ರಾಜಸ್ಥಾನದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ದಾಟೇ ಬಿಡ್ತು, ಮುಂದೇನು ಗತಿ?
ಬೆಂಗಳೂರು, ಜೂನ್ 4: ರಾಜಸ್ಥಾನದಲ್ಲಿ ಗರಿಷ್ಠ ಉಷ್ಣಾಂಶ ಕೊನೆಗೂ 50 ಡಿಗ್ರಿ ಸೆಲ್ಸಿಯಸ್ ದಾಟೇ ಬಿಡ್ತು. ಇನ್ನೂ ಮಳೆ ಬಾರದಿದ್ದರೆ ಅಲ್ಲಿನ ಜನತೆಗೆ ವಾಸ ಮಾಡುವುದು ಕೂಡ ಕಷ್ಟಕರವಾಗಲಿದೆ.
ಈಗಲೇ ಮನೆಯಿಂದ ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಸ್ಥಾನದ ಚುರುವಿನಲ್ಲಿ 50.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ರಾಜಸ್ಥಾನದಲ್ಲಿ ಗರಿಷ್ಠ ಉಷ್ಣಾಂಶ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 10 ನಗರಗಳ ಪೈಕಿ ದೇಶದ 4 ನಗರಗಳಿವೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಅದರಲ್ಲಿ ಎರಡು ಪ್ರದೇಶಗಳು ರಾಜಸ್ಥಾನದ್ದಾಗಿವೆ.

ಶ್ರೀಗಂಗಾನಗರದಲ್ಲಿ 48.8 ಡಿಗ್ರಿ ಸೆಲ್ಸಿಯಸ್, ಬಿಕಾನೇರ್‌ನಲ್ಲಿ 48.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ಫಾಲೋಡಿಯಲ್ಲಿ 48 ಡಿಗ್ರಿ ಸೆಲ್ಸಿಯಸ್, ಸವಾಯ್ ಮಾಧೋಪುರದಲ್ಲಿ 47.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದಿಷ್ಟು ಹೊರತುಪಡಿಸಿ ತೆಲಂಗಾಣ, ತಮಿಳುನಾಡು, ಕರ್ನಾಟಕದಲ್ಲಿ ಕೂಡ ಬಿಸಿ ಗಾಳಿ ಬೀಸುತ್ತಿದೆ.












Click it and Unblock the Notifications