಬಿಡುಗಡೆ ಮಾಡಿ. 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಯಂ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ಮುಂದುವರಿದು, ಕಲಾವಿದರನ್ನು ಗೌರವಿಸದ ಸರ್ಕಾರಕ್ಕೆ ಕಲೆಯ ಮಹತ್ವ ಅರ್ಥವಾಗುವುದಿಲ್ಲ. ಶಿಕ್ಷಕರ ಶ್ರಮಕ್ಕೆ ಬೆಲೆ ಕೊಡದ ಸರ್ಕಾರಕ್ಕೆ ಶಿಕ್ಷಣದ ಮೌಲ್ಯ ತಿಳಿದಿರುವುದಿಲ್ಲ. ಕಲಾವಿದರ ಬದುಕಿಗೆ ಬಣ್ಣ ತುಂಬಲಾಗದ, ಶಿಕ್ಷಕರ ಕಣ್ಣೀರು ಒರೆಸಲಾಗದ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕ ಅರ್ಹತೆಯಾದರೂ ಎಲ್ಲಿದೆ, ಮುಖ್ಯಮಂತ್ರಿಗಳೇ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಪರ್ವ ಎಂದ ಖರ್ಗೆ; ಸ್ವಲ್ಪ ಕರ್ನಾಟಕವನ್ನೂ ನೋಡಿ ನೆಟ್ಟಿಗರ ರಿಯಾಕ್ಷನ್!
ನರೇಂದ್ರ ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಪರ್ವ ಎಂದ ಖರ್ಗೆ; ಸ್ವಲ್ಪ ಕರ್ನಾಟಕವನ್ನೂ ನೋಡಿ ನೆಟ್ಟಿಗರ ರಿಯಾಕ್ಷನ್!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+