ಬಂಧಿತ ಶಂಕಿತ ಉಗ್ರ ಫರ್ವೇಜ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಜೈಪುರ, ಮಾರ್ಚ್ 26: 18 ವರ್ಷಗಳಲ್ಲಿ 17 ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದೆ ಎಂದಿದ್ದ ಶಂಕಿತ ಉಗ್ರ ಫರ್ವೇಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಜೈಪುರದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮೂಲದ ಮೊಹಮದ್ ಫರ್ವೇಜ್ ನನ್ನು ಜೈಪುರ ಕೋರ್ಟ್ ನಾಲ್ಕು ದಿನಗಳ ಪೊಲೀಸ್ ವಶಕ್ಕೆ ನೀಡಿದೆ.
ಮೊಹಮದ್ ಫರ್ವೇಜ್ ನನ್ನು ಜೈಪುರ ಕೋರ್ಟ್ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ದೆಹಲಿ ಮೂಲದ ಸುಮಾರು 42 ವರ್ಷದ ಮೊಹಮದ್ ಫರ್ವೇಜ್ ಎಂಬಾತನ್ನು ರಾಜಸ್ಥಾನ ಪೊಲೀಸರು ಸೋಮವಾರ ಬಂಧಿಸಲಾಗಿದೆ.

ಈ ಹಿಂದೆಯೂ ಕೂಡ ಇದೇ ಮೊಹಮದ್ ಫರ್ವೇಜ್ ನನ್ನು 2017ರಲ್ಲಿ ಎನ್ ಐಎ ಅಧಿಕಾರಿಗಳು ರಾಷ್ಟ್ರದ್ರೋಹಿ ಚುಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿಸಿದ್ದರು ಎನ್ನಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಂತೆಯೇ ಇದೇ ಮೊಹಮದ್ ಫರ್ವೇಜ್ ಈ ಹಿಂದೆ ಸೈನಿಕರನ್ನು ಹನಿಟ್ರ್ಯಾಪ್ ಮಾಡಿ ರಹಸ್ಯ ಮಾಹಿತಿಗಳನ್ನು ಪಡೆದಿರುವ ಶಂಕೆ ಕೂಡ ಅಧಿಕಾರಿಗಳಿಗೆ ವ್ಯಕ್ತವಾಗಿದೆ.












Click it and Unblock the Notifications