ಅಮೇರಿಕಾದಿಂದ ಬಂತು ಡಿಕೆಶಿಗೆ ವಿಶೇಷ ಆಹ್ವಾನ; ಯಾರಿಂದ ಗೊತ್ತಾ?

ಅತ್ತ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರು ಸದ್ಯ ಅಮೆರಿಕದ ಉಪಾಧ್ಯಕ್ಷೆಯಾಗಿದ್ದು, ಈ ಬಾರಿಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಟ್ರಬಲ್‌ ಶೂಟರ್‌ ಎಂದೇ ಕರೆಸಿಕೊಳ್ಳುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಮೇರಿಕಾದಿಂದ ಸ್ಪೆಷಲ್‌ ಆಹ್ವಾನವೊಂದು ಬಂದಿರುವುದು ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ಡಿಕೆ ಶಿವಕುಮಾರ್‌ ಅವರು ಅಮೇರಿಕಾ ಚುನಾವಣೆ ವಿಚಾರದಲ್ಲಿ ಕೂಡ ಪ್ರಭಾವ ಬೀರಿದ್ದಾರಾ? ಅಲ್ಲಿಯ ಚುನಾವಣೆಗೂ ಡಿಕೆಶಿ ಟ್ರಬಲ್‌ ಶೂಟರ್‌ ಆಗಲಿದ್ದಾರಾ? ಎನ್ನುವ ಗುಸುಗುಸು ಕೂಡ ಶುರುವಾಗಿದೆ. ಆದರೆ, ಅಸಲಿ ವಿಚಾರವೆಂದರೆ ಡಿ.ಕೆ.ಶಿವಕುಮಾರ್‌ ಅವರಿಗೆ ಕಮಲಾ ಹ್ಯಾರಿಸ್‌ ಅವರಿಂದಲೇ ಆಹ್ವಾನ ಬಂದಿದೆಯಂತೆ.

Karnataka DCM DK Shivakumar Is Traveling To America

ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಇಂದು ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೇರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಅಮೇರಿಕಾದ ನಾರ್ಥ್ ಕ್ಯಾರೋಲಿನಾದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್‌ ಕುಟುಂಬ ಭಾಗಿಯಾಗಲಿದೆ. ಸುಮಾರು ಒಂದು ವಾರಗಳ ಕಾಲ ಇವರು ಅಮೇರಿಕಾದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಕಮಲಾ ಹ್ಯಾರಿಸ್‌ ಅವರು ಖಾಸಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಇದರಲ್ಲಿ ಭಾಗವಹಿಸುವಂತೆ ಡಿಕೆಶಿಗೆ ಆಹ್ವಾನ ನೀಡಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ರಾತ್ರಿ ಅಮೇರಿಕಾದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಮಲಾ-ಡಿಕೆಶಿ ನಂಟೇನು?: ಕಮಲಾ ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಗೋಪಾಲನ್‌ ಅವರ ಟ್ರಸ್ಟ್‌ವೊಂದರ ಜೊತೆ ಡಿ.ಕೆ.ಶಿವಕುಮಾರ್‌ ನಂಟು ಹೊಂದಿದ್ದಾರೆ. ಈ ಟ್ರಸ್ಟ್‌ಗೆ ಡಿಕೆಶಿ ನೆರವು ಕೂಡ ನೀಡಿದ್ದರು ಎನ್ನಲಾಗಿದೆ. ಹಾಗಾಗಿ ಉಭಯ ನಾಯಕರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೇರಿಕಾಗೆ ಬರುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಕರೆ ನೀಡಿದ್ದಾರೆ.

Karnataka DCM DK Shivakumar Is Traveling To America

ಪ್ರಜಾಪ್ರಭುತ್ವ ಕುರಿತಾದ ಸಂವಾದದಲ್ಲಿ ಕೂಡ ಡಿ.ಕೆ.ಶಿವಕುಮಾರ್‌ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳಿಕ ಚಿಕಾಗೋ ನಗರಕ್ಕೆ ಡಿಕೆಶಿ ಕುಟುಂಬ ಪ್ರಯಾಣ ಬೆಳೆಸಲಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಕೂಡ ಭೇಟಿಯಾಗಿ, ಸೌಹಾರ್ದಯುತವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ಎದುರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಇವರಿಬ್ಬರ ನಡುವೆ ದೊಡ್ಡ ಫೈಟ್‌ ನಡೆಯುತ್ತಿದ್ದು, ಒಂದು ವೇಳೆ ಕಮಲಾ ಹ್ಯಾರಿಸ್‌ ಗೆದ್ದರೆ, ಭಾರತೀಯ ಮೂಲದ ಮಹಿಳೆ ಜಗತ್ತಿನ ಬಲಿಷ್ಟ ರಾಷ್ಟ್ರವೊಂದರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+