ಚಿಂತಾಮಣಿಯಲ್ಲಿ 900 ಸಿಲಿಂಡರ್ ಸ್ಫೋಟ, 2 ಲಾರಿ ಭಸ್ಮ

Posted By:
Subscribe to Oneindia Kannada

ಚಿಂತಾಮಣಿ, ಡಿಸೆಂಬರ್, 26: ಚಿಕ್ಕಬಳ್ಳಾಪುರದ ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 900ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಎರಡು ಲಾರಿಗಳು ಹೊತ್ತಿ ಉರಿದಿರುವ ಘಟನೆ ಜರುಗಿದೆ. ಅದೃಷ್ಟ ವಶಾತ್ ಯಾರಿಗೂ ತೊಂದರೆಯಾಗಿಲ್ಲ.

ಚಿಂತಾಮಣಿ- ಬಾಗೇಪಲ್ಲಿ ಮಾರ್ಗಮಧ್ಯದಲ್ಲಿರುವ ಚೋಕೆನಲ್ಲಿ ಗೇಟ್ ಬಳಿ ಎಸ್ಎಲ್ಎನ್ ಗ್ಯಾಸ್ ಸಿಲಿಂಡರ್ ಗೋದಾಮಿನಲ್ಲಿ ರಾತ್ರೋ ರಾತ್ರಿ ಲಾರಿಯಲ್ಲಿದ್ದ ಸಿಲಿಂಡರ್ ಗಳು ಸ್ಪೋಟಗೊಂಡಿದ್ದು ಎರಡು ಲಾರಿ ಸೇರಿ 900ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಪೋಟಗೊಂಡಿವೆ.[ಸಿಲಿಂಡರ್ ಸ್ಫೋಟ, ಪಟಾಕಿ ಸಿಡಿತ : ಬೆಡಿ ಸಾಯೇಬನ ಮನೆ ಧ್ವಂಸ]

ಇನ್ನು ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಗೋದಾಮಿನಲ್ಲಿ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಯಾರಿಗೂ ತಿಳಿದಿಲ್ಲ. ಅದರೆ 70ಲಕ್ಷ ಮೌಲ್ಯದ ಸಿಲಿಂಡರ್ ಗಳು ನಾಶ ಹೊಂದಿವೆ.

gas cylinder

ಗ್ಯಾಸ್ ಸಿಲಿಂಡರ್ ಸ್ಪೋಟದ ಶಬ್ದಕ್ಕೆ ಜನ ಭಯಭೀತಗೊಂಡಿದ್ದು, ಎಲ್ಲಿ ಈ ಶಬ್ದ ಬಂದಿರಬಹುದೆಂದು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಇನ್ನು ಅಗ್ನಿ ಶ್ಯಾಮಕ ಸಿಬ್ಬಂದಿ ಲಾರಿಯ ಬ್ಯಾಟರಿಯಲ್ಲಿ ಏನಾದರೂ ಸಮಸ್ಯೆ ಎದುರಾದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದೆಂದು ಊಹಿಸಿದ್ದಾರೆ.[ಎಲ್ಲೆಡೆ ನೋಟ್ ಬಂದ್: ಹುಬ್ಬಳ್ಳಿಯಲ್ಲಿ ಗ್ಯಾಸ್ ಬಂದ್]

gas cylinder

ನಿನ್ನೆ(ಡಿ.25) ಭಾನುವಾರವಾದ್ದರಿಂದ ಗ್ಯಾಸ್ ಎಜೆನ್ಸಿಯ ಸಿಬ್ಬಂದಿಗಳು ಮನೆಗೆ ತೆರಳಿದ್ದರು. ರಾತ್ರಿ ವೇಳೆ ಈ ಅಗ್ನಿ ಅವಘಡ ನಡೆದಿದ್ದು ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಅಲ್ಲದೆ ಗ್ಯಾಸ್ ಗೋದಾಮಿನ ಸಮೀಪ ರಾಜೀವ್ ಗಾಂಧಿ ವಸತಿ ಶಾಲೆಯಿದ್ದು ಹಗಲಿನಲ್ಲಿ ಈ ಅಪಘಾತ ಸಂಭವಿಸಿದ್ದಿದ್ದರೆ ಪರಿಣಾಮ ಭೀಕರವಾಗಿರುತ್ತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ಗಂಗಣ್ಣ, ಡಿವೈಎಸ್ ಪಿ ಕೃಷ್ಣಮೂರ್ತಿ, ಎಸ್ ಪಿ ಚೈತ್ರಾ, ಗ್ಯಾಸ್ ಎಜೆನ್ಸಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chintamani cylinder explosion at the cokenahalli gate, two lorry ashes, 800 cylinders are fueled kindled. There is no threat to life.
Please Wait while comments are loading...