ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜಿಂಗ್ ಈಗ ಮಾಸ್ಕ್‌ ಮುಕ್ತ : ಹೊಸ ಕೊರೊನಾ ಪ್ರಕರಣಗಳೂ ಇಲ್ಲ

|
Google Oneindia Kannada News

ಬೀಜಿಂಗ್, ಆಗಸ್ಟ್ 21: ಬೀಜಿಂಗ್‌ನಲ್ಲಿ ಕಳೆದ 13 ದಿನಗಳಿಂದ ಒಂದೂ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮಾಸ್ಕ್ ಮುಕ್ತ ನಗರ ಎಂದು ಘೋಷಿಸಲಾಗಿದೆ.

Recommended Video

Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

ಮನೆಯಿಂದ ಹೊರಗೆ ಬರುವ ಮುನ್ನ ಇನ್ನುಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.ನಿಯಮವನ್ನು ಸಡಿಲಗೊಳಿಸಿದರೂ ಕೂಡ ಬೀಜಿಂಗ್‌ನಲ್ಲಿ ಜನರು ಮಾಸ್ಕ್‌ ಧರಿಸಿರುವುದು ಕಂಡುಬಂದಿದೆ.

ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್

ಮಾಸ್ಕ್‌ ಧರಿಸುವುದುರಿಂದ ತಾವು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಮೂಡುತ್ತದೆ. ಸಾಮಾಜಿಕ ಅಂತರವನ್ನೂ ಕೂಡ ಕಾಯ್ದುಕೊಂಡರೆ ಒಳಿತು.

Beijing Is Mask Free Now

ಆರೋಗ್ಯ ಇಲಾಖೆ ಹೇಳಿದೆ ಎಂದು ನಾನು ಮಾಸ್ಕ್ ಹಾಕದೆ ಹೊರಗೆ ತೆರಳಬಹುದು ಆದರೆ ಎಲ್ಲರೂ ನನ್ನನ್ನು ಒಪ್ಪಿಕೊಳ್ಳುತ್ತಾರೆಯೇ, ಮಾಸ್ಕ್ ಹಾಕದೇ ಇರುವವರನ್ನು ನೋಡಿದರೆ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು 24 ವರ್ಷದ ಮಹಿಳೆ ತಿಳಿಸಿದ್ದಾರೆ.

ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ನಿಯಮವನ್ನು ಸಡಿಲಗೊಳಿಸಲಾಗುತ್ತಿದೆ. ಎರಡು ಬಾರಿ ಲಾಕ್‌ಡೌನ್ ವಿಧಿಸಲಾಗಿತ್ತು. ಇದೀಗ ಸಹಜ ಸ್ಥಿತಿಯತ್ತ ನಗರ ಮರಳುತ್ತಿದೆ.
ಏಪ್ರಿಲ್ ತಿಂಗಳಿನಲ್ಲಿಯೇ ಜನರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು.

ಆದರೆ ಮತ್ತೆ ಎರಡನೇ ಸುತ್ತಿನ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಚೀನಾದಲ್ಲಿ ಕಳೆದ ಐದು ದಿನಗಳಿಂದ ಒಂದೇ ಒಂದು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಬೇರೆ ಕಡೆಯಿಂದ ಚೀನಾಗೆ ಬಂದ 20 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಚೀನಾ ಗಡಿಯಲ್ಲಿ ನಿಷೇಧ ಹೇರಲಾಗಿದೆ.

English summary
Health authorities in China's capital Beijing have removed a requirement for people to wear masks outdoors, further relaxing rules aimed at preventing the spread the novel coronavirus after the city reported 13 consecutive days without new cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X