ಅಮೆರಿಕ: ನಾಪತ್ತೆಯಾಗಿದ್ದ ಮೂವರು ಭಾರತೀಯರ ಮೃತದೇಹ ಪತ್ತೆ

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ, ಏಪ್ರಿಲ್ 17: ಅಮೆರಿಕದ ಒರೆಗಾನ್ ನಿಂದ ಕ್ಯಾಲಿಫೋರ್ನಿಯಾಕ್ಕೆ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಕುಟುಂಬವೊಂದು ನಾಪತ್ತೆಯಾಗಿದ್ದ ಸುದ್ದಿ ಕಳೆದವಾರ ಹರಿದಾಡಿತ್ತು. ಒಂದು ವಾರಗಳ ನಿರಂತರ ಹುಡುಕಾಟದ ನಂತರ ಈ ಕುಟುಂಬದ ನಾಲ್ವರಲ್ಲಿ ಮೂವರ ದೇಹ ಯೆಲ್ ನದಿಯಲ್ಲಿ ಪತ್ತೆಯಾಗಿದೆ. ಅವರು ಚಲಿಸುತ್ತಿದ್ದ ಎಸ್ ಯುವಿ ನದಿಗೆ ಬಿದ್ದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಊಹಿಸಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಯುವಕನ ಬರ್ಬರ ಹತ್ಯೆ

ಗುಜರಾತ್ ಮೂಲದವರಾದ ಸಂದೀಪ್ ತೊಟ್ಟಪಿಳ್ಳಿ ಕಳೆದ 15 ವರ್ಷಗಳಿಂದ ಅಮೆರಿಕದಲ್ಲೇ ವಾಸವಿದ್ದರು. ಇವರ ಪತ್ನಿ ಸೌಮ್ಯ ಮತ್ತು ಇಬ್ಬರು ಮಕ್ಕಳಾದ ಸಚ್ಚಿ ಮತ್ತು ಸಿದ್ಧಾಂತ್ ಸಹ ಇವರ ಜೊತೆಯಲ್ಲಿದ್ದರು. ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಇವರು ಚಲಿಸುತ್ತಿದ್ದ ಎಸ್ ಯುವಿ ನದಿಗೆ ಉರುಳಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

Missing Indian family in US: 3 bodies found in river

ಪರಿಚಿತರಿಂದ ಇವರು ನಾಪತ್ತೆಯಾದ ಸುದ್ದಿ ತಿಳಿದ ಪೊಲೀಸರು, ಒಂದು ವಾರ ಸತತ ಹುಡುಕಾಟ ನಡೆಸಿದ ನಂತರ ಸಂದೀಪ್ ಮತ್ತು ಪುತ್ರಿ ಸಚ್ಚಿ ದೇಹ ನದಿಯಲ್ಲಿ ಪತ್ತೆಯಾಗಿತ್ತು. ಒಂದು ದಿನದ ನಂತರ ಸೌಮ್ಯ ಅವರ ದೇಹವೂ ಪತ್ತೆಯಾಗಿತ್ತು. ಆದರೆ ಪುತ್ರ ಸಿದ್ಧಾಂತ್ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವರದಿಗಳು ತಿಳಿಸಿವೆ.

ಏಪ್ರಿಲ್ 5 ರಂದು ಕೊನೆಯ ಬಾರಿ ತಮ್ಮ ಸ್ನೇಹಿತರಿಗೆ ಮಾತಿಗೆ ಸಿಕ್ಕಿದ್ದ ತೊಟ್ಟಪಿಳ್ಳಿ ಕುಟುಂಬ ಅಂದೇ ಪ್ರವಾಸಕ್ಕೆ ಹೊರಟಿತ್ತು. ಸ್ಯಾನ್ ಜೋಸ್ ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆಂದು ಅವರು ಹೊರಟಿದ್ದರು.

ಆದರೆ ಬರಬೇಕಾದ ಸಮಯ ಕಳೆದು ಎಷ್ಟು ಹೊತ್ತಾದರೂ ತೊಟ್ಟಪಿಳ್ಳಿ ಕುಟುಂಬ ಮನೆಗೆ ಬಾರದಿದ್ದಾಗ ಸಂಬಮಧಿಗಳು ಅವರಿಗೆ ಫೋನ್ ಮಾಡಿದ್ದಾರೆ. ಆದರೆ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯವಾಗಲಿಲ್ಲ. ಎಷ್ಟು ಹೊತ್ತಾದರೂ ಬಾರದಿದ್ದಾಗ ಅನುಮಾನಗೊಂಡ ಸಂಬಂಧಿಗಳು ಪೊಲೀಸರಿಗೆ ದೂರು ನೀಡಿದಿದ್ದಾರೆ.

ನಂಗತರ ಅವರು ಬಂದ ರಸ್ತೆಯುದ್ದಕ್ಕೂ ಹುಡುಕಾಡಿದ ಪೊಲೀಸರಿಗೆ ಯೇಲ್ ನದಿಯಲ್ಲಿ ಅವರು ಚಲಿಸುತ್ತಿದ್ದ ಎಸ್ ಯುವಿ ಬಿದ್ದಿರುವುದು ಪತ್ತೆಯಾಗಿದೆ. ಸುಮಾರು 100 ಮೀ.ಆಳಕ್ಕೆ ಇದು ಬಿದ್ದಿದ್ದರಿಂದ ಮೂವರು ಅಸುನೀಗಿದ್ದು, ಅವರ ಶವ ಪತ್ತೆಯಾಗಿದೆ. ಆದರೆ ಸಿದ್ಧಾಂತ್ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An Indian family in US travelling from Oregon to California last week went missing. According to reports, after a week-long search for them, on Aapril 15th, bodies of two of the family members were found inside their SUV, which was submerged in Eel River.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ