ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸದಲ್ಲಿ ಕಂಡು ಕೇಳರಿಯದ ಕುಸಿತ ಕಂಡ ಕಚ್ಚಾತೈಲ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 20: ಜಗತ್ತಿನಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೇಡಿಕೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ ಶೂನ್ಯ ಮಟ್ಟಕ್ಕೆ ಕುಸಿತ ಕಂಡಿದೆ.

ಒಂದೇ ದಿನ 2 ಡಾಲರ್ ಕುಸಿತಗೊಂಡಿದೆ. ಇದರಿಂದ ಕಚ್ಚಾತೈಲಗಳ ಬೇಡಿಕೆ 34 ವರ್ಷಗಳ ಅತ್ಯಂತ ಕಡಿಮೆ ದರಕ್ಕೆ ಕುಸಿದಿದೆ.ಅಮರಿಕ ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪ್ರಕಾರ ಪ್ರತಿ ಬ್ಯಾರೆಲ್ ಕಚ್ಚಾತೈಲಕ್ಕೆ ಕೇವಲ 22 ಡಾಲರ್‌ನಷ್ಟಾಗಿದೆ.

ಕೊರೊನಾ ಮಹಾಮಾರಿ ಒಕ್ಕರಿಸಿಕೊಳ್ಳುವ ಮುನ್ನ ಪ್ರತಿ ಬ್ಯಾರೆಲ್ ಕಚ್ಚಾತೈಲ ಬೆಲೆ ಸುಮಾರು 60 ಡಾಲರ್‌ನಷ್ಟಿತ್ತು.

American Oil Crashes Below $0 A Barrel

ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಸಂಪೂರ್ಣ ಕಡಿಮೆಯಾಗಿದೆ.

ಒಂದೆಡೆ ವಾಹನಗಳು ಪೆಟ್ರೋಲ್ ಬಳಕೆ ಮಾಡುತ್ತಿಲ್ಲ, ಕೈಗಾರಿಕೆಗಳೂ ಸಂಪೂರ್ಣ ಸ್ಥಗತಗೊಂಡಿದೆ. ಹೀಗಾಗಿ ಪೆಟ್ರೋಲ್ ಉತ್ಪನ್ನಗಳನ್ನು ಬಳಕೆ ಮಾಡುವವರೇ ಇಲ್ಲದಂತಾಗಿದೆ.

ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ.

ಯುಎಸ್ ಕಚ್ಚಾತೈಲ ಫ್ಯೂಚರ್ ಬೆಲೆ ಒಂದೇ ದಿನ ಶೇ 99ರಷ್ಟು ಕುಸಿತ ಕಂಡಿದೆ. ಬೇಡಿಕೆಗೆ ತಕ್ಕ ಪೂರೈಕೆಯಾದಾಗ ಬೆಲೆಗೆ ಸ್ಥಿರತೆ ಬರುತ್ತದೆ. ಹಾಗೆಯೇ ಇದೀಗ ಬೇಡಿಕೆ ಕಡಿಮೆಯಾಗಿದ್ದು, ಪೂರೈಕೆ ಹೆಚ್ಚಿದೆ. ಲಾಕ್‌ಡೌನ್ ಮುಗಿದ ಬಳಿಕ ಬೇಡಿಕೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

English summary
spectacular collapse in oil markets is showing no signs of easing, as the coronavirus crisis saps demand and producers run out of places to store all their excess barrels of crude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X