ಬೀದರ್‌ನಿಂದ ಚಾಮರಾಜನಗರದ ತನಕ ದೇವರಾಜ ಅರಸು ರಥಯಾತ್ರೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 09 : ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅರಸು ಅವರು ಜಾರಿಗೊಳಿಸಿದ್ದ ಯೋಜನೆಗಳನ್ನು ಬಿಂಬಿಸುವ ಅರಸು ರಥಯಾತ್ರೆ ರಾಜ್ಯದಾದ್ಯಂತ ಸಂಚಾರ ನಡೆಸಲಿದೆ.

ಡಿ. ದೇವರಾಜ ಅರಸು ಶತಮಾನೋತ್ಸವದ ಸಮಾರೋಪ ಸಮಾರಂಭ ಆಗಸ್ಟ್ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ನಾಲ್ಕು ವಿಶೇಷ ರಥಗಳು ಏಕಕಾಲಕ್ಕೆ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಿವೆ.[ಭೂಸುಧಾರಣೆಯ ಹರಿಕಾರ ದೇವರಾಜ ಅರಸು]

ವಿಜಯಪುರ-ಬೆಂಗಳೂರು (925 ಕಿ.ಮೀ) ಪ್ರಯಾಣಿಸುವ ಅರಸು ರಥ ಆಗಸ್ಟ್ 8 ರಂದು ವಿಜಯಪುರದಿಂದ ಹೊರಟಿದ್ದು, 9ರಂದು ಬಾಗಲಕೋಟೆ, 10ರಂದು ಬೆಳಗಾವಿ ಜಿಲ್ಲೆಯ ಗೋಕಾಕ, 11ರಂದು ಧಾರವಾಡ, 12 ರಂದು ಗದಗ, 13ರಂದು ಹಾವೇರಿ, 14ರಂದು ಡಾವಣಗೇರಿ ಹಾಗೂ 15 ರಂದು ಚಿತ್ರದುರ್ಗದಕ್ಕೆ ತೆರಳಿದ್ದು, ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲಿದೆ.[ಅರಸು ಹುಟ್ಟೂರನ್ನು ದತ್ತು ಪಡೆದ ಸರ್ಕಾರ]

ದೇವರಾಜ ಅರಸು ಅವರ ಹೆಸರಿನಲ್ಲಿ ಬೆಂಗಳೂರು, ಮೈಸೂರು ಸೇರಿ ರಾಜ್ಯದ ಹಲವು ಕಡೆ ಬಡಾವಣೆಗಳ ನಿರ್ಮಾಣ ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸುಮಾರು 200 ಎಕರೆ ಜಾಗ ಸಿಗುವ ಕಡೆ ಸ್ವಾಧೀನ ಪಡಿಸಿಕೊಂಡು ಮನೆ ಇಲ್ಲದ ಬಡವರಿಗೆ 20x30 ಅಳತೆ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ....

ಆಗಸ್ಟ್ 8 ರಿಂದ 17ತ ತನಕ

ಆಗಸ್ಟ್ 8 ರಿಂದ 17ತ ತನಕ

ಬೀದರ್‌-ಬೆಂಗಳೂರು ( 967 ಕಿ.ಮೀ) ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಸಿಂಧನೂರು, ಕೊಪ್ಪಳ, ಬಳ್ಳಾರಿ, ಹಿರಿಯೂರು, ತುಮಕೂರಿನಲ್ಲಿ ಅರಸು ರಥಯಾತ್ರೆ ನಡೆಯಲಿದ್ದು, ಒಂದೊಂದು ದಿನ ಕಾರ್ಯಕ್ರಮ ನಡೆಯಲಿದೆ

ಕಾರವಾರ-ಬೆಂಗಳೂರು

ಕಾರವಾರ-ಬೆಂಗಳೂರು

ಕಾರವಾರ-ಬೆಂಗಳೂರು (810 ಕಿ.ಮೀ) ಕಾರವಾರ, ಕುಮಟ, ಸಾಗರ, ಶಿವಮೊಗ್ಗ, ಕಡೂರು, ಚಿಕ್ಕಮಗಳೂರು, ಹಾಸನ , ತಿಪಟೂರು, ಮಧುಗಿರಿ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಅರಸು ರಥಯಾತ್ರ ಸಂಚಾರ ನಡೆಸಲಿದೆ.

ಉಡುಪಿ-ಬೆಂಗಳೂರು

ಉಡುಪಿ-ಬೆಂಗಳೂರು

ಉಡುಪಿ- ಬೆಂಗಳೂರು (875 ಕಿ.ಮೀ) ಉಡುಪಿ, ಮಂಗಳೂರು ಸುಳ್ಯ, ಮಡಿಕೇರಿ, ಹುಣಸೂರು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹೊಸಕೋಟೆ, ಬೆಂಗಳೂರಿನಲ್ಲಿ ಅರಸು ರಥಯಾತ್ರೆ ನಡೆಯಲಿದೆ.

ಸರ್ಕಾರದಿಂದ ಜನ್ಮಶತಮಾನೋತ್ಸವ ಆಚರಣೆ

ಸರ್ಕಾರದಿಂದ ಜನ್ಮಶತಮಾನೋತ್ಸವ ಆಚರಣೆ

ಕರ್ನಾಟಕ ಸರ್ಕಾರ ಈ ವರ್ಷ ದೇವರಾಜ ಅರಸು ಜನ್ಮಶತಮಾನೋತ್ಸವವನ್ನು ಆಚರಣೆ ಮಾಡುತ್ತಿದೆ. ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ.

ಒಂದು ವರ್ಷಗಳ ಕಾಲ ಕಾರ್ಯಕ್ರಮ

ಒಂದು ವರ್ಷಗಳ ಕಾಲ ಕಾರ್ಯಕ್ರಮ

2015ರ ಆಗಸ್ಟ್ 20ರಂದು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. 2016ರ ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government will celebrate the birth centenary of former chief minister D. Devaraj Urs on August 20, 2016. government organized ratha yatra in all districts from August 8 to 17.
Please Wait while comments are loading...