ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿ ವಿಶ್ವದ ಮೊದಲ ಆಕಾಶ ಈಜುಕೊಳ

By Vanitha
|
Google Oneindia Kannada News

ಲಂಡನ್‌, ಆಗಸ್ಟ್‌,22 : ಸಾಮಾನ್ಯವಾಗಿ ಮನೆಯಲ್ಲೋ, ಹೋಟೆಲ್‌, ಅಪಾರ್ಟ್ ಮೆಂಟ್ ಬಳಿ ಇರುವ ಈಜುಕೊಳ ನೋಡಿರ್ತೀರಿ. ಆದರೆ ಇಲ್ಲೊಂದು ಈಜುಕೊಳ ಆಕಾಶದಲ್ಲಿದೆ..ಮುಂದೆ ಓದಿ ಗೊತ್ತಾಗುತ್ತೆ ಇದರ ಸ್ಪೆಷಾಲಿಟಿ.

ವಿಶ್ವದ ಮೊದಲ ಆಕಾಶ ಈಜುಕೊಳ ನೋಡಲು ಹೋಗಲು ಮನಸ್ಸಾಯಿತೆ. ಹಾಗಾದರೆ ನೀವು ಲಂಡನ್ ಗೆ ತೆರಳಬೇಕು. ಈಗಲೇ ಹೋಗಬೇಡಿ..ಈಜುಕೊಳದಲ್ಲಿ ಮುಳುಗಿ ಏಳಲು 2018 ರ ಬಳಿಕ ಹೋಗಿ ಬನ್ನಿ.[ವಿಶ್ವಯುದ್ಧ II ವಿಜಯೋತ್ಸವ ದಿನ ರಾಣಿ ಎಲಿಜಬೆತ್ ಗೆ ಕಟಂಕ]

London, the world's first sky swimming pool

ಹೌದು ಆಕಾಶ ಈಜುಕೊಳ 2018ರ ಹೊತ್ತಿಗೆ ಲಂಡನ್‌ನಲ್ಲಿ ನಿರ್ಮಾಣವಾಗಲಿದೆ. ನೈಋತ್ಯ ಲಂಡನ್‌ನ ನೈನ್ ಎಲ್ಮ್ಸ್ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಎರಡು ಐಷರಾಮಿ ಅಪಾರ್ಟ್ ಮೆಂಟ್‌ ಕಟ್ಟಡಗಳ ನಡುವಿನ ಖಾಲಿ ಜಾಗದಲ್ಲಿ, 10 ಮಹಡಿಗಳ ಎತ್ತರದಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದೆ.

ಆಕಾಶದ ಈಜುಕೊಳಕ್ಕೆ ಯಾವುದೇ ಅಡಿಪಾಯವಿಲ್ಲ. ಎರಡು ಕಟ್ಟಡಗಳಿಗೆ ಅಂಟಿಕೊಂಡಂತೆ ಇದ್ದು, ಗುಂಡು ನಿರೋಧಕ ಗಾಜಿಗಿಂತ 7 ಪಟ್ಟು ದೊಡ್ಡದಾಗಿರುವ, 8 ಇಂಚಿನಷ್ಟು ದಪ್ಪ ಗಾಜನ್ನು ಬಳಸಿ ಈಜುಕೊಳ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಈಜುಕೊಳ 90 ಅಡಿ ಉದ್ದ, 4 ಅಡಿ ಆಳವಿದ್ದು, 360 ಡಿಗ್ರಿ ವೀಕ್ಷಣಾ ಅನುಭವವನ್ನು ನೀಡಲಿದ್ದು, ಈಜುಕೊಳದಿಂದಲೇ ಲಂಡನ್‌ಐ, ಬ್ರಿಟನ್ ಸಂಸತ್ತು ಹಾಗೂ ಅಮೆರಿಕದ ಹೊಸ ರಾಯಭಾರಿ ಕಚೇರಿ ವೀಕ್ಷಿಸಲು ಅವಕಾಶ ಸಿಗಲಿದೆ.

English summary
The World's first sky swimming pool in london. Its inaugurate on 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X