Frank Caprio: ಅಮೆರಿಕಾದ ಅತ್ಯಂತ ಉತ್ತಮ ನ್ಯಾಯಾಧೀಶ, ಕರುಣಾಮಯಿ ಫ್ರಾಂಕ್ ಕ್ಯಾಪ್ರಿಯೊ ಇನ್ನಿಲ್ಲ!

Frank Caprio: ಪೊಲೀಸ್ ಹಾಗೂ ನ್ಯಾಯಾಂಗ ಸೇರಿದಂತೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಕೆಲವರು ಮಾತ್ರ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ಅವರ ಕರ್ತವ್ಯವನ್ನೂ ನಿರ್ವಹಿಸುವುದರೊಂದಿಗೆ ಕರುಣಾಮಯಿಯಾಗಿ ಹಾಗೂ ಅಂತಃಕರಣದಿಂದ ಕೆಲಸ ಮಾಡುತ್ತಾರೆ. ಅವರಲ್ಲಿ ಅಮೆರಿಕದ ಅತ್ಯಂತ ಒಳ್ಳೆಯ ನ್ಯಾಯಾಧೀಶರು ಹಾಗೂ ಸಹೃದಯಿ ಎಂದೇ ಖ್ಯಾತಿ ಗಳಿಸಿರುವ ನಿವೃತ್ತ ಪ್ರಾವಿಡೆನ್ಸ್ ಮುನ್ಸಿಪಲ್ ಕೋರ್ಟ್ ಮುಖ್ಯ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ಅವರು ಸಹ ಒಬ್ಬರು. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಫ್ರಾಂಕ್ ಕ್ಯಾಪ್ರಿಯೊ ಅವರು ಬುಧವಾರ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.

ಫ್ರಾಂಕ್ ಕ್ಯಾಪ್ರಿಯೊ ಅವರು ಕೇವಲ ಅಮೆರಿಕಾದಲ್ಲಿ ಮಾತ್ರವಲ್ಲಿ ವಿಶ್ವದಲ್ಲೇ ಖ್ಯಾತಿ ಗಳಿಸಿದ್ದರು. ಅವರ ಸರಳತೆ ಹಾಗೂ ಕಾನೂನು ಮತ್ತು ಮಾನವೀಯತೆಯನ್ನು ಹೊಂದಾಗಿ ತೆಗೆದುಕೊಂಡು ಹೋಗುವ ಪರಿ ಜನಸಾಮಾನ್ಯರಲ್ಲಿ ಬೆರಗು ಮೂಡಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳನ್ನು ನೋಡಿ ಮೆಚ್ಚಿಕೊಳ್ಳದವರೇ ಇಲ್ಲ ಎನ್ನುವಷ್ಟು ಇವರ ವಿಡಿಯೋಗಳು ವೈರಲ್ ಆಗಿರುವುದು ಇದೆ.

Beloved Judge Frank Caprio Known for His Compassion Dies at 87

ಕಾಟ್ ಇನ್ ಪ್ರಾವಿಡೆನ್ಸ್ ಎನ್ನುವ ರಿಯಾಲಿಟಿ ಕೋರ್ಟ್ ಶೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರು ಮನ್ನಣೆ ಗಳಿಸಿದ್ದರು. ಅತ್ಯಂತ ಕರುಣಾಮಯಿ ನ್ಯಾಯಾಧೀಶರು ಹಾಗೂ ಸಹೃದಯಿ ಎನ್ನುವ ಖ್ಯಾತಿಯನ್ನು ಇವರು ಗಳಿಸಿದ್ದರು. ಇವರ ವಿಡಿಯೋಗಳು ಅಮೆರಿಕಾ ಮಾತ್ರವಲ್ಲ ಭಾರತವೂ ಸೇರಿದಂತೆ ವಿಶ್ವದಾದ್ಯಂತ ವೈರಲ್ ಆಗಿರುವುದು ಇದೆ. ಮೇದೋಜ್ಜೀರಕ (Pancreatic) ಗ್ರಂಥಿಯ ಕ್ಯಾನ್ಸರ್‌ನಿಂದ ಅವರು ಬಳಲುತ್ತಿದ್ದರು. ಸುದೀರ್ಘ ಚಿಕಿತ್ಸೆಯ ನಂತರ ಅವರು ಬುಧವಾರ (ಸ್ಥಳೀಯ ಕಾಲಮಾನದ ಅನುಸಾರ) ಮೃತಪಟ್ಟಿದ್ದಾರೆ.

ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ಅವರ ನಿಧನಕ್ಕೆ ಅವರ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರು ಸುರಿಸಿದ್ದಾರೆ. ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ಅವರ ನಿಧನದ ಬಗ್ಗೆ ಅವರ ಸೋಷಿಯಲ್ ಮೀಡಿಯಾದ ಪೋಸ್ಟ್‌ ಮೂಲಕ ಹಂಚಿಕೊಳ್ಳಲಾಗಿದೆ. "ಫ್ರಾಂಕ್ ಕ್ಯಾಪ್ರಿಯೊ ಅವರ ಸಹಾನುಭೂತಿ, ಸಹೃದಯತೆ, ಸಂವೇದನಶೀಲತೆ ಹಾಗೂ ಜನರ ಒಳ್ಳೆಯತನವನ್ನು ಗುರುತಿಸುವ ಮೂಲಕ ನ್ಯಾಯಾಲಯದಲ್ಲಿ ಮಾತ್ರವಲ್ಲ ಅದರ ಆಚೆಗೂ ಅವರು ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿದ್ದರು. ವಾತ್ಸಲ್ಯ, ಹಾಸ್ಯ ಹಾಗೂ ದಯಾಮಯಿ ಸ್ವಭಾವವನ್ನು ತಿಳಿದಿರುವ ಎಲ್ಲರಿಗೂ ಇದು ನೋವುಂಟು ಮಾಡುವ ಸಂಗತಿಯಾಗಿದೆ" ಎಂದು ಈ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಯಾರು ಈ ಫ್ರಾಂಕ್ ಕ್ಯಾಪ್ರಿಯೋ

ಫ್ರಾಂಕ್ ಕ್ಯಾಪ್ರಿಯೊ ರೋಡ್ ಎನ್ನುವವರು ಐಲೆಂಡ್‌ನಲ್ಲಿ ಪುರಸಭೆಯ ನ್ಯಾಯಾಧೀಶರಾಗಿದ್ದರು. 1936 ರಲ್ಲಿ ರೋಡ್ ಐಲೆಂಡ್‌ನಲ್ಲಿ ಜನಿಸಿದ್ದ ಅವರು ಇಟಾಲಿಯನ್ ಮತ್ತು ಅಮೆರಿಕಾದ ಕುಟುಂಬದಲ್ಲಿ ಬೆಳೆದವರಾಗಿದ್ದಾರೆ. ಇವರು ನ್ಯಾಯದೊಂದಿಗೆ ವ್ಯಕ್ತಿಗಳು ಯಾವ ಕಾರಣಕ್ಕೆ ತಪ್ಪು ಮಾಡಿದರೂ ಹಾಗೂ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಎನ್ನುವುದನ್ನು ಕೇಳುತ್ತಿದ್ದರು.

ನ್ಯಾಯಾಂಗ ಸಾಕ್ಷಿ ಮಾತ್ರ ಕೇಳುತ್ತದೆ ಎನ್ನುವ ಸಂದರ್ಭದಲ್ಲಿ ಜನರ ಅಂತರಾಳವನ್ನೂ ಇವರು ಜಗತ್ತಿಗೆ ಕೇಳಿಸುತ್ತಿದ್ದರು. ಇವರ ಮಾತುಗಳು ಹಾಗೂ ಸಲಹೆಗಳು ಹಾಗೂ ಮಾರ್ಗದರ್ಶನ ಹಲವರ ಜೀವನವನ್ನು ಬದಲಾಯಿಸಿರುವುದೂ ಇದೆ. ಇದೇ ಕಾರಣಕ್ಕೆ ಇವರಿಗೆ ಅಮೆರಿಕಾದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+