ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್! ಕ್ಷಿಪಣಿಗಳ ಸುರಿಮಳೆ, ಅಮೆರಿಕ ಯೋಧರಿಗೆ ಸಂಕಷ್ಟ!
ಇಸ್ರೇಲ್ vs ಇರಾನ್‌ನ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಎಂಟ್ರಿ ಕೊಟ್ಟಿದ್ದು ಭಾರೀ ಸಂಚಲನ ಸೃಷ್ಟಿಯಾಗಿದೆ. ಈ ನಡುವೆ ಇರಾನ್‌ನ ಇಸ್ರೇಲ್‌ನ ಮೇಲೆ ಮರು ದಾಳಿ ಮಾಡುತ್ತಿದ್ದು ಇಸ್ರೇಲ್‌ನ ಕೆಲವು ಭಾಗದಲ್ಲಿ ಸೈರನ್ ಸುದ್ದು ಜೋರಾಗಿದೆ ಎಂದು ಹೇಳಲಾಗುತ್ತಿದೆ. ನೀವು ಯುದ್ಧವನ್ನು ಪ್ರಾರಂಭಿಸಿದ್ದೇವೆ ನಾವು ಅದನ್ನು ಮುಗಿಸಲಿದ್ದೇವೆ ಎಂದು ಇರಾನ್ ಹೇಳಿದೆ. ಇರಾನ್‌ನ ಮೇಲೆ ದಾಳಿ ಮಾಡಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ನಾವು ಸರಿಯಾಗಿ ತಿರುಗೇಟು ನೀಡಲಿದ್ದೇವೆ ಎಂದು ಇರಾನ್ ಹೇಳಿದೆ. ದೈತ್ಯ ರಾಷ್ಟ್ರಗಳ ನಡುವೆ ಇದೀಗ ಅಮೆರಿಕ ಸಹ ಎಂಟ್ರಿ ಕೊಟ್ಟಿರುವುದನ್ನು ನೋಡಿದರೆ ಇದು ಮೂರನೇ ವಿಶ್ವ ಯುದ್ಧವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಇವೆ ಅಂತಲೇ ಹೇಳಲಾಗುತ್ತಿದೆ.
ಇರಾನ್‌ನ ಮೇಲೆ ಅಮೆರಿಕ ದಾಳಿ ಮಾಡಿದ ಬೆನ್ನಲ್ಲೇ ಇಸ್ರೇಲ್ ದೇಶವನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿಗಳು ಸುರಿಮಳೆಯನ್ನೇ ಸುರಿಸಿದೆ. ಇರಾನ್‌ನ ಮತ್ತೊಂದು ಕ್ಷಿಪಣಿ ಉಡಾವಣೆಯಿಂದಾಗಿ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್‌ನ ಸೇನೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ಮೂಲಕ ಇರಾನ್ ದೇಶವು ಇಸ್ರೇಲ್‌ನ ಮೇಲೆ ಸರಣಿ ಕ್ಷಿಪಣಿ ದಾಳಿಯನ್ನು ಮಾಡಿರುವುದು ಖಚಿತವಾಗಿದೆ. ಇದೇ ಸಂದರ್ಭದಲ್ಲಿ ಇರಾನ್ - ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆಯನ್ನು ನೀಡಿದ್ದು. ಮಧ್ಯಪ್ರಾಚ್ಯದಲ್ಲಿ ಇರುವ ಅಮೆರಿಕದ ಸೇನಾ ನೆಲೆಗಳನ್ನು ಧ್ವಂಸ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಅಮೆರಿಕದ ಸಾವಿರಾರು ಯೋಧರು ಮಧ್ಯಪ್ರಾಚ್ಯದಲ್ಲಿ ಇದ್ದಾರೆ ಅವರನ್ನೇ ಟಾರ್ಗೆಟ್ ಮಾಡಲಿದ್ದೇವೆ ಎಂದು ಇರಾನ್ ನೇರ ಎಚ್ಚರಿಕೆಯನ್ನು ನೀಡಿದೆ.
ಇಸ್ರೇಲ್ ಭಯಾನಕ ದಾಳಿ: ಇನ್ನು ಇಸ್ರೇಲ್‌ನ ಮೇಲೆ ಇರಾನ್ ಭೀಕರ ದಾಳಿಯನ್ನು ಮಾಡಿದೆ. ಇರಾನ್‌ನ ಮೇಲೆ ಅಮೆರಿಕ ದಾಳಿ ಮಾಡಿದ ಬೆನ್ನಲ್ಲೇ ಇಸ್ರೇಲ್ ಮೇಲೆ ಬಾಂಬ್ ದಾಳಿಯನ್ನು ಇರಾನ್ ಮಾಡಿದೆ. ನೀವು ಪ್ರಾರಂಭಿಸಿದ್ದೀರಿ ನಾವು ಅಂತ್ಯ ಮಾಡಲಿದ್ದೇವೆ ಎಂದು ಇರಾನ್ ಹೇಳಿದೆ. ಇಸ್ರೇಲ್ ಹಾಗೂ ಇರಾನ್‌ನ ನಡುವೆ ಇದೀಗ ವಿವಿಧ ದೇಶಗಳು ಸಹ ಎಂಟ್ರಿ ಕೊಡುತ್ತಿರುವುದು ಮೂರುನೇ ವಿಶ್ವ ಯುದ್ಧದ ದಾಳಿ ಅಂತಲೇ ಹೇಳಲಾಗುತ್ತಿದೆ. ಯಾಕೆಂದರೆ ಇಲ್ಲಿಯ ವರೆಗೆ ಈ ದೇಶಗಳಿಗೆ ಪರೋಕ್ಷ ಬೆಂಬಲ ಮಾತ್ರ ಇತ್ತು. ಆದರೆ ಇದೀಗ ಅಮೆರಿಕ ಇಸ್ರೇಲ್‌ಗೆ ಸಪೋರ್ಟ್ ಮಾಡುತ್ತಿದ್ದರೆ, ಇರಾನ್‌ಗೆ ರಷ್ಯಾ ದೇಶ ಬೆಂಬಲಿಸುತ್ತಿದೆ.
ಭಯಾನಕ ದಾಳಿ: ಇಸ್ರೇಲ್ ಮೇಲೆ ಇರಾನ್ ಮೊದಲು ದಾಳಿ ಮಾಡಿತ್ತು. ಇದೀಗ ಇರಾನ್‌ನ ಮೇಲೆ ಅಮೆರಿಕ ದಾಳಿ ಮಾಡಿದೆ. ಮೂರು ಭಾಗಗಳಲ್ಲಿ ಅಮೆರಿಕ ದಾಳಿ ಮಾಡಿದೆ. ಈ ಬಾಂಬ್ ದಾಳಿಯು ದೃಶ್ಯಗಳು ವೈರಲ್ ಆಗಿವೆ. ಬಾಂಬ್ ದಾಳಿ ಭಯಾನಕವಾಗಿದ್ದು ಈ ದಾಳಿಯ ಬೆನ್ನಲ್ಲೇ ಅಮೆರಿಕಗೆ ಎಚ್ಚರಿಕೆ ಕೊಟ್ಟಿರುವ ಇರಾನ್ - ಇಸ್ರೇಲ್ ಮೇಲೆ ಬಾಂಬ್ ಸುರಿ ಮಳೆಗಳನ್ನು ಸುರಿಸಿದೆ.












Click it and Unblock the Notifications