ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಸ್ಥಿತಿ ಗಂಭೀರ
ಜೈಪುರ, ಮೇ 07: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಜೈಲು ಸೇರಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದ ಕಾರಣ ರಾಜಸ್ಥಾನದ ಜೋಧ್‌ಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇದೀಗ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ 2018ರ ಅಕ್ಟೋಬರ್ 1 ರಂದು ಜೋಧಪುರ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿತ್ತು.

ಚಹಾದಂಗಡಿಯಲ್ಲಿ ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಸಾರಾಮ್ ಈಗ ಸರಿ ಸುಮಾರು ಸಾವಿರಾರು ಕೋಟಿ ರು ಒಡೆಯ, 16 ವರ್ಷ ವಯಸ್ಸಿನ ಯುವತಿ ಮೇಲೆ ಜೋಧಪುರದ ಆಶ್ರಮದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲುವಾಸಿಯಾಗಿದ್ದಾರೆ.
ಆಗಸ್ಟ್ 15, 2013ರಲ್ಲಿ ಜೋಧಪುರದ ಮಾಣಾಯಿ ಆಶ್ರಮದಲ್ಲಿ 16 ವರ್ಷ ವಯಸ್ಸಿನ ಯುವತಿಯನ್ನು ಆಗಸ್ಟ್ 15ರಂದು ಕರೆಸಿಕೊಂಡು ಅತ್ಯಾಚಾರ ಎಸಗಿದ ಅಸಾರಾಮ್ ಬಾಪು.












Click it and Unblock the Notifications