SWR: ಪಂಚಗಂಗಾ, ಗೋಲ್ ಗುಂಬಜ್ ರೈಲುಗಳ ಸಮಯ ಪರಿಷ್ಕರಣೆ; ಹಾಸನ ಇಂಟರ್‌ಸಿಟಿ ಭಾಗಶಃ ರದ್ದು
ಬೆಂಗಳೂರು: ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ವಿಶೇಷ ರೈಲುಗಳ ಬಿಡುಗಡೆ ಮಾತ್ರವಲ್ಲದೇ ಸಮಯ ಪರಿಷ್ಕರಣೆ, ಭಾಗಶಃ ರದ್ದಾದ ರೈಲುಗಳ ಅಪ್ಡೇಟ್ ಮಾಹಿತಿ ಇಲ್ಲಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣಕ್ಕೆ ಬರುವ ಎಕ್ಸ್‌ಪ್ರೆಸ್ ರೈಲುಗಳ ಸಮಯ ಪರಿಷ್ಕರಣೆ ಆಗಿದೆ. ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಂಡಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ.
ಯಶವಂತಪುರ: ರೈಲುಗಳ ಸಮಯ ಪರಿಷ್ಕೃರಣೆ ಪಟ್ಟಿ
* 2026 ಅಕ್ಟೋಬರ್ 20 ರಂದು ಮೂಲ ನಿಲ್ದಾಣಗಳಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಯಶವಂತಪುರ ನಿಲ್ದಾಣದಲ್ಲಿ ಕಾರವಾರ-ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ದೈನಂದಿನ ಎಕ್ಸ್‌ಪ್ರೆಸ್ ರೈಲು (16596) ಮತ್ತು ಪಂರಪುರ-ಮೈಸೂರು ಗೋಲಗುಂಬಜ ದೈನಂದಿನ ಎಕ್ಸ್‌ಪ್ರೆಸ್ ರೈಲು (16536) ಪರಿಷ್ಕರಿಸಲಾಗಿದೆ ಎಂದರು.

* ಯಶವಂತಪುರಕ್ಕೆ 06:23/06:25 ಗಂಟೆಗೆ ಬದಲಾಗಿ 06:48/06:50 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 16536 06:48/06:50 ಗಂಟೆಗೆ ಬದಲಾಗಿ 07:13/07:15 ಗಂಟೆಗೆ ಯಶವಂತಪುರಕ್ಕೆ ಆಗಮಿಸಿ/ನಿರ್ಗಮಿಸಲಿದೆ.
ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
ಹಾಸನ ಯಾರ್ಡ್‌ಲ್ಲಿ ಗರ್ಡರ್ ಮತ್ತು ಪಾದಚಾರಿ ಮೇತುವೆಯ ಕಾಮಗಾರಿಗಾಗಿ ಲೈನ್ ಬ್ಲಾಕ್ ನಡೆಯುತ್ತಿದೆ. ಈ ಸಂಬಂಧ ಯಶವಂತಪುರ-ಹಾಸನ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಚನ್ನರಾಯಪಟ್ಟಣ ಮತ್ತು ಹಾಸನ ನಿಲ್ದಾಣಗಳ ನಡುವೆ ನಿಲ್ದಾಣ ರದ್ದುಗೊಳ್ಳಲಿದೆ. ಇದೇ ತಿಂಗಳ ಅಕ್ಟೋಬರ್ 15, 24, 26, 28, ನವೆಂಬರ್ 14, 16, 18, 19, 21, 23, 25, 26, 28 ಮತ್ತು 29ರಂದು ಈ ರೈಲು ಸಂಚಾರ ರದ್ದುಗೊಂಡಿದ್ದು, ಚನ್ನರಾಯಪಟ್ಟಣ ನಿಲ್ದಾಣದಲ್ಲೇ ತನ್ನ ಪ್ರಯಾಣ ಮುಕ್ತಾಯಗೊಳಿಸುತ್ತದೆ.
ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಪ್ರಾಯೋಗಿಕ ನಿಲುಗಡೆ
ದಕ್ಷಿಣ ರೈಲ್ವೆಯು ಒಟ್ಟಪಾಲಂ ನಿಲ್ದಾಣದಲ್ಲಿ ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ದೈನಂದಿನ ಇಂಟರ್ ಸಿಟಿ ಎಕ್ಸ್‌ಪ್ರೆಸ್‌ಗೆ ರೈಲು (16377/16378) ಪ್ರಾಯೋಗಿಕ ನಿಲುಗಡೆಯನ್ನು ಇದೇ 15 ಅಕ್ಟೋಬರ್ 2026 ರಿಂದ ಜಾರಿಗೆ ಬರುವಂತೆ ಘೋಷಿಸಿದೆ.
ಎಸ್‌ಆರ್ ಬೆಂಗಳೂರು-ಎರ್ನಾಕುಲಂ ದೈನಂದಿನ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲು (16377) ಒಟ್ಟಪಾಲಂಗೆ 14:30 ಗಂಟೆಗೆ ಆಗಮಿಸಲಿದೆ. 14:31 ಗಂಟೆಗೆ ಮತ್ತೆ ಅಲ್ಲಿಂದ ಹೊರಡಲಿದೆ.
Bengaluru-Mangaluru Railway Line: ಇತಿಹಾಸ ಸೇರಲಿವೆ ಡೀಸೆಲ್ ರೈಲುಗಳು, ವಿದ್ಯುತ್ ರೈಲುಗಳ ಸಂಚಾರ ಶೀಘ್ರ
ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ದೈನಂದಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (16378) ಒಟ್ಟಪಾಲಂಗೆ 10:59 ಗಂಟೆಗೆ ಆಗಮಿಸಿ, 11:00 ಗಂಟೆಗೆ ಹೊರಡಲಿದೆ. ಇದರ ಪ್ರಯೋಜನವನ್ನು ಪ್ರಯಾಣಿಕರು ಪಡೆಯುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications
