ಗರ್ಭಿಣಿಯ ಕೊಂದು ಹೊಟ್ಟೆಯನ್ನು ಬಗೆದು ಮಗು ಹೊರ ತೆಗೆದ ರಾಕ್ಷಸಿ

ವಾಷಿಂಗ್ಟನ್, ಮೇ 17: ಮಾರ್ಲೆನ್ ಒಕೊವಾ ಲೋಪೆಜ್ ಗೆ ಒಂಬತ್ತು ತಿಂಗಳು ತುಂಬಿತ್ತು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು.

ಮಗುವಿನ ಭವಿಷ್ಯದ ಕುರಿತು ನೂರಾರು ಕನಸು ಹೊತ್ತವಳು, ಮಗು ಹುಟ್ಟುವ ಮುನ್ನವೇ ಅದಕ್ಕೆ ಬೇಕಾಗುವ ಬಟ್ಟೆಗಳ ಆಯ್ಕೆ, ಸಂಗ್ರಹದಲ್ಲಿ ಮುಳುಗಿದ್ದಳು ಆದರೆ ಅದೇ ಬಟ್ಟೆ ತನ್ನ ಪ್ರಮಾಣವನ್ನೇ ಕಸಿದು ಮಗುವಿನಿಂದ ಬಲವಂತವಾಗಿ ಬೇರೆ ಮಾಡುತ್ತಿದೆ ಎನ್ನುವ ಅರಿವು ಆಕೆಗೆ ಇರಲೇ ಇಲ್ಲ.

ಆಕೆಯನ್ನು ಕೊಲೆ ಮಾಡಿ ಶಿಶುವನ್ನು ಕತ್ತರಿಸಿ ತೆಗೆದು ಅಮಾನವೀಯ ಘಟನೆ ನಡೆದೇ ಹೋಗಿದೆ.ಮಾರ್ಲೆನ್ ಆನ್‌ಲೈನ್ ಮೂಲಕ ಮಕ್ಕಳ ಬಟ್ಟೆ ವ್ಯಾಪಾರಿಯಾಗಿದ್ದ ಕ್ಲಾರಿಸಾ ಎನ್ನುವವರನ್ನು ಪರಿಚಯ ಮಾಡಿಕೊಂಡಿದ್ದರು. ಮಗುವಿನ ಉಡುಪು ಖರೀದಿಸಲೆಂದು ಅವರ ಮನೆಗೆ ಹೋದಾಗ ಕ್ಲಾರಿಸಾ ಮೆರ್ಲೆನ್‌ನ್ನು ಕೊಲೆ ಮಾಡಿದ್ದಾಳೆ.

Woman charged with strangling teen mom cutting baby from womb

ಕ್ಲಾರಿಸಾ ಮಾರ್ಲೆನ್‌ ಕೊಲೆ ಮಾಡಲು ಕಾರಣ: ಎರಡು ವರ್ಷಗಳ ಹಿಂದೆ ಕ್ಲಾರಿಸಾ ಮಗ ಸಹಜವಾಗಿಯೇ ಸಾವನ್ನಪ್ಪಿದ್ದ, ಆಕೆಗೆ ಮತ್ತೊಂದು ಮಗುವನ್ನು ಪಡೆಯಬೇಕೆಂಬ ಹಂಬಲವಿತ್ತು.

ಕ್ಲಾರಿಸಾಳನ್ನು ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಿ ಆಕೆಯ ಮಗುವನ್ನು ತಾನು ಸಾಕಿ ಬಿಡಬೇಕು ಎನ್ನುವ ಹುಚ್ಚು ಧೈರ್ಯ ಮಾಡಿದ್ದಳು.

ಈ ವೇಳೆ ಆಕೆ ಮಾರ್ಲೆನ್‍ಳನ್ನು ಕೊಲೆ ಮಾಡಿ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಹೊರತೆಗೆದಿದ್ದಾಳೆ.

ಮಾರ್ಲೆನ್‌ನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮಗುವನ್ನು ಹೊಟ್ಟೆಯಿಂದ ಹೊರ ತೆಗೆದಿದ್ದಾಳೆ. ಮಾರ್ಲೆನ್ ಶವವನ್ನು ಮನೆಯ ಹಿಂಬದಿ ಇರುವ ಕಸದ ತೊಟ್ಟಿಗೆ ಬಿಸಾಡಿದ್ದಾಳೆ. ತಕ್ಷಣ ಮಗು ಉಸಿರಾಡುತ್ತಿರಲಿಲ್ಲ.

ಮೈಯೆಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು. ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ ತನ್ನ ಮಗುವಿಗೇ ಏನೋ ಆಗಿದೆ ಎಂದು ಹೇಳಿಕೊಂಡಿದ್ದಳು, ಯುವಕನೊಬ್ಬನ ಸಹಾಯದಿಂದ ಆಸ್ಪತ್ರೆಗೂ ಸೇರಿಸಿದ್ದರು.

ಮಗುವಿನ ಅಂತ್ಯಸಂಸ್ಕಾರಕ್ಕೆಂದು ತಯಾರಿ ಮಾಡಿಕೊಳ್ಳುತ್ತಿರುವುದನ್ನು ಕಂಡು ಆಕೆ ಮಗುವಿನ ತಾಯಿಯಾಗಿರಲು ಸಾಧ್ಯವೇ ಇಲ್ಲ ಎಂದು ಪೊಲೀಸರಿಗೆ ಅನುಮಾನ ಬಂದಿತ್ತು.

ಬಳಿಕ ಮಾರ್ಲೆನ್ ಕಾಣೆಯಾಗಿರುವುದು, ಕ್ಲಾರಿಸಾಳನ್ನು ಫೇಸ್‌ಬುಕ್‌ನಲ್ಲಿ ಸಂಪರ್ಕಿಸಿರುವುದು ಎಲ್ಲವೂ ಮಾರ್ಲೆನ್ ಸ್ನೇಹಿತರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಕ್ಲಾರಿಸಾ ಮನೆಗೆ ಬಂದು ಪರಿಶೀಲಿಸಿದಾಗ ಮನೆಯ ಹಿಂದೆ ಕಸದ ತೊಟ್ಟಿಯಲ್ಲಿ ಮಹಿಳೆಯ ಶವ ಸಿಕ್ಕಿದೆ. ಕ್ಲಾರಿಸಾಳೆ ಕೊಲೆಗಾರ್ತಿ ಎನ್ನುವುದು ಬಹಿರಂಗಗೊಂಡಿದೆ. ಮಗುವಿಗೆ ಸಧ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+