ಪಪುವಾ ನ್ಯೂ ಗಿನಿಯಾದಲ್ಲಿ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ
ಆಸ್ಟ್ರೇಲಿಯಾದ ಬಳಿಯಿರುವ ಪಪುವಾ ನ್ಯೂ ಗಿನಿಯಾ ದ್ವೀಪದ ಬಳಿ 7.7 ಪ್ರಮಾಣದ ಭಾರೀ ಭೂಕಂಪ ಮಂಗಳವಾರ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸ್ಥಳೀಯ ಕಾಲಮಾನ 5.58 ನಿಮಿಷಕ್ಕೆ, ಪಪುವಾ ನ್ಯೂ ಗಿನಿಯಾ ರಾಷ್ಟ್ರದ ಕೊಕೊಪೊ ಎಂಬಲ್ಲಿಂದ 28 ಕಿ.ಮೀ. ದೂರದಲ್ಲಿ, 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿದುಬಂದಿದೆ.
ಪೆಸಿಫಿಕ್ ಸಾಗರದಲ್ಲಿ ಸುನಾಮಿ ಅಲೆಗಳು ಏಳುವ ಸಂಭವನೀಯತೆ ಇದೆ ಎಂದು ಹೇಳಲಾಗಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಆದೇಶಿಸಲಾಗಿದೆ.

ಸುನಾಮಿ ಅಲೆಗಳು ಸೋಲೋಮನ್ ಮತ್ತು ಹವಾಯಿ ದ್ವೀಪಕ್ಕೆ ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಕೇಂದ್ರ ಬಿಂದುವಿನಿಂದ ಹತ್ತಿರದಲ್ಲಿರುವ ಎರಡು ನಗರಗಳು ಸುರೌಲ್ ಮತ್ತು ಹಿಟಂಗ್.
ಆಸ್ಟ್ರೇಲಿಯಾಕ್ಕಾಗಲಿ ಮತ್ತು ಅಮೆರಿಕಾಕ್ಕಾಗಲಿ ಸುನಾಮಿಯಿಂದ ಯಾವುದೇ ಆತಂಕವಿಲ್ಲ.












Click it and Unblock the Notifications