ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸಾರ್ವಕಾಲಿಕ ದಾಖಲೆ ಮುಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ

|
Google Oneindia Kannada News

ಕೊಲಂಬೋ, ಮೇ 24: ವಿದೇಶಿ ವಿನಿಮಯ ಮೀಸಲು ಕೊರತೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಇಂಧನ ಬೆಲೆಯನ್ನು ಏರಿಕೆ ಮಾಡಿದೆ. ಮಂಗಳವಾರ ದೇಶದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 420 ರೂ., ಡೀಸೆಲ್ 400 ರೂ.ಗೆ ಏರಿಕೆಯಾಗಿದೆ.

ಪೆಟ್ರೋಲ್ ಬೆಲೆಯನ್ನು ಒಂದೇ ಬಾರಿ ಶೇಕಡ 24.3 ರಷ್ಟು ಮತ್ತು ಡೀಸೆಲ್ ಬೆಲೆಯನ್ನು ಶೇಕಡ 38.4ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರ ಶ್ರೀಲಂಕಾದಲ್ಲಿ ಸಾರ್ವಕಾಲಿಕ ಗರಿಷ್ಠ ಏರಿಕೆ ಕಂಡಿದೆ.

Sri Lanka Crisis- ಸರಕಾರಿ ನೌಕರರಿಗೆ ಸಂಬಳ ನೀಡಲು ನೋಟು ಮುದ್ರಣಕ್ಕೆ ಮುಂದಾದ ಶ್ರೀಲಂಕಾ Sri Lanka Crisis- ಸರಕಾರಿ ನೌಕರರಿಗೆ ಸಂಬಳ ನೀಡಲು ನೋಟು ಮುದ್ರಣಕ್ಕೆ ಮುಂದಾದ ಶ್ರೀಲಂಕಾ

ಏಪ್ರಿಲ್ 19ರ ಬಳಿಕ ಎರಡನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಆಕ್ಟೇನ್ 92 ಪೆಟ್ರೋಲ್ ಬೆಲೆಯನ್ನು ಒಂದೇ ಬಾರಿ 82 ಶ್ರೀಲಂಕಾ ರೂಪಾಯಿಗಳು ಹೆಚ್ಚಳವಾಗಿದ್ದು, ಡೀಸಲ್ ಬೆಲೆ ಒಂದೇ ಬಾರಿಗೆ 111 ರೂಪಾಯಿ ಹೆಚ್ಚಳವಾಗಿದೆ. ರಾಜ್ಯ ಇಂಧನ ಘಟಕ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಬೆಲೆ ಹೆಚ್ಚಳ ಮಾಡಿ ಆದೇಶಿಸಿದೆ. ಪೆಟ್ರೋಲ್, ಡೀಸೆಲ್ ಕೊರತೆಯಿಂದಾಗಿ ಬಂಕ್‌ಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಯ 484 ಫೋಟೋ, 73 ವಿಡಿಯೊ ಸಂಗ್ರಹ ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಯ 484 ಫೋಟೋ, 73 ವಿಡಿಯೊ ಸಂಗ್ರಹ

ಭಾರತದ ತೈಲ ಪ್ರಮುಖ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಶ್ರೀಲಂಕಾದ ಅಂಗಸಂಸ್ಥೆಯಾದ ಲಂಕಾ ಐಒಸಿ ಕೂಡ ಇಂಧನದ ಚಿಲ್ಲರೆ ಬೆಲೆಯನ್ನು ಹೆಚ್ಚಿಸಿದೆ. "ನಾವು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಗೆ ಹೊಂದಿಸಲು ನಮ್ಮ ಬೆಲೆ ಹೆಚ್ಚಳ ಮಾಡಿದ್ದೇವೆ" ಎಂದು ಶ್ರೀಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಇಓ ಮನೋಜ್ ಗುಪ್ತಾ ತಿಳಿಸಿದ್ದಾರೆ.

ಇಂಧನ ಸಚಿವ ಕಾಂಚನಾ ವಿಜೆಶೇಖರ ಮಾಹಿತಿ

ಮಂಗಳವಾರ ಮುಂಜಾನೆ 3 ಗಂಟೆಯಿಂದ ಇಂಧನ ಬೆಲೆ ಪರಿಷ್ಕರಿಸಲಾಗುವುದು. ಕ್ಯಾಬಿನೇಟ್ ಅನುಮೋದಿಸಿದ ಇಂಧನ ಬೆಲೆ ಸೂತ್ರವನ್ನು ಪರಿಷ್ಕರಣೆಗೆ ಅನ್ವಯಿಸಲಾಗಿದೆ ಎಂದು ಶ್ರೀಲಂಕಾ ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ಪೆಟ್ರೋಲಿಯಂ ಉತ್ಪನ್ನಗಳ ಆಮದು, ಸಾಗಾಟ, ವಿತರಣೆ ಮತ್ತು ತೆರಿಗೆ ವೆಚ್ಚವನ್ನು ಒಳಗೊಂಡಿರುತ್ತದೆ. ಇಂಧನ ದರ ಹೆಚ್ಚಳಕ್ಕೆ ಅನುಗುಣವಾಗಿ ಸಾರಿಗೆ ಅಥವಾ ಇತರೆ ಸೇವಾ ಶುಲ್ಕಗಳ ಪರಿಷ್ಕರಣೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪ್ರತಿ 15 ದಿನ ಅಥವಾ ತಿಂಗಳಿಗೊಮ್ಮೆ ಪರಿಷ್ಕರಣೆಗೆ ಅವಕಾಶ ನೀಡಲಾಗುವುದು" ಎಂದು ಸಚಿವರು ತಿಳಿಸಿದ್ದಾರೆ.

ವೆಚ್ಚವನ್ನು ತಗ್ಗಿಸುವ ಕ್ರಮವಾಗಿ, ತೀರಾ ಅಗತ್ಯ ಇರುವವರನ್ನು ಹೊರತು ಪಡಿಸಿ ಉಳಿದ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ನೌಕರರ ಓಡಾಟದ ಇಂಧನ ಉಳಿಸಲು ಇದು ಸಹಾಯಕವಾಗುವುದು ಎಂದು ಸಚಿವರು ಹೇಳಿದ್ದಾರೆ.

ಬೆಲೆ ಏರಿಕೆಯಿಂದ ಕಂಗೆಟ್ಟ ಶ್ರೀಲಂಕಾ

ಬೆಲೆ ಏರಿಕೆಯಿಂದ ಕಂಗೆಟ್ಟ ಶ್ರೀಲಂಕಾ

ಇಂಧನ ಬೆಲೆ ಹೆಚ್ಚಾಗುತ್ತಿದ್ದಂತೆ ಆಟೋ ರಿಕ್ಷಾ ಚಾಲಕರು ದರ ಹೆಚ್ಚಳ ಮಾಡಿದ್ದು ಮೊದಲ 1 ಕಿ. ಮೀ.ಗೆ ಪ್ರಯಾಣಕ್ಕೆ 90 ರೂಪಾಯಿಗಳಿಗೆ ಮತ್ತು 2 ಕಿ. ಮೀ. ನಂತರದ ಪ್ರತಿ ಕಿ.ಮೀ. ಪ್ರಯಾಣಕ್ಕೆ 80 ರೂಪಾಯಿಗಳಿಗೆ ದರ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ.

ಮೂಲಭೂತ ಅಗತ್ಯಗಳಾದ ಆಹಾರ, ಔಷಧಗಳ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಜನತೆಗೆ ಈಗ ಇಂಧನ ದರ ಹೆಚ್ಚಳ ಮತ್ತಷ್ಟು ದೊಡ್ಡ ಹೊಡೆತ ನೀಡಿದೆ. ಮೂಲಭೂತ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಜನ ಕಂಗಾಲು

ಆರ್ಥಿಕ ಸಂಕಷ್ಟಕ್ಕೆ ಜನ ಕಂಗಾಲು

1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ಯ್ರ ಪಡೆದ ನಂತರ ದ್ವೀಪರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆಮದು ವಸ್ತುಗಳ ಶುಲ್ಕ ಪಾವತಿಸಲು ಡಾಲರ್ ಕೊರತೆಯಿಂದ ದೇಶದಲ್ಲಿ ಬಹುತೇಕ ಎಲ್ಲಾ ಮೂಲಭೂತ ವಸ್ತುಗಳ ಕೊರತೆ ಉಂಟಾಗಿದೆ.

ವಿದೇಶಿ ಮೀಸಲು ಕೊರತೆಯಿಂದಾಗಿ ಇಂಧನ, ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯಲು ಸರತಿ ಸಾಲಿನಲ್ಲಿ ಜನ ನಿಲ್ಲಬೇಕಿದೆ. ವಿದ್ಯುತ್ ಕಡಿತ ಮತ್ತು ಹೆಚ್ಚಾಗುತ್ತಿರುವ ಆಹಾರದ ಬೆಲೆಗಳು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿವೆ.

ಹೆಚ್ಚಾಗುತ್ತಿರುವ ಹಣದುಬ್ಬರ

ಹೆಚ್ಚಾಗುತ್ತಿರುವ ಹಣದುಬ್ಬರ

ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದ್ವೀಪ ರಾಷ್ಟ್ರದಲ್ಲಿ ವಾರ್ಷಿಕ ಹಣದುಬ್ಬರವು ಏಪ್ರಿಲ್‌ನಲ್ಲಿ ದಾಖಲೆಯ ಶೇಕಡಾ 33.8 ಕ್ಕೆ ಹೆಚ್ಚಳವಾಗಿದೆ, ಆಹಾರ ಹಣದುಬ್ಬರವು ಇನ್ನೂ ಹೆಚ್ಚಾಗಿದ್ದು ಶೇಕಡಾ 45.1ರಷ್ಟಾಗಿದೆ.

ಆಹಾರ, ಇಂಧನ ಮತ್ತು ಔಷಧಿಗಳ ಕೊರತೆಯಿಂದ ಆಕ್ರೋಶಗೊಂಡಿರುವ ನಾಗರಿಕರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡಾಲರ್ ವಿರುದ್ಧ ಶ್ರೀಲಂಕಾ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಪ್ರಧಾನಿಯಾಗಿದ್ದ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆಗೂ ಜನ ಒತ್ತಾಯಿಸಿದ್ದಾರೆ.

English summary
Crisis-hit Sri Lanka on Tuesday raised the petrol price by 24.3 percent and diesel by 38.4 percent, now the petrol would cost 420 rupees and diesel 400 rupees a liter, an all-time high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X