Get Updates
Get notified of breaking news, exclusive insights, and must-see stories!

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ದಾರಿಗಳ್ಳರಿಂದ?

ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ಎಸಿಬಿ ಅಧಿಕಾರಿಗಳ ತಂಡ ದಾರಿಗಳ್ಳರಿಂದ ಅವರ ಕೊಲೆಯಾಗಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆಂದು ಮೂಲಗಳು ತಿಳಿಸಿವೆ.

ಲಕ್ನೋ, ಜೂನ್ 5: ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿಯವರ ಸಾವಿಗೆ ಮತ್ತೊಂದು ತಿರುವು ಸಿಕ್ಕಿದೆ.

ಮೊದಲಿಗೆ ಹೃದಯಾಘಾತದ ಸಾವು ಎಂದು ಭಾವಿಸಲ್ಪಟ್ಟಿದ್ದ ತಿವಾರಿಯವರ ಪ್ರಕರಣವು ಆನಂತರ ಕೊಲೆ ಕೇಸ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು.[ಅನುರಾಗ್ ತಿವಾರಿ ಅವರು ಸತ್ತಿದ್ದು ಉಸಿರುಗಟ್ಟಿದ್ದರಿಂದ!]

Anurag Tiwari

ಇದರ ಜಾಡಿನ ಬೆನ್ನು ಹತ್ತಿದ ಉತ್ತರ ಪ್ರದೇಶದ ವಿಶೇಷ ತನಿಖಾ ದಳ (ಎಸಿಬಿ) ಅಧಿಕಾರಿಗಳು ತಿವಾರಿಯವರ ಸಾವು ದಾರಿಗಳ್ಳರಿಂದ ಆಗಿದೆ ಎಂಬ ನಿಲುವಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.[ಆಯುಕ್ತ ಅನುರಾಗ್ ತಿವಾರಿ ಸಾವು; ಏನು ಹೇಳ್ತಾರೆ ಪೊಲೀಸರು?]

ಅನುರಾಗ್ ತಿವಾರಿಯವರು ಶವವಾಗಿ ಸಿಕ್ಕ ಹಿಂದಿನ ದಿನ ರಾತ್ರಿ ಅವರ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿಕೊಂಡು ಹೊರಬಂದ ನಂತರ ದಾರಿಗಳ್ಳರು ಅವರ ದರೋಡೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರು ಹಾಗೂ ತಿವಾರಿ ನಡುವೆ ನಡೆದ ಘರ್ಷಣೆ ವೇಳೆ ತಿವಾರಿ ಮೇಲೆ ಕಳ್ಳರು ಹಲ್ಲೆ ನಡೆಸಿರಬಹುದು. ಹಾಗಾಗಿ, ಅವರ ಸಾವಾಗಿದೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+