ಕರ್ನಾಟಕದಲ್ಲಿ ಪೊಲೀಸ್ ಹುದ್ದೆಗಳ ವಯೋಮಿತಿ ಸಡಿಲಿಕೆ ಸರ್ಕಾರದಿಂದ ಮಹತ್ವದ ಅಪ್ಡೇಟ್ಸ್
ಕರ್ನಾಟಕದಲ್ಲಿ ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಅಲ್ಲದೇ ಕೋವಿಡ್ ಕಾರಣದಿಂದ ನೇಮಕಾತಿ ಪ್ರಕ್ರಿಯೆಗಳು ವಿಳಂಬ ಹಾಗೂ ಕೆಲವೊಂದು ಗೊಂದಲಗಳಿಂದಾಗಿ ಹಲವು ಅರ್ಹ ಅಭ್ಯರ್ಥಿಗಳು ಪೊಲೀಸ್ ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ. ಇದೀಗ ಈ ಸಂಬಂಧ ಕರ್ನಾಟಕ ಸರ್ಕಾರವು ಈ ಬಗ್ಗೆ ಮಹತ್ವದ ಅಪ್ಡೇಟ್ಸ್ ಹಂಚಿಕೊಂಡಿದೆ.
ಈ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಸಮೀಕ್ಷೆಗೆ ಅವಧಿ ವಿಸ್ತರಣೆ ವಿಚಾರವಾಗಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಹೋಗಿದ್ದಾರೆ. ಕೊಪ್ಪಳದಿಂದ ಬಂದ ಮೇಲೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

ಜಿಲ್ಲಾವಾರು ಅಂಕಿ ಅಂಶ ಪಡೆದು ಚರ್ಚೆ ಮಾಡ್ತಾರೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಡಿಮೆ ಆಗಿದೆ. ಮತ್ತೆ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ತಗೋಬೇಕು. ಈ ವಿಚಾರದಲ್ಲಿ ಗೊಂದಲಗಳು ಸಣ್ಣಪುಟ್ಟ ಆಗೋದು ಸಹಜ. ಎಲ್ಲರೂ ಸಹಕರಿಸಿದರೆ ಸರಿಯಾಗಿ ನಡೆಯುತ್ತೆ. ಬಿಜೆಪಿಯವರು ಅವರ ಅಭಿಪ್ರಾಯ ಹೇಳ್ತಾರೆ, ನಾವು ಸರ್ಕಾರವಾಗಿ ಏನು ಮಾಡಬೇಕೋ ಅದನ್ನು ಜವಾಬ್ದಾರಿಯಿಂದ ಮಾಡ್ತೇವೆ. ಮುಂದುವರಿದು ಕರ್ನಾಟಕದಲ್ಲಿ ಶೇ 80% ಸಮೀಕ್ಷೆ ಆಗಿದೆ. ಇನ್ನೂ 20% ಆದರೆ ಮುಗಿಯುತ್ತೆ. ಇನ್ನೊಂದೆರಡು ದಿನ ವಿಸ್ತರಣೆ ಮಾಡಿದರೆ ಮುಗಿಯಬಹುದು ಎಂದು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಸಿಎಂ ಹುದ್ದೆ ಬದಲಾವಣೆ ವಿಚಾರ: ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ, ತಾವೇ ಐದು ವರ್ಷ ಸಿಎಂ ಆಗಿ ಇರಲಿದ್ದೇನೆ ಎಂದು. ನಮ್ಮಲ್ಲಿ ಏನೂ ಗೊಂದಲಗಳಿಲ್ಲ ಮಾತಾಡೋರು ಮಾತಾಡಿಕೊಳ್ತಾರೆ, ಸಿಎಂಗೇನು ಜವಾಬ್ದಾರಿ ಇಲ್ವಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಧರ್ಮಸ್ಥಳ ಪ್ರಕರಣ ತನಿಖೆ: ಧರ್ಮಸ್ಥಳ ಪ್ರಕರಣಗಳ ವರದಿ ಬೇಗ ಕೊಡಲು ಸೂಚಿಸಲಾಗಿದೆ. ತನಿಖೆ ನಡೆಯುತ್ತದೆ. ಬೇರೆ ಬೇರೆ ಅನಾಲಿಸಿಸ್ ಆಗ್ತಿದೆ, ಇದಕ್ಕೆ ಸಮಯ ಹಿಡಿಯುತ್ತೆ. ತನಿಖೆಯನ್ನು ಇದೇ ಮಾದರಿಯಲ್ಲಿ ಮಾಡಿ ಎಂದು ನಾವು ಹೇಳೋಕ್ಕಾಗಲ್ಲ. ಒತ್ತಡ ಹಾಕಿ ಈಗಲೇ ವರದಿ ಕೊಡಿ ಅನ್ನೋಕ್ಕಾಗಲ್ಲ. ಎಫ್ಎಸ್‌ಎಲ್ ವರದಿಯೂ ಬರಬೇಕು. ಎಲ್ಲವನ್ನೂ ಪರಿಶೀಲಿಸಿ ಎಸ್ಐಟಿ ಅಧಿಕಾರಿಗಳು ವರದಿ ಕೊಡ್ತಾರೆ.
ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ವಿಚಾರ: ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ವಿಚಾರದ ಬಗ್ಗೆಯೂ ಜಿ. ಪರಮೇಶ್ವರ್ ಅವರು ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲಿ ಎಷ್ಟೆಷ್ಟು ವಯೋಮಿತಿ ಇದೆ ಅಂತ ತರಿಸಿಕೊಂಡಿದ್ದೇವೆ. ಇನ್ನು ಕೆಲವು ದಿನಗಳಲ್ಲಿ ಪೊಲೀಸ್ ಹುದ್ದೆಗಳಿಗೆ ಶಾಶ್ವತ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಮಾಡ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications