ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಸ್ಟೀಫನ್ ಹಾಕಿಂಗ್ ನಿಧನ

Posted By:
Subscribe to Oneindia Kannada

ಲಂಡನ್, ಮಾರ್ಚ್ 14: ವಿಶ್ವ ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್(76) ನಿಧನರಾಗಿದ್ದಾರೆ ಎಂದು ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ.

ಇಂಗ್ಲಿಷ್ ಭೌತಶಾಸ್ತ್ರಜ್ಞ, ಕಾಸ್ಮೊಲಾಜಿಸ್ಟ್ ಸ್ಟೀಫನ್ ಹಾಕಿಂಗ್(8 ಜನವರಿ 1942-14 ಮಾರ್ಚ್ 2018) 40 ವರ್ಷಕ್ಕೂ ಅಧಿಕ ಕಾಲದಿಂದ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು.

ಅವರ ನಿಧನದ ಸುದ್ದಿಯನ್ನು ಅವರ ಮಕ್ಕಳಾದ ಲ್ಯುಸಿ, ರಾಬರ್ಟ್ ಮತ್ತು ಟಿಮ್ ಖಚಿತಪಡಿಸಿದ್ದಾರೆ.

ವಿಜ್ಞಾನ ಮಾಂತ್ರಿಕ ಸ್ಟೀಫನ್ ಹಾಕಿಂಗ್ ಬಗ್ಗೆ ಕುತೂಹಲದ 5 ಸಂಗತಿ

ಹಲವು ವರ್ಷಗಳಿಂದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS)ಎಂಬ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆ ಹೊಂದಿದ್ದರು.

Physicist Stephen Hawking dies: UK media

ಸೈದ್ಧಾಂತಿಕ ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆ, ಬ್ಲ್ಯಾಕ್ ಹೋಲ್ ಕುರಿತು ಇವರು ಮಾಡಿದ ಸಂಶೋಧನೆ ಅಮೋಘ.

1963 ರಲ್ಲಿ ನರಕೋಶ ಸಂಬಂಧಿ ಕಾಯಿಲೆಗೆ ತುತ್ತಾದ ಹಾಕಿಂಗ್ ಕ್ರಮೇಣ ಪಾರ್ಶ್ವವಾಯು ಪೀಡಿತರಾಗುತ್ತ ಬಂದರು. ಗುಣಪಡಿಸಲಾಗದ ಈ ಕಾಯಿಲೆಯಿಂದ ಹಾಕಿಂಗ್ ಹೆಚ್ಚು ದಿನ ಬದುಕುವುದೇ ಇಲ್ಲ ಎಂದುಕೊಂಡಿದ್ದ ವೈದ್ಯರಿಗೇ ಅಚ್ಚರಿಯಾಗುವ ಮಟ್ಟಿಗೆ ತಮ್ಮ ಮನೋಬಲದಿಂದ ಹಾಕಿಂಗ್ ಬದುಕುಳಿದರು. ಹಲವು ದಶಕಗಳ ಕಾಲ ವಿಜ್ಞಾನ ಕ್ಷೇತ್ರಕ್ಕೆ ದುಡಿದರು. ಅಭಿನವ ಐನ್ ಸ್ಟಿನ್ ಎನ್ನಬಹುದಾದ ಮಟ್ಟಿಗೆ ಅವರು ತಮ್ಮ ಬುದ್ಧಿ ಮತ್ತೆಯಿಂದ ಹೆಸರುವಾಸಿಯಾದರು. ಕೊನೆಗೆ ಐನ್ ಸ್ಟಿನ್ ರ ಹುಟ್ಟು ಹಬ್ಬದ ದಿನವೇ(ಮಾರ್ಚ್ 14) ಅವರು ಮೃತರಾಗಿದ್ದು ಕಾಕತಾಳೀಯ!

ವಿಜ್ಞಾನವೇ ದೇವರೆಂದಿದ್ದ ಸ್ಟೀಫನ್ ಹಾಕಿಂಗ್ ನಡೆದು ಬಂದ ಹಾದಿ

ಕಳೆದ ಹಲವು ದಶಕಗಳಿಂದ ವ್ಹೀಲ್ ಚೇರ್ ನಲ್ಲೇ ಬದುಕು ಸವೆಸುತ್ತಿದ್ದ ಅವರ ದೇಶದ ಕೆಲವೇ ಕೆಲವು ಭಾಗಗಳನ್ನು ಬಿಟ್ಟರೆ ಬೇರೆ ಯಾವ ಅಂಗವನ್ನೂ ಅಲ್ಲಾಡಿಸುವುದಕ್ಕೂ ಆಗುತ್ತಿರುಲಿಲ್ಲ. ಹೌದೋ, ಅಲ್ಲವೋ ಎಂಬಂತೆ ತುಟಿಯನ್ನು ಒಡೆಯುತ್ತಿದ್ದ ಅವರು ಯಂತ್ರವನ್ನು ಬಳಸಿಯೇ ಸಂವಹನ ನಡೆಸುತ್ತಿದ್ದರು. ದೈಹಿಕವಾಗಿ ಇಷ್ಟೆಲ್ಲ ನ್ಯೂನತೆಗಳಿದ್ದರೂ, ಅವರ ಮೆದುಳು ಮಾತ್ರ ಪ್ರಸ್ತುತ ವಿಶ್ವದ ನಂ.1 ವಿಜ್ಞಾನಿಯನ್ನಾಗಿ ಅವರನ್ನು ಗುರುತಿಸುವಂತೆ ಮಾಡಿತ್ತು. ವಿಜ್ಞಾನ ಕ್ಷೇತ್ರಕ್ಕೆ ಹಾಕಿಂಗ್ ಈ ಪರಿ ಕೊಡುಗೆ ನೀಡಿದರೂ ಅವರನ್ನು ನೊಬೆಲ್ ಪ್ರಶಸ್ತಿಗೆ ಗುರುತಿಸದಿರುವುದು ಮಾತ್ರ ಅಚ್ಚರಿಯ ವಿಷಯ!

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೋಟರ್ ನ್ಯೂರಾನ್ ಕಾಯಿಲೆಗೆ ತುತ್ತಾಗಿ ಇಡೀ ಬದುಕು ಗಾಲಿ ಕುರ್ಚಿ ಮೇಲೆ ಕಳೆದ ಸುಪ್ರಸಿದ್ಧ ವಿಜ್ಞಾನಿ ಸ್ಟಿಫನ್ ಹಾಕಿಂಗ್ ಅವರು ಜೀವಂತ ದಂತಕಥೆಯಾಗಿದ್ದರು. ಅವರ ಇಡೀ ಶರೀರ ಅವರ ನಿಯಂತ್ರಣದಲ್ಲಿ ಇರದೆ ನಿಷ್ಕ್ರಿಯವಾಗಿತ್ತು. ಅವರಾಡುವ ಮಾತು ಯಾರಿಗೂ ಅರ್ಥವಾಗುವುದಿಲ್ಲ. ಧ್ವನಿ ಪರಿಷ್ಕಾರದ ಯಂತ್ರದ ಮೂಲಕವೇ ಅವರ ಮಾತುಕತೆ ನಡೆಸುತ್ತಿದ್ದರು. ಇದಕ್ಕಾಗಿ ವಿಶೇಷ ಗಾಲಿ ಕುರ್ಚಿ ಹಾಗೂ ಧ್ವನಿಯಿಂದ ಅಕ್ಷರಕ್ಕೆ ಹೊಂದಿಸುವ ತಂತ್ರಾಂಶವನ್ನು ಬಳಸಲಾಗುತ್ತಿತ್ತು.

1988ರಲ್ಲಿ ಪ್ರಕಟವಾದ ಖಗೋಳ ಕೌತುಕಗಳ ಕುರಿತ 'ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ' ಕೃತಿ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ. ಚಲನಚಿತ್ರ ಹಾಗೂ ಟಿವಿ ಸರಣಿಗಳಲ್ಲೂ ಹಾಕಿಂಗ್ ಅವರ ಕ್ವಾಂಟಮ್ ಗುರುತ್ವಾಕರ್ಷಣೆ, ಬ್ಲಾಕ್ ಹೋಲ್ಸ್ ಕುರಿತ ವಿಶ್ಲೇಷಣೆ, ಸಂಶೋಧನೆಗಳು ಪ್ರಸಾರವಾಗಿ, ಚರ್ಚಿತವಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Professor Stephen Hawking has died at the age of 76, a spokesman for his family said. Stephen William Hawking was born on January 8 1942. He was an English theoretical physicist, cosmologist, author.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ