ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು; ಸಚಿನ್ ಪೈಲೆಟ್ 3 ಬೇಡಿಕೆಗಳು

ಜೈಪುರ, ಜುಲೈ 13 : ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಸೋಮವಾರ ಮತ್ತೊಂದು ತಿರುವು ಪಡೆದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನಗೊಂಡಿರುವ ಸಚಿನ್ ಪೈಲೆಟ್ ದೆಹಲಿಯಲ್ಲಿದ್ದರೂ ರಾಹುಲ್ ಗಾಂಧಿ ಭೇಟಿ ಮಾಡಲು ನಿರಾಕರಿಸಿದ್ದಾರೆ.

Recommended Video

      Rameshwaram - A Spiritual Journey To The Divine Site Of Tamil Nadu | Oneindia Kannada

      ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಎಂದು ಅವರ ಆಪ್ತ ಶಾಸಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಶೋಕ್ ಗೆಹ್ಲೋಟ್ ಅಸಮಧಾನಗೊಂಡಿರುವ ಸಚಿನ್ ಪೈಲೆಟ್ ಬೇಡಿಕೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

      ಅಶೋಕ್ ಗೆಹ್ಲೋಟ್ ಸೋಮವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದರು. 96 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚಿನ್ ಪೈಲೆಟ್ ತಮ್ಮ ಬೆಂಬಲಕ್ಕೆ 30 ಶಾಸಕರು ಇದ್ದಾರೆ ಎಂದು ಹೇಳುತ್ತಿದ್ದರು. ಆದರೆ, ಅಷ್ಟು ಶಾಸಕರು ಇಲ್ಲ ಎಂಬುದು ಈ ಸಭೆಯ ಬಳಿಕ ಬಹಿರಂಗವಾಗಿದೆ.

      ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶೋಕ್ ಗೆಹ್ಲೋಟ್ ನೀಡಿರುವ ಹೇಳಿಕೆ ಸಚಿನ್ ಪೈಲೆಟ್‌ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.

      4 ಶಾಸಕರಿಗೆ ಸಚಿವ ಸ್ಥಾನ

      4 ಶಾಸಕರಿಗೆ ಸಚಿವ ಸ್ಥಾನ

      ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ತಮ್ಮ ಆಪ್ತರಾದ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಈಗಾಗಲೇ ಅಶೋಕ್ ಗೆಹ್ಲೋಟ್‌ಗೆ ತಿಳಿಸಲಾಗಿದೆ.

      ಎರಡು ಪ್ರಭಾವಿ ಖಾತೆಗಳು

      ಎರಡು ಪ್ರಭಾವಿ ಖಾತೆಗಳು

      ತಮ್ಮ ಆಪ್ತರಾದ ನಾಲ್ವರು ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಬೇಡಿಕೆ ಇಟ್ಟಿರುವ ಸಚಿನ್ ಪೈಲೆಟ್ ಗೃಹ ಮತ್ತು ಹಣಕಾಸು ಖಾತೆಯನ್ನು ತಮ್ಮ ಬಣಕ್ಕೆ ನೀಡಬೇಕು ಎಂದು 2ನೇ ಬೇಡಿಕೆ ಇಟ್ಟಿದ್ದಾರೆ.

      ಕಾಂಗ್ರೆಸ್ ಅಧ್ಯಕ್ಷ ಸ್ಥಾನ

      ಕಾಂಗ್ರೆಸ್ ಅಧ್ಯಕ್ಷ ಸ್ಥಾನ

      ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತಮಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಮೂರು ಬೇಡಿಕೆಗಳಿಗೆ ಅಶೋಕ್ ಗೆಹ್ಲೋಟ್ ಮತ್ತು ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಲಿದ್ದಾರೆಯೇ? ಕಾದು ನೋಡಬೇಕು.

      ಎಷ್ಟು ಶಾಸಕರು ಇದ್ದಾರೆ?

      ಎಷ್ಟು ಶಾಸಕರು ಇದ್ದಾರೆ?

      ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಧಾನಗೊಂಡಿರುವ ಸಚಿನ್ ಪೈಲೆಟ್ ಬಣದಲ್ಲಿ 30ಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜಸ್ಥಾನ ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಅವರ ಜೊತೆ ಇರುವುದು 12 ಶಾಸಕರು ಮಾತ್ರ. ಅಶೋಕ್ ಗೆಹ್ಲೋಟ್ ಸೋಮವಾರ ನಡೆಸಿದ ಸಿಎಲ್‌ಪಿ ಸಭೆಯಲ್ಲಿ 96 ಶಾಸಕರು ಪಾಲ್ಗೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+