ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಾಲಾಬಾದ್ ಜೈಲಿನಲ್ಲಿ ರಕ್ತದೋಕುಳಿ ಹರಿಸಿದ ಉಗ್ರ

By ಅನಿಕೇತ್
|
Google Oneindia Kannada News

ಕಾಬೂಲ್, ಆಗಸ್ಟ್ 03: ಉಗ್ರರ ಕೈಯಲ್ಲಿ ಸಿಲುಕಿ ನಲುಗಿರುವ ಅಫ್ಘಾನಿಸ್ತಾನದಲ್ಲಿ ಮತ್ತೆ ರಕ್ತದೋಕುಳಿ ಹರಿದಿದೆ. ಗನ್ ಹಿಡಿದು ಅಫ್ಘಾನಿಸ್ತಾನದ ಜೈಲಿಗೆ ನುಗ್ಗಿದ ಉಗ್ರಪಡೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ ಹಿನ್ನೆಲೆ ಸ್ಥಳದಲ್ಲೇ ಹತ್ತಾರು ಜನ ಅಸುನೀಗಿದ್ದಾರೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು | Oneindia Kannada

ತಕ್ಷಣ ಕಾರ್ಯಾಚರಣೆಗೆ ಇಳಿದ ಅಫ್ಘಾನಿಸ್ತಾನದ ಯೋಧರು, ಉಗ್ರರ ಸದೆಬಡಿಯಲು ಗುಂಡಿನ ಕಾಳಗ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನದ ಜಲಲಾಬಾದ್ ನಲ್ಲಿ ಜೈಲಿನ ಮುಖ್ಯದ್ವಾರದ ಬಳಿ ನಿನ್ನೆ ರಾತ್ರಿ ವಾಹನದಲ್ಲಿ ಬಂದು ಬಾಂಬ್ ಸ್ಫೋಟಿಸಿದ ಉಗ್ರರು ಸೀದಾ ಒಳಗೆ ನುಗ್ಗಿ ಗುಂಡಿನ ಮಳೆಗರೆದಿದ್ದಾರೆ. ಭದ್ರತಾಪಡೆ ಹಾಗೂ ಐಎಸ್‌ಐಲ್ ಉಗ್ರರ ಮಧ್ಯೆ ಗುಂಡಿನ ಕಾಳಗ ನಡೆದಿದೆ.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!

ISIL ಸಂಘಟನೆ ISISನ ಸಹ ಸಂಘಟನೆಯಾಗಿದೆ. ISIL ಅಧಿಕೃತವಾಗಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಇನ್ನು ಘರ್ಷಣೆಯಲ್ಲಿ ಜೈಲಿನಲ್ಲಿದ್ದ ಕೈದಿಗಳು ಮಾತ್ರವಲ್ಲದೆ ನಾಗರಿಕರು, ಜೈಲು ಅಧಿಕಾರಿಗಳು ಸೇರಿದಂತೆ ಅಫ್ಘಾನಿಸ್ತಾನದ ಯೋಧರು ಕೂಡ ಮೃತಪಟ್ಟಿದ್ದಾರೆ. ಹಾಗೇ ದಾಳಿಯಲ್ಲಿ 43ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಬಹಳಷ್ಟು ಜನರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಸಂಭವವಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ.

21 Killed In Afghanistans Prison

ಅಫ್ಘಾನಿಸ್ತಾನದಲ್ಲಿ ದಿನವೂ ದೀಪಾವಳಿ..!

ಅಫ್ಘಾನಿಸ್ತಾನದಲ್ಲಿ ದಿನನಿತ್ಯ ಸ್ಫೋಟದ ಸದ್ದು ಕೇಳುತ್ತಲೇ ಇರುತ್ತದೆ. ಅಫ್ಘಾನಿಸ್ತಾನದಲ್ಲಿ ಪ್ರತಿನಿತ್ಯ ದೀಪಾವಳಿ ಎಂಬಂತಾಗಿದೆ. ಕೆಲ ದಿನಗಳ ಹಿಂದೆ ಈದ್ ಹಬ್ಬದಂದು ಬಾಂಬ್ ಬ್ಲಾಸ್ಟ್ ಮಾಡಿದ್ದ ಉಗ್ರರು 17 ಮಂದಿಯನ್ನ ಬಲಿ ಪಡೆದಿದ್ದರು. ಈ ಘಟನೆ ನಡೆದ ಜಾಗದಲ್ಲಿ ರಕ್ತದ ಕಲೆ ಮಾಸುವ ಮೊದಲೇ ಮತ್ತೆ ಅಫ್ಘಾನಿಸ್ತಾನದಲ್ಲಿ ಉಗ್ರರ ದಾಳಿ ನಡೆದಿದೆ. ಅಷ್ಟಕ್ಕೂ ಇದು ಮೊದಲ ದಾಳಿಯಲ್ಲ, ಕೊನೆಯ ದಾಳಿಯೂ ಅಲ್ಲ. ಅಫ್ಘಾನಿಸ್ತಾನದಲ್ಲಿ ದಿನವೂ ಉಗ್ರರು ಬಾಂಬ್ ಬ್ಲಾಸ್ಟ್ ಮಾಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಅಫ್ಘಾನಿಸ್ತಾನದ ಸಂಸತ್ ಗುರಿಯಾಗಿಸಿ ದಾಳಿ ನಡೆದಿತ್ತು. ದಾಳಿ ಸಂದರ್ಭದಲ್ಲಿ ಸಂಸತ್ ಅಧಿವೇಶನ ಕೂಡ ನಡೆಯುತ್ತಿತ್ತು. ಉಗ್ರರ ದಾಳಿಯ ಭೀಕರತೆಗೆ ಸಾಕ್ಷಿ ಎಂಬಂತೆ ಅಂದು ಅಫ್ಘಾನಿಸ್ತಾನದ ಸಂಸತ್ ಭವನ ಅಲ್ಲಾಡಿ ಹೋಗಿತ್ತು. ಇಂತಹ ಘಟನೆಗಳು ಅಫ್ಘಾನಿಸ್ತಾನದಲ್ಲಿ ಸಾಮಾನ್ಯ ಎಂಬಂತಾಗಿದೆ.

ಕೊರೊನಾವೈರಸ್‌ಗೆ ಹೆದರಿ ಬಾಲ ಮುದುರಿಕೊಂಡ ಉಗ್ರರು ಕೊರೊನಾವೈರಸ್‌ಗೆ ಹೆದರಿ ಬಾಲ ಮುದುರಿಕೊಂಡ ಉಗ್ರರು

ತಾಲಿಬಾನ್ ಅಲ್ಲ ಅಲ್ಲ..!

ಅಫ್ಘಾನಿಸ್ತಾನದಲ್ಲಿ ದಶಕಗಳ ಕಾಲ ಬಲಾಢ್ಯರಾಗಿ ಮೆರಿದಿದ್ದು ತಾಲಿಬಾನಿ ಉಗ್ರರು. ಆದರೆ ಈಗ ಅಲ್ಲಿ ತಾಲಿಬಾನ್ ಮಾತ್ರ ಬಲಾಢ್ಯವಾಗಿ ಉಳಿದಿಲ್ಲ. ಬದಲಾಗಿ ISISನ ಸಹ ಸಂಘಟನೆಗಳು ಕೂಡ ಸಿಕ್ಕಾಪಟ್ಟೆ ಸಕ್ರಿಯ ಆಗಿವೆ. ಅಫ್ಘಾನಿಸ್ತಾನದಲ್ಲಿ ಜನ ಹೊರಗೆ ಹೆಜ್ಜೆ ಹಾಕುವಾಗ ಜೀವ ಕೈಯಲ್ಲಿಡಿದು ಸಾಗಬೇಕು. ಇನ್ನು ಯಾರ ಮನೆ ಮೇಲೆ ಅದ್ಯಾವಾಗ ಉಗ್ರರ ದಂಡು ಗುಂಡಿನ ಮಳೆಗರೆಯುತ್ತೋ ಎಂಬ ಆತಂಕ ಅಲ್ಲಿರುತ್ತದೆ. ರಸ್ತೆಯಲ್ಲಂತೂ ನೆಮ್ಮದಿಯಾಗಿ ವಾಹನ ಓಡಿಸಿಕೊಂಡು ಹೋಗಲು ಸಾಧ್ಯವಾಗದಷ್ಟು ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದರಲ್ಲೂ ಅಮೆರಿಕ ಹಂತ ಹಂತವಾಗಿ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಅಲ್ಲಿನ ಸರ್ಕಾರವೂ ಕೂಡ ತಾಲಿಬಾನ್, ಐಎಸ್ಐಎಸ್ ಸೇರಿದಂತೆ ಬಲಾಢ್ಯ ಉಗ್ರ ಸಂಘಟನೆಗಳ ಎದುರು ಮಂಡಿಯೂರಿದೆ. ಹೀಗೆ ಅಫ್ಘಾನಿಸ್ತಾನದಲ್ಲಿ ಜನರ ಜೀವಕ್ಕೆ ಉಗ್ರರ ಬಂದುಕೂಗಳೇ ಗ್ಯಾರಂಟಿ ನೀಡುವಂತಾಗಿದೆ.

English summary
A Group of ISIL Terrorists raided prison in Afghanistan's Jalalabad overnight. 21 people have been killed in ongoing fighting between Afghan security forces and Terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X