ಆಯುಕ್ತ ಅನುರಾಗ್ ತಿವಾರಿ ಸಾವು; ಏನು ಹೇಳ್ತಾರೆ ಪೊಲೀಸರು?

Posted By:
Subscribe to Oneindia Kannada

ಲಕ್ನೋ, ಮೇ 17: ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ಕುಂದುಕೊರತೆ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಅವರು ಲಕ್ನೋದಲ್ಲಿ ಸಾವಿಗೀಡಾಗಿದ್ದಾರೆ. ಆ ಸಾವು ಹೃದಯಾಘಾತದಿಂದ ಆಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ.

ಬುಧವಾರ ಬೆಳಗಿನ ಜಾವ ಅವರ ಶವ ಹಜರತ್ ಗಂಜ್ ಪ್ರಾಂತ್ಯದ ಮೀರಾಬಾಯಿ ಗೆಸ್ಟ್ ಹೌಸ್ ನಿಂದ ಸುಮಾರು 50 ಮೀ. ದೂರದಲ್ಲೇ ಅನುರಾಗ್ ತಿವಾರಿ ಶವ ಪತ್ತೆಯಾಗಿತ್ತು. ದಾರಿ ಹೋಕರು ಇದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.[ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ, ತಿವಾರಿ ಸಾವಿಗೆ ಪ್ರತಾಪ್ ಕಂಬನಿ]

Misterious death of Anurag Tiwari suffered from Cardiac arrest?

ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಶವದ ಪ್ಯಾಂಟ್ ಜೇಬುಗಳನ್ನು ಪರಿಶೀಲಿಸಿದಾಗ, ಮೃತ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಅವರು ಕರ್ನಾಟಕದಲ್ಲಿ ಆಹಾರ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವುದರ ವಿವರಗಳು ಲಭ್ಯವಾದವು.[ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಶವವಾಗಿ ಪತ್ತೆ!]

ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ತಿವಾರಿ ಅವರು ಮೀರಾಬಾಯಿ ಗೆಸ್ಟ್ ಹೌಸ್ ನಲ್ಲಿ ಸುಮಾರು ಎರಡು ದಿನಗಳಿಂದ ಉಳಿದಿದ್ದರು ಎಂದು ತಿಳಿಸಿದ್ದಾರೆ. ನಾಲ್ಕು ವಾರಗಳ ರಜೆಯ ಮೇರೆಗೆ ತಮ್ಮ ಹುಟ್ಟೂರಾದ ಲಕ್ನೋಗೆ ಆಗಮಿಸಿದ್ದರು. ಲಕ್ನೋದಲ್ಲಿನ ಬಹಾರಿಚ್ ನಲ್ಲಿರುವ ತಮ್ಮ ನಿವಾಸದಲ್ಲಿ ಉಳಿದುಕೊಂಡಿದ್ದರು.

ಆದರೆ, ಅವರ ಪತ್ನಿಯೊಂದಿಗೆ ಕೆಲ ಕಾರಣಗಳಿಂದಾಗಿ ಜಗಳವಾಡಿಕೊಂಡ ತಿವಾರಿ, ಮುನಿಸಿಕೊಂಡು ಬಂದು ಅಲ್ಲಿಂದ ಸುಮಾರು 131 ಕಿ.ಮೀ. ದೂರವಿರುವ ಹಜರತ್ ಗಂಜ್ ಪ್ರಾಂತ್ಯದ ಮೀರಾಬಾಯಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರು.

ಈ ಗೆಸ್ಟ್ ಹೌಸ್ ನಿಂದ ಬುಧವಾರ ಮುಂಜಾನೆ ವಾಕಿಂಗ್ ಗೆ ಎಂದು ಹೊರಬಂದ ತಿವಾರಿಯವರಿಗೆ ಹೃದಯಾಘಾತವಾಗಿದೆ. ಹಾಗಾಗಿಯೇ ಅವರು, ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.

ಆದರೆ, ಕೆಲವು ಮಾಧ್ಯಮಗಳಲ್ಲಿ ತಿವಾರಿ ಗಲ್ಲದ ಮೇಲೆ ಗಾಯದ ಗುರುತು ಇದ್ದು, ಇದು ಕೆಲವು ಅನುಮಾನಗಳಿಗೆ ದಾಳಿ ಮಾಡಿಕೊಟ್ಟಿದೆ ಎಂದು ಹೇಳಿವೆ.

ಖಾದರ್ ಬೇಸರ: ತಮ್ಮ ಇಲಾಖೆಯಲ್ಲೇ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಯುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿಗೆ ಆಹಾರ ಸಚಿವ ಯು.ಟಿ. ಖಾದರ್, ಖೇದ ವ್ಯಕ್ತಪಡಿಸಿದ್ದಾರೆ. ತಿವಾರಿ ನಿಧನದ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಕೆಲ ವಾರಗಳ ಹಿಂದೆ ಉನ್ನತ ತರಬೇತಿಗಾಗಿ ತಿವಾರಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ತರಬೇತಿ ಮುಗಿದ ಮೇಲೆ ತಮ್ಮ ರಜೆಯನ್ನು ವಿಸ್ತರಿಸಿಕೊಂಡಿದ್ದರು. ಆದರೆ, ಅವರ ಸಾವಿನ ಸುದ್ದಿ ಕೇಳಬೇಕಾಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಅವರ ನಿಧನ ತುಂಬಾ ಬೇಸರ ತರಿಸಿದೆ'' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anurag Tiwari, an Karnataka Cadre IAS officer who found dead in Lucknow of Uttarpradesh, could have been suffered with cardiac arrest before his death, police says. But, a fresh wound over his chin lead the story towards another story says some media reports.
Please Wait while comments are loading...