ಗಂಡ ಹೆಂಡತಿ ಜೊತೆಗೆ ಹೋಗಬಹುದಂತೆ, ಥಿಯೇಟರ್ ನಲ್ಲಿ ಬೇರೆ ಬೇರೆ ಕೂತ್ಕೋಬೇಕಂತೆ

ಬೆಂಗಳೂರು, ಏಪ್ರಿಲ್ 4: ಕೊರೊನಾ ಪಾಸಿಟೀವ್ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡುತ್ತಿದ್ದ ಡಿಕೆಶಿ, "ಸರಕಾರದ ಹೊಸ ಮಾರ್ಗಸೂಚಿ ಅಟ್ಟರ್ ಫ್ಲಾಪ್ ಆಗಲಿದೆ. ಪ್ರಾಕ್ಟಿಕಲ್ ಬುದ್ದಿ ಅನ್ನೋದು ಸರಕಾರಕ್ಕೆ ಇಲ್ಲ. ಯಾರನ್ನು ನಿಯಂತ್ರಣ ಮಾಡಬೇಕೋ ಅಲ್ಲಿ ಮಾಡಬೇಕು"ಎಂದು ಅಭಿಪ್ರಾಯ ಪಟ್ಟರು.

"ಪ್ರಯಾಣಿಕರು ನಿಂತುಕೊಂಡು ಹೋಗಬಾರದು ಎನ್ನುವ ಕಾನೂನು ತಂದಿದ್ದಾರೆ. ಅಕ್ಕಪಕ್ಕ ಕೂತರೆ ಕೊರೊನಾ ಬರುವುದಿಲ್ಲವೇ? ಗಂಡ ಹೆಂಡತಿ ಥಿಯೇಟರ್ ನಲ್ಲಿ ಬೇರೆ ಬೇರೆ ಕುಳಿತುಕೊಳ್ಳಬೇಕಂತೆ, ಮನೆಯಲ್ಲಿ ಜೊತೆಗೆ ಇರಬಹುದಂತೆ"ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.

Corona New Guidelines In Karnataka, KPCC President D K Shivakumar Reaction

"ಮನೆಯಲ್ಲಿ ಜೊತೆಗೆ ಮಲಗುತ್ತೇವೆ. ಸ್ನೇಹಿತರ ಜೊತೆಗೆ ಇರುತ್ತೇವೆ. ಸಿನಿಮಾ ಮಂದಿರದಲ್ಲಿ ಒಂದು ಸೀಟು ಬಿಟ್ಟು ಕುಳಿತುಕೊಳ್ಳಬೇಕು ಎನ್ನುವ ಕಾನೂನು ಮಾಡುತ್ತಾರಲ್ವಾ, ಈ ಸರಕಾರಕ್ಕೆ ಏನು ಹೇಳೋಣ"ಎಂದು ಡಿಕೆಶಿ ಆಕ್ರೋಶ ವ್ಯಕ್ತ ಪಡಿಸಿದರು.

"ಮದುವೆ ಮುಂತಾದ ಸಮಾರಂಭಗಳಿಗೆ ನಿಯಂತ್ರಣ ಹೇರುವುದು, ಪ್ರಾಕ್ಟಿಕಲ್ ಆಗಿ ಇದು ಸಾಧ್ಯವಿಲ್ಲ. ಕಾನೂನು ಎನ್ನುವುದು ಎಲ್ಲರಿಗೂ ಒಂದೇ ಇರಬೇಕು, ಒಬ್ಬರಿಗೆ ಒಂದೊಂದು ಇರಬಾರದು"ಎಂದು ಡಿಕೆಶಿ ಹೇಳಿದರು.

"ನೀವೇ ರಾಜಕೀಯ ಸಮಾರಂಭಕ್ಕೆ ಹೋಗಿ, ಜನ ಸೇರಿಸುತ್ತೀರಾ. ಕಾನೂನು ಮಾಡುವ ಹಾಗಿದ್ದರೆ, ಎಲ್ಲಾ ಪಕ್ಷಗಳಿಗೂ ಮಾಡಿ, ಎಲ್ಲಾ ಜನರಿಗೂ ಮಾಡಿ"ಎಂದು ಡಿಕೆಶಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.

Recommended Video

      'ಟಫ್ ರೂಲ್ಸ್ ನಲ್ಲಿ ಯಾವುದೇ ಬದಲಾವಣೆ ಇಲ್ಲ'-ಆರೋಗ್ಯ ಸಚಿವ ಡಾ.ಕೆ ಸುಧಾಕರ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+