ರಾಜಸ್ಥಾನ: ಗೇಂ ಓವರ್ ಎನ್ನುವಷ್ಟರಲ್ಲಿ ಗೆಹ್ಲೋಟ್ ಸರಕಾರಕ್ಕೆ ಹೊಸ ಬಾಂಬ್ ಸಿಡಿಸಿದ ಬಿಜೆಪಿ

ಜೈಪುರ, ಜುಲೈ 16: ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಬಣದ ಬಂಡಾಯದ ಕಾವು ತಣ್ಣಗಾಗುವಷ್ಟರಲ್ಲಿ ಬಿಜೆಪಿಯ ಕೇಂದ್ರ ಸಚಿವರೂ, ಹಿರಿಯ ಮುಖಂಡರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

Recommended Video

      Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

      ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ರೀತಿಯಲ್ಲೇ ಸಚಿನ್ ಪೈಲಟ್ ಕೂಡಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಗೆ ಸ್ವತಃ ಪೈಲಟ್ ತೆರೆ ಎಳೆದಿದ್ದರು. "ಬಿಜೆಪಿಯನ್ನು ಸೋಲಿಸಲು ಪ್ರಯತ್ನ ಪಟ್ಟವನು ನಾನು, ಮತ್ತೆ ಆ ಪಕ್ಷಕ್ಕೆ ಸೇರುತ್ತೇನಾ'ಎಂದು ಪೈಲಟ್ ಪ್ರತಿಕ್ರಿಯೆ ನೀಡಿದ್ದರು.

      ಸಚಿನ್ ಪೈಲಟ್ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೃಧು ಧೋರಣೆ ಹೊಂದಿದ್ದರೂ, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಪೈಲಟ್ ವಿರುದ್ದ ಕಿಡಿಕಾರುತ್ತಲೇ ಇದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕೆ ನನ್ನಲ್ಲಿ ಸಾಕ್ಷ್ಯಾಧಾರವಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

      ಇವೆಲ್ಲದರ ನಡುವೆ 'ಪಂದ್ಯ ಇನ್ನೂ ಮುಗಿದಿಲ್ಲ' ಎಂದು ಬಿಜೆಪಿ ಸಚಿವರು ಹೇಳಿರುವುದು, ರಾಜಸ್ಥಾನದಲ್ಲಿ ಎಲ್ಲವೂ ಸರಿದಾರಿಗೆ ಬಂದಿಲ್ಲ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.

      ಹರ್ಯಾಣ ಸರಕಾರದ ಆತಿಥ್ಯ ಬಿಟ್ಟು ಜೈಪುರಕ್ಕೆ ವಾಪಸ್ ಬರಲಿ

      ಹರ್ಯಾಣ ಸರಕಾರದ ಆತಿಥ್ಯ ಬಿಟ್ಟು ಜೈಪುರಕ್ಕೆ ವಾಪಸ್ ಬರಲಿ

      "ಸಚಿನ್ ಪೈಲಟ್, ಬಿಜೆಪಿ ಸೇರುವುದಿಲ್ಲ ಎಂದಾದರೆ, ಹರ್ಯಾಣ ಸರಕಾರದ ಆತಿಥ್ಯ ತೆಗೆದುಕೊಳ್ಳುವುದನ್ನು ಬಿಟ್ಟು ಜೈಪುರಕ್ಕೆ ವಾಪಸ್ ಬರಲಿ"ಎಂದು ಕಾಂಗ್ರೆಸ್ ವಕ್ತರಾ ರಣದೀಪ್ ಸರ್ಜೇವಾಲ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಪೈಲಟ್ ಬಗ್ಗೆ ವಿರೋಧ ಹೆಚ್ಚುತ್ತಿದ್ದರೂ, ಕಾಂಗ್ರೆಸ್ ಹೈಕಮಾಂಡ್, ಅವರಿಗೆ ರಾಷ್ಟ್ರೀಯ ನಾಯಕತ್ವ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

      ಅಸಲಿಗೆ ಆಟ ಇನ್ನೂ ಮುಗಿದಿಲ್ಲ

      ಅಸಲಿಗೆ ಆಟ ಇನ್ನೂ ಮುಗಿದಿಲ್ಲ

      ಬಂಡಾಯ ತಣ್ಣಗಾಗಿಯಿತು ಎನ್ನುವಷ್ಟರಲ್ಲಿ ಬಿಜೆಪಿಯ ಹಿರಿಯ ಮುಖಂಡ, ರಾಜಸ್ಥಾನದವರೇ ಆದ ಗಜೇಂದ್ರ ಸಿಂಗ್ ಶಿಖಾವತ್, "ಅಸಲಿಗೆ ಆಟ ಇನ್ನೂ ಮುಗಿದಿಲ್ಲ"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ರಾಜಸ್ಥಾನದ ಎಲ್ಲಾ ಬೆಳವಣಿಗೆಯ ನಡುವೆ, ಬಿಜೆಪಿ ನಾಯಕನ ಈ ಹೇಳಿಕೆ, ಕಾಂಗ್ರೆಸ್ಸಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

      ಪೈಲಟ್ ಮತ್ತು ಅವರ ಬೆಂಬಲಿತ ಶಾಸಕರು

      ಪೈಲಟ್ ಮತ್ತು ಅವರ ಬೆಂಬಲಿತ ಶಾಸಕರು

      "ರಾಜಸ್ಥಾನದಲ್ಲಿ ಗೆಹ್ಲೋಟ್ ಸರಕಾರ ಬಹುಮತ ಸಾಬೀತು ಪಡಿಸಲು ವಿಫಲರಾಗಲು ಬೇಕಾಗುವ ಎಲ್ಲಾ ಕಾರ್ಯತಂತ್ರವನ್ನು ಪ್ರಯೋಗಿಸಲಾಗುವುದು"ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಪೈಲಟ್ ಮತ್ತು ಅವರ ಬೆಂಬಲಿತ ಶಾಸಕರು, ಗೆಹ್ಲೋಟ್ ಸರಕಾರದ ವಿರುದ್ದ ಮತ ಚಲಾಯಿಸುವುದೂ ಸೇರಿದಂತೆ, ಹಲವು ಕಾರ್ಯತಂತ್ರವನ್ನು ಬಿಜೆಪಿ ಈಗಾಗಲೇ ಚರ್ಚಿಸಿದೆ ಎಂದು ಹೇಳಲಾಗುತ್ತಿದೆ.

      ಗೇಂ ಓವರ್ ಎನ್ನುವಷ್ಟರಲ್ಲಿ ಗೆಹ್ಲೋಟ್ ಸರಕಾರಕ್ಕೆ ಹೊಸ ಬಾಂಬ್

      ಗೇಂ ಓವರ್ ಎನ್ನುವಷ್ಟರಲ್ಲಿ ಗೆಹ್ಲೋಟ್ ಸರಕಾರಕ್ಕೆ ಹೊಸ ಬಾಂಬ್

      "ಸಚಿನ್ ಪೈಲಟ್ ಏನನ್ನು ಬಯಸುತ್ತಿದ್ದಾರೆ ಮತ್ತು ಅವರಿಗೆ ಎಷ್ಟು ಶಾಸಕರ ಬಲವಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕನಂತರ ನಾವು ಮುಂದಿನ ಹೆಜ್ಜೆಯನ್ನು ಇಡಲಿದ್ದೇವೆ" ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಗೆಹ್ಲೋಟ್ ಬಣದ ನಾಯಕರೊಬ್ಬರ ಪ್ರಕಾರ, ಪೈಲಟ್ ಜೊತೆ ಗುರುತಿಸಿಕೊಂಡಿರುವ ಶಾಸಕರು ಒಬ್ಬೊಬ್ಬರಾಗಿಯೇ ವಾಪಸ್ ಬರುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+