ಇರಾನ್‌ ಹಿಟ್‌ಲಿಸ್ಟ್‌ನಲ್ಲಿವೆ ಡೊನಾಲ್ಡ್‌ ಟ್ರಂಪ್ ಆಸ್ತಿಗಳು: ಉಪಾಯ ಏನು?

ಟೆಹ್ರಾನ್, ಜನವರಿ 8: ಇರಾನ್ ಹಿಟ್‌ಲಿಸ್ಟ್‌ನಲ್ಲಿ ಡೊನಾಲ್ಡ್ ಟ್ರಂಪ್ ಆಸ್ತಿಗಳಿದ್ದು, ಅವರ ರೆಸಾರ್ಟ್, ಹೋಟೆಲ್, ಗಾಲ್ಫ್‌ಕೋರ್ಸ್‌ ಮೇಲೆ ದಾಳಿಗೆ ಇರಾನ್ ಸಂಚು ರೂಪಿಸಿದೆ.

ತನ್ನ ಸೇನೆಯ ಉನ್ನತ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶದಿಂದ ಕುದಿಯುತ್ತಿರುವ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಕೆಲವೊಂದು ಸ್ಥಳಗಳನ್ನು ಗುರುತು ಮಾಡಿದೆ.

ಸುಲೈಮಾನಿ ಹತ್ಯೆಗೆ ಆದೇಶಿಸುವ ವೇಳೆ ಟ್ರಂಪ್ ಅವರು ಫ್ಲೋರಿಡಾದಲ್ಲಿರುವ ತಮ್ಮ ಒಡೆತನದ ಮಾರ್ ಎ ಲಾಗೋ ರೆಸಾರ್ಟ್‌ನಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆಯಲ್ಲಿದ್ದರು.

ಡೊನಾಲ್ಡ್ ಟ್ರಂಪ್ ಖಾಸಗಿ ಆಸ್ತಿಗಳ ಮೇಲೆ ಕಣ್ಣು

ಡೊನಾಲ್ಡ್ ಟ್ರಂಪ್ ಖಾಸಗಿ ಆಸ್ತಿಗಳ ಮೇಲೆ ಕಣ್ಣು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ಆಸ್ತಿಗಳೇ ಸಾಕಷ್ಟು ಸಂಖ್ಯೆಯಲ್ಲಿ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಇರಾನ್‌ಗೆ ಅಮೆರಿಕ ಸರ್ಕಾರ ಅಥವಾ ಅಲ್ಲಿನ ಜನರಿಗಿಂತ ಟ್ರಂಪ್ ಮೇಲೆ ಕೋಪವಿದೆ. ಹೀಗಾಗಿ ಟ್ರಂಪ್ ಅವರನ್ನು ಹತ್ಯೆ ಮಾಡಿದವರಿಗೆ 575 ಕೋಟಿ ರೂ ಬಹುಮಾನ ಘೋಷಿಸಿದೆ.

ಟ್ರಂಪ್ ಆಸ್ತಿಗಳ ವಿವರವಿರುವ ಪತ್ರಿಕೆಯ ಲಿಂಕ್ ಶೇರ್

ಟ್ರಂಪ್ ಆಸ್ತಿಗಳ ವಿವರವಿರುವ ಪತ್ರಿಕೆಯ ಲಿಂಕ್ ಶೇರ್

ಟ್ರಂಪ್ ಆಸ್ತಿಗಳೇ ತನ್ನ ಹಿಟ್‌ಲಿಸ್ಟ್‌ನಲ್ಲಿರುವ ಸ್ಪಷ್ಟ ಸುಳಿವನ್ನು ಬಿಟ್ಟುಕೊಟ್ಟಿದೆ. ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರ ಸಲಹೆಗಾರ ಹೆಸಾಮೆದ್ದಿನ್ ಆಶೆನಾ ಅವರು ಟ್ರಂಪ್ ಆಸ್ತಿಗಳಿಗೆ ಸಂಬಂಧಿಸಿದ ಪತ್ರಿಕೆಯೊಂದರ ಲಿಂಗ್‌ನ್ನು ಶೇರ್ ಮಾಡಿದ್ದಾರೆ. ಇದರ ಮೂಲಕ ಇವು ಇರಾನ್ ಹಿಟ್‌ ಲಿಸ್ಟ್‌ನಲ್ಲಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಸುಲೈಮಾನಿ ಅಂತಿಮಯಾತ್ರೆ ವೇಳೆ 56 ಮಂದಿ ಸಾವು

ಸುಲೈಮಾನಿ ಅಂತಿಮಯಾತ್ರೆ ವೇಳೆ 56 ಮಂದಿ ಸಾವು

ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್ ಕಮಾಂಡರ್ ಖಾಸಿಂ ಸುಲೈಮಾನಿಯ ಅಂತಿಮ ಯಾತ್ರೆ ವೇಳೆ ಲಕ್ಷಾಂತರ ಜನ ಸೇರಿದ್ದರಿಂದ ಉಂಟಾದ ನೂಕುನುಗ್ಗಲಿನಿಂದಾಗಿ 56ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 48 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಸುಲೈಮಾನಿ ಮುಖದ ಆಕೃತಿಯಲ್ಲಿ ನಿಂತು ಗೌರವ

ಸುಲೈಮಾನಿ ಮುಖದ ಆಕೃತಿಯಲ್ಲಿ ನಿಂತು ಗೌರವ

ಜನವರಿ ಮೂರರಂದು ಇರಾಕ್ ರಾಜಧಾನಿ ಬಾಗ್ದಾದ್ ಏರ್‌ಪೋರ್ಟ್‌ನಲ್ಲಿ ಅಮೆರಿಕ ಸೇನೆಗಳು ದಾಳಿ ಮಾಡಿ ಕೊಂದು ಹಾಕಿದ ಇರಾನ್ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿಯ ಮುಖದ ಆಕೃತಿಯಲ್ಲಿ ನಿಲ್ಲುವ ಮೂಲಕ ಇರಾನ್ ಯೋಧರು ಗೌರವ ಸಲ್ಲಿಸಿದ್ದಾರೆ.

ಟ್ರಂಪ್ ಹೋಟೆಲ್, ರೆಸಾರ್ಟ್‌ ಮೇಲೆ ದಾಳಿಗೆ ಸಂಚು

ಟ್ರಂಪ್ ಹೋಟೆಲ್, ರೆಸಾರ್ಟ್‌ ಮೇಲೆ ದಾಳಿಗೆ ಸಂಚು

ನ್ಯೂಯಾರ್ಕ್‌ನಲ್ಲಿರುವ ಟ್ರಂಪ್ ಹೋಟೆಲ್‌ಗಳು, ಅಮೆರಿಕಾದ್ಯಂತ ಇರುವ ರೆಸಾರ್ಟ್‌ಗಳು, ಅಮೆರಿಕ ಹಾಗೂ ಬ್ರಿಟನ್‌ನಲ್ಲಿರುವ ಗಾಲ್ಫ್ ಕೋರ್ಸ್‌ಗಳು ಇರನ್ ಹಿಟ್‌ಲಿಸ್ಟ್‌ನಲ್ಲಿದೆ. ಇದರ ಜೊತೆಗೆ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನವನ್ನೂ ಈ ಪಟ್ಟಿಗೆ ಇರಾನ್ ಸೇರಿಸಿದೆ ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+