ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ವೈದ್ಯಕೀಯ ಸಾಮಗ್ರಿಗಳ ಕೊರತೆ

|
Google Oneindia Kannada News

ಬೀಜಿಂಗ್, ಮಾರ್ಚ್ 17: ಕೊರೊನಾ ಮಹಾಮಾರಿ ಪ್ರಪಂಚದಾದ್ಯಂತ ವಿನಾಶವನ್ನುಂಟು ಮಾಡುತ್ತಲೇ ಇದೆ. ಈಗ ಮಾರುಕಟ್ಟೆಯಲ್ಲಿ ಅನೇಕ ಲಸಿಕೆಗಳು ಬಂದಿವೆ. ಇದರಿಂದಾಗಿ ಸಾವಿನ ಪ್ರಮಾಣ ಮೊದಲಿಗಿಂತ ಕಡಿಮೆಯಾಗುತ್ತಿದೆ. ಆದರೆ ಜನರು ನಿರ್ಬಂಧಗಳೊಂದಿಗೆ ಜೀವನವನ್ನು ನಡೆಸಬೇಕಾಗಿದೆ. ಡಿಸೆಂಬರ್ 2019 ರಲ್ಲಿ ಚೀನಾ ಈ ವೈರಸ್ ಅನ್ನು ವಿಶ್ವದಾದ್ಯಂತ ಹರಡಿತು. ಸದ್ಯ ಪರಿಸ್ಥಿತಿ ನಿಯಂತ್ರಿಸಿದ್ದರೂ, ಈಗ ಪರಿಸ್ಥಿತಿ ಮತ್ತೆ ಹದಗೆಡುತ್ತಿದೆ.

ಚೀನಾದ ಮಾಧ್ಯಮಗಳ ಪ್ರಕಾರ, ಚೀನಾ 2020 ರಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈಗ ಅಲ್ಲಿ ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿದ್ದು, ಈ ಕಾರಣದಿಂದಾಗಿ ಆರೋಗ್ಯ ಸೌಲಭ್ಯಗಳ ಕೊರತೆ ಉಂಟಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಚೀನಾ ಸರ್ಕಾರವು ಸೋಂಕನ್ನು ಶೀಘ್ರದಲ್ಲೇ ನಿಲ್ಲಿಸದಿದ್ದರೆ, ಅಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

'ಶೂನ್ಯ ಕೋವಿಡ್ ನೀತಿ' ಜಾರಿ

'ಶೂನ್ಯ ಕೋವಿಡ್ ನೀತಿ' ಜಾರಿ

ವರದಿಯ ಪ್ರಕಾರ ಕಳೆದ 10 ವಾರಗಳಲ್ಲಿ ಚೀನಾದಲ್ಲಿ 14 ಸಾವಿರಕ್ಕೂ ಹೆಚ್ಚು ಕೊರೊನಾ ರೋಗಿಗಳು ಕಂಡುಬಂದಿದ್ದಾರೆ. ಈ ಕಾರಣದಿಂದಾಗಿ ಚೀನಾ ಸರ್ಕಾರವು ಅನೇಕ ದೊಡ್ಡ ನಗರಗಳಲ್ಲಿ ಲಾಕ್‌ಡೌನ್ ಅನ್ನು ಜಾರಿಗೊಳಿಸಬೇಕಾಗಿದೆ. ಅಲ್ಲದೆ 'ಶೂನ್ಯ ಕೋವಿಡ್ ನೀತಿ'ಯನ್ನು ಜಾರಿಗೊಳಿಸಲಾಗಿದೆ, ಅದರ ಅಡಿಯಲ್ಲಿ ಕ್ವಾರಂಟೈನ್‌ನ ಕಟ್ಟುನಿಟ್ಟಾದ ನಿಯಮಗಳಿವೆ. ಇದೇ ಪರಿಸ್ಥಿತಿ ಇನ್ನೂ ಕೆಲ ದಿನ ಮುಂದುವರಿದರೆ ಚೀನಾದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರಲಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಜನಸಂದಣಿ

ಪರೀಕ್ಷಾ ಕೇಂದ್ರಗಳಲ್ಲಿ ಜನಸಂದಣಿ

ಚೀನಾದಲ್ಲಿ ಕೊರೊನಾ ಪ್ರಕರಣಗಳು ಪತ್ತೆ ಹೆಚ್ಚಾಗುತ್ತಿದ್ದು ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಪರೀಕ್ಷೆಗೆ ಒಳಗಾದ ಜನರಲ್ಲಿ ಸೋಂಕು ಕಾಣಿಸಿಕೊಂಡರೆ ಅಥವಾ ಗಂಭೀರ ಪರಿಸ್ಥಿತಿಯಲ್ಲಿದ್ದರೆ ಅಂಥವರನ್ನು ದಾಖಲಿಸಿಕೊಳ್ಳಲು ಜಿಲಿನ್‌ನಲ್ಲಿರುವ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲ ಎಂದು ಚೀನಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದಲ್ಲದೇ ಇನ್ನೂ ಎರಡು-ಮೂರು ದಿನಗಳ ವರೆಗೆ ಮಾತ್ರ ವೈದ್ಯಕೀಯ ಚಿಕಿತ್ಸಾ ಸಾಮಗ್ರಿಗಳು ಉಳಿದುಕೊಂಡಿದ್ದು, ಅದನ್ನೂ ವ್ಯವಸ್ಥೆ ಮಾಡುವುದು ಆಡಳಿತಕ್ಕೆ ಸವಾಲಾಗಿದೆ. ಅಧಿಕಾರಿಗಳ ಪ್ರಕಾರ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರವನ್ನು ತಲುಪುತ್ತಿರುವ ಕಾರಣ ಆರೋಗ್ಯ ಇಲಾಖೆಯ ಮೇಲೆ ಪರೀಕ್ಷೆಯ ಹೊರೆ ಹೆಚ್ಚಾಗಿದೆ.

ಸೋಂಕು ಹೆಚ್ಚಾಗುವ ಸಾಧ್ಯತೆ

ಸೋಂಕು ಹೆಚ್ಚಾಗುವ ಸಾಧ್ಯತೆ

ಆರೋಗ್ಯ ತಜ್ಞರ ಪ್ರಕಾರ, ಚೀನಾದ ಶೇಕಡಾ 90 ರಷ್ಟು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ, ಆದರೆ ಇದುವರೆಗೆ ಸಾಕಷ್ಟು ಸಂಖ್ಯೆಯಲ್ಲಿ ವಯಸ್ಸಾದವರಿಗೆ ಬೂಸ್ಟರ್ ಡೋಸ್ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ. ಇದುವರೆಗಿನ ತನಿಖೆಯಲ್ಲಿ ಓಮಿಕ್ರಾನ್ ರೂಪಾಂತರ ಪ್ರಕರಣದ ಹೆಚ್ಚಳಕ್ಕೆ ಕಾರಣ ಎಂದು ನಂಬಲಾಗಿದೆ. ಹೀಗಾಗಿ ಪರೀಕ್ಷೆಗೆ ಒಳಗಾಗುವ ಜನರ ಸಂಖ್ಯೆ ಅಧಿಕವಾಗುತ್ತಿದೆ.

ಒಂದು ಕುಟುಂಬದಿಂದ ಒಬ್ಬರು ಮಾತ್ರ ಹೊರಗೆ ಬರಲು ಅವಕಾಶ

ಒಂದು ಕುಟುಂಬದಿಂದ ಒಬ್ಬರು ಮಾತ್ರ ಹೊರಗೆ ಬರಲು ಅವಕಾಶ

ಚೀನಾ ಸರ್ಕಾರ ತನ್ನ ಸರ್ವಾಧಿಕಾರಿ ನಿರ್ಧಾರಗಳಿಗೆ ಹೆಸರುವಾಸಿಯಾಗಿದೆ. ಇದು ಈಗ ಷೆಂಗೆನ್ ನಗರದಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಿದೆ. ಇದರ ಅಡಿಯಲ್ಲಿ ಯಾವುದೇ ಮನೆಯಿಂದ ಒಬ್ಬರು ಅಥವಾ ಇಬ್ಬರು ಸದಸ್ಯರು ಮಾತ್ರ ಸರಕುಗಳನ್ನು ಪಡೆಯಲು ಹೊರಗೆ ಹೋಗಬಹುದು. ಇದಕ್ಕಿಂತ ಹೆಚ್ಚು ಜನರು ಹೊರಗೆ ಹೋದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಈ ನಗರದ ಜನಸಂಖ್ಯೆ 17 ಮಿಲಿಯನ್. ಅಂತಹ ನಿರ್ಬಂಧಗಳನ್ನು ವಿಧಿಸದಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಚೀನಾ ಸರ್ಕಾರ ಹೇಳಿದೆ.

Recommended Video

ಪಾಕಿಸ್ತಾನದಲ್ಲಿ ಸ್ವಪಕ್ಷೀಯರ ವಿರೋಧ ಕಟ್ಟಿಕೊಂಡ Imran Khan ಸರ್ಕಾರ ಅವನತಿಯತ್ತ... | Oneindia Kannada

English summary
Corona epidemic continues to wreak havoc all over the world. Now many vaccines have come in the market, due to which the death rate is decreasing than before, but people have to live life with restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X