ಇರಾನ್: ಹಿಜಾಬ್ ವಿರೋಧಿಸಿ ಪ್ರತಿಭಟಿಸಿದ ವ್ಯಕ್ತಿಗೆ ಗಲ್ಲು, ಐವರಿಗೆ ಜೈಲು
ನವದೆಹಲಿ, ನವೆಂಬರ್ 14: ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿದ್ದ ಯುವತಿ ಮಹ್ಸಾ ಅಮಿನಿ ಮರಣದ ನಂತರ ಇರಾನ್‌ನಲ್ಲಿ ಪ್ರಾರಂಭವಾದ ಸರ್ಕಾರದ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಪ್ರತಿಭಟನಾಕಾರನಿಗೆ ಮರಣದಂಡನೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ 5 ಜನರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನೂ ಈ ತೀರ್ಪನ್ನು ಎಲ್ಲಾ ಅಪರಾಧಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಇರಾನ್ ನ್ಯಾಯಾಲಯ ತಿಳಿಸಿದೆ.
ಇರಾನ್‌ನಲ್ಲಿ ಕಳೆದ ಸೆಪ್ಟೆಂಬರ್ 16ರಂದು ಪ್ರಾರಂಭವಾದ ಹಿಜಾಬ್ ವಿರೋಧಿ ಉಗ್ರ ಪ್ರತಿಭಟನೆಗಳು ಇನ್ನೂ ನಡೆಯುತ್ತಿವೆ. ಆದರೆ, ಈ ನಡುವೆ ಇರಾನ್‌ನಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹಿಜಾಬ್ ವಿರೋಧ ಮಾಡುತ್ತಿದ್ದ ಪ್ರಕರಣದಲ್ಲಿ ಟೆಹ್ರಾನ್ ನ್ಯಾಯಾಲಯ ತೀರ್ಪು ನೀಡಿದೆ. ದೇಶದಲ್ಲಿ ನಡೆಯುತ್ತಿರುವ ಅಶಾಂತಿಯ ನಡುವೆ ಸರ್ಕಾರದ ವಿರೋಧಿ ಪ್ರತಿಭಟನಾಕಾರರನ್ನು ಗಲ್ಲಿಗೇರಿಸಲಾಗಿದೆ ಮತ್ತು ಕೆಲವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಧ್ಯಮ ಮೂಲಗಳ ಪ್ರಕಾರ, ಇರಾನ್‌ನಲ್ಲಿ ಇದೇ ಮೊದಲ ಬಾರಿಗೆ ಇರಾನ್ ದೇಶದಲ್ಲಿ ಪ್ರತಿಭಟನಾಕಾರನಿಗೆ ಮರಣದಂಡನೆ ವಿಧಿಸಲಾಗಿದೆ. ಇದಲ್ಲದೇ ನ್ಯಾಯಾಲಯವು 5 ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರತಿಭಟನಾಕಾರರು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚುವುದು, ಗಲಭೆಗಳನ್ನು ಪ್ರಚೋದಿಸುವುದು ಮತ್ತು ರಾಷ್ಟ್ರೀಯ ಭದ್ರತೆಯ ವಿರುದ್ಧ ಪಿತೂರಿ ನಡೆಸಿದ ಆರೋಪವನ್ನು ಪ್ರತಿಭಟನಾಕಾರರ ವಿರುದ್ಧ ಹೊರಿಸಲಾಗಿದೆ. ಹೀಗಾಗಿ ಈ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಎಲ್ಲರೂ ಈ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಕೋರ್ಟ್ ಹೇಳಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮೆಹ್ಸಾ ಅಮಿನಿಯ ಸಾವಿನ ನಂತರ ಸರ್ಕಾರದ ಅಲ್ಲಾಡಿಸಿದ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರಿಗೆ ಇದು ಮೊದಲ ಮರಣದಂಡನೆ ಪ್ರಕರಣವಾಗಿದೆ.

ಹಿಜಾಬ್ ಧರಿಸಿದ್ದಕ್ಕೆ 3 ಪ್ರಾಂತ್ಯಗಳಲ್ಲಿ 750 ಜನ ಆರೋಪಿಗಳು
ವರದಿಗಳ ಪ್ರಕಾರ, ಭಾನುವಾರದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮೂರು ಪ್ರಾಂತ್ಯಗಳಲ್ಲಿ 750 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮೊದಲು, ಸೆಪ್ಟೆಂಬರ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ರಾಜಧಾನಿ ಟೆಹ್ರಾನ್‌ನಲ್ಲಿ 2,000 ಕ್ಕೂ ಹೆಚ್ಚು ಜನರ ಮೇಲೆ ಆರೋಪ ಹೊರಿಸಲಾಗಿತ್ತು. ಇತ್ತೀಚಿನ ಗಲಭೆಗಳ ನಂತರ 164 ಜನರ ಮೇಲೆ ಆರೋಪ ಹೊರಿಸಲಾಯಿತು ಎಂದು ದಕ್ಷಿಣ ಹಾರ್ಮೋಜ್ಗಾನ್ ಪ್ರಾಂತ್ಯದ ನ್ಯಾಯಾಂಗ ಮುಖ್ಯಸ್ಥ ಮೊಜ್ತಾಬಾ ಘರೆಮಾನಿ ಹೇಳಿದ್ದಾರೆ. ಹತ್ಯೆಗೆ ಪ್ರಚೋದನೆ, ಭದ್ರತಾ ಪಡೆಗಳಿಗೆ ಹಾನಿ, ಸರ್ಕಾರದ ವಿರುದ್ಧ ಅಪಪ್ರಚಾರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು.

ಇರಾನ್‌ನಲ್ಲಿ ಹಿಜಾಬ್ ವಿವಾದ ಏಕೆ ?
ಕಳೆದ ಸೆಪ್ಟೆಂಬರ್ 16ರಂದು 22 ವರ್ಷದ ಮೆಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ಹಿಜಾಬ್ ವಿರೋಧಿ ಪ್ರತಿಭಟನಾ ಚಳುವಳಿ ಪ್ರಾರಂಭವಾಯಿತು. ಮಹ್ಸಾ ತನ್ನ ಕುಟುಂಬವನ್ನು ಭೇಟಿ ಮಾಡಲು ಸೆಪ್ಟೆಂಬರ್ 13ರಂದು ಟೆಹ್ರಾನ್‌ಗೆ ಬಂದಿದ್ದಳು. ಅವಳು ಹಿಜಾಬ್ ಧರಿಸಿರಲಿಲ್ಲ. ನಂತರ ಪೊಲೀಸರು ತಕ್ಷಣವೇ ಮಹ್ಸಾವನ್ನು ಬಂಧಿಸಿದ್ದರು. ಬಂಧನಕ್ಕೊಳಗಾದ 3 ದಿನಗಳ ನಂತರ ಮಹ್ಸಾ ನಿಧನರಾದರು. ಅಮಿನಿಯ ಸಾವಿಗೂ ಮುನ್ನ ತಲೆಗೆ ಬಲವಾದ ಗಾಯವಾಗಿತ್ತು. ಆದರೆ ಆಕೆಯ ಸಂಬಂಧಿಕರು ಆಕೆಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಹೇಳಿಕೊಂಡಿದ್ದರು. ಈ ಘಟನೆಯ ಬಳಿಕ ಹಿಜಾಬ್ ವಿರೋಧಿಸಿದ ಪ್ರತಿಭಟನೆಗಳು ತೀವ್ರಗೊಂಡವು.

ಯುವತಿ ಮಹ್ಸಾ ಅಮಿನಿಯ ಸಾವು
ಮೆಹ್ಸಾ ಪೊಲೀಸ್ ಠಾಣೆಗೆ ಬಂದು ಆಸ್ಪತ್ರೆಗೆ ಹೋಗುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಂದಿನಿಂದ ಈ ವಿಷಯವು ಸುದ್ದಿಯಲ್ಲೇ ಹಬ್ಬಿತು ಆದರೆ ಮೆಹ್ಸಾ ಜೀವ ಕಳೆದುಕೊಂಡಿದ್ದು ಹೇಗೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜನರು, ಯುವಕ-ಯುವತಿಯರು ಹಿಜಾಬ್ ವಿರೋಧಿಸಲು ಪ್ರಾರಂಭಿಸಿದರು. ಮಹ್ಸಾ ಅಮಿನಿಯ ಸಾವು ಮತ್ತು ಕಡ್ಡಾಯ ಹಿಜಾಬ್ ವಿರುದ್ಧ ಪ್ರತಿಭಟಿಸಿ ಅನೇಕ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಅನೇಕ ಮಹಿಳೆಯರು ಹಿಜಾಬ್‌ಗಳನ್ನು ಸುಟ್ಟಿದ್ದಾರೆ. ಹಿಜಾಬ್ ಸುಟ್ಟಿರುವ ವಿಡಿಯೋಗಳು ಸಹ ಸಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದವು.

10 ವರ್ಷ ಮೇಲ್ಪಟ್ಟ ಬಾಲಕಿಯರಿಗೆ ಹಿಜಾಬ್ ಕಡ್ಡಾಯ
ದೇಶದ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಉಲ್ಲಂಘಿಸಿದ ನಂತರ ಮಹ್ಸಾ ಅಮಿನಿ ಅವರನ್ನು ಬಂಧಿಸಲಾಯಿತು. 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯ ನಂತರವೇ ಇರಾನ್‌ನಲ್ಲಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೆಚ್ಚಿಸಲಾಯಿತು. ಬಟ್ಟೆ ಧರಿಸಲು ಕಾನೂನು ರಚಿಸಲಾಗಿದೆ. ಹಿಜಾಬ್ ಧರಿಸುವುದನ್ನು ಸಹ 1981ರಿಂದ ಕಡ್ಡಾಯಗೊಳಿಸಲಾಯಿತು. ಅಂದಿನಿಂದ, ಸುಮಾರು 10 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು ಮಹಿಳೆಯರು ತಮ್ಮ ತಲೆಯನ್ನು ಹಿಜಾಬ್‌ನಿಂದ ಮುಚ್ಚಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಮಹ್ಸಾ ಅವರ ಸಾವಿನ ನಂತರ ಜನರು ಸರ್ಕಾರದ ಈ ಕಠಿಣ ಕಾನೂನನ್ನು ವಿರೋಧಿಸುತ್ತಿದ್ದಾರೆ. ಈ ಸರ್ಕಾರಿ ವಿರೋಧಿ ಪ್ರತಿಭಟನೆಗೆ ಸುಮಾರು 8 ವಾರಗಳು ಕಳೆದಿವೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications