ಮಾಲ್ ಎದುರು ಕಾಂಗ್ರೆಸ್ ಮಾಜಿ ಸಂಸದನ ಪುತ್ರನ ಶವ ಪತ್ತೆ
ಆಳ್ವಾರ್, ಅಕ್ಟೋಬರ್ 29: ಕಾಂಗ್ರೆಸ್‌ನ ಮಾಜಿ ಸಂಸದರೊಬ್ಬರ ಪುತ್ರನ ಮೃತದೇಹ ಆಳ್ವಾರ್ ಜಿಲ್ಲೆಯ ಮಾಲ್ ಬಳಿ ಪತ್ತೆಯಾಗಿದೆ.
ರಾಜಸ್ಥಾನ ಹೊರವಲಯದ ಆಳ್ವಾರ್ ಜಿಲ್ಲೆಯ ಕ್ರಾಸ್ ಪಾಯಿಂಟ್ ಮಾಲ್ ಬಳಿ ಮೃತದೇಹ ದೊರೆತಿದೆ.ಕಾಂಗ್ರೆಸ್‌ನ ಮಾಜಿ ಸಂಸದ ಘಾಸಿ ರಾಮ್ ಯಾದವ್ ಅವರ ಮಗ ಮಹೇಂದ್ರ ಕುಮಾರ್ ಯಾದವ್ ಮೃತಪಟ್ಟವರು.

ಮಾಲ್ನ ಹೊರಗಡೆ ಬೆಂಚ್ ಒಂದರ ಮೇಲೆ ಮಲಗಿ ನಿದ್ರಿಸಿದ್ದರು. ಅದರಿಂದ ಕೆಳಗೆ ಬಿದ್ದು ಸತ್ತಿದ್ದಾರೆ ಎಂದು ಪ್ರಾಥಮಿಕ ವರದಿ ಹೇಳಿದೆ. ಮಹೇಂದ್ರ ಕುಮಾರ್ ಯಾದವ್ ಮದ್ಯಪಾನ ಮಾಡಿ ಅಲ್ಲಿ ಮಲಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications