Nobel Peace Prize 2025: ಮರಿಯಾ ಕೊರಿನಾ ಮಚಾಡೊಗೆ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ: ಟ್ರಂಪ್‌ಗೆ ಮುಖಭಂಗ!

Donald Trump: ವಿಶ್ವದ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾಗಿರುವ ನೊಬೆಲ್ ಶಾಂತಿ ಪ್ರಶಸ್ತಿಯು ಈ ಬಾರಿ ಮರಿಯಾ ಕೊರಿನಾ ಮಚಾದೊ (ವೆನಿಜುವೆಲಾ) ಅವರಿಗೆ ಸಂದಿದೆ. ಮರಿಯಾ ಕೊರಿನಾ ಮಚಾಡೊ ಅವರು ವೆನಿಜುವೆಲಾದ ವಿಪಕ್ಷ ನಾಯಕಿಯಾಗಿದ್ದಾರೆ. 2025ನೇ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿಯಲ್ಲಿ ಭಾರೀ ಪೈಪೋಟಿ ಇತ್ತು. ಮುಖ್ಯವಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನಾನು ವಿಶ್ವದಾದ್ಯಂತ ಭಾರತ - ಅಮೆರಿಕಾ ಸೇರಿದಂತೆ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಹೀಗಾಗಿ ನನಗೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದಿದ್ದರು.

ಇದೀಗ ವೆನಿಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಪ್ರಶಸ್ತಿ ಸಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ. ಒಂದೊಮ್ಮೆ ಈ ಎರಡೂ ದೈತ್ಯ ನ್ಯೂಕ್ಲಿಯರ್ (ಪರಮಾಣು ಶಕ್ತಿ) ಇರುವ ರಾಷ್ಟ್ರಗಳ ನಡುವೆ ಯುದ್ಧ ನಡೆದಿದ್ದೇ ಆದರೆ ವಿಶ್ವಕ್ಕೆ ಭಾರೀ ಆಪತ್ತು ಎದುರಾಗುತ್ತಿತ್ತು. ಅಲ್ಲದೇ ಕೋಟ್ಯಾಂತರ ಜನ ಪ್ರಾಣವನ್ನು ಕಳೆದುಕೊಳ್ಳುವ ಆತಂಕವಿತ್ತು. ಆದರೆ ಅಮೇರಿಕಾದ ಮಧ್ಯ ಪ್ರವೇಶದಿಂದಾಗಿ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ವಿಶ್ವದ ಏಳು ಯುದ್ಧಗಳು ನಿಂತಿವೆ. ಹೀಗಾಗಿ, ನನಗೇ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಪದೇ ಪದೇ ಪುನರುಚ್ಚರಿಸಿರುವುದು ಇದೆ.

2025 Nobel Peace Prize Awarded to Maria Corina Machado Donald Trump Expresses Displeasure

ಅಲ್ಲದೇ ಪ್ರಪಂಚದ 7 ಯುದ್ಧಗಳನ್ನು ನಾನೇ ನಿಲ್ಲಿಸಿದ್ದೇನೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದರು. ಆದರೆ ಇದೇ ಸಂದರ್ಭದಲ್ಲಿ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ, ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಈ ಯುದ್ಧಗಳ ಹಿಂದೆ ಅಮೇರಿಕಾ ಸೇನೆಯ ಬೆಂಬಲ ಹಾಗೂ ಆರ್ಥಿಕ ನೆರವನ್ನು ವಿಶ್ವ ನೋಡುತ್ತಲ್ಲೇ ಇದೆ. ಅಲ್ಲದೇ ಇಸ್ರೇಲ್ ಮತ್ತು ಗಾಝಾದ ನಡುವಿನ ಸಂಘರ್ಷವು ಇನ್ನೂ ಮುಂದುವರಿದಿದೆ. ಈ ಭಾಗದಲ್ಲಿ ಯುದ್ಧ ವಿರಾಮಕ್ಕೆ ಮೊದಲ ಹಂತದ ಪ್ರಯತ್ನ ಮಾತ್ರವೇ ನಡೆದಿದೆ. ಕದನ ವಿರಾಮಕ್ಕೆ 20 ಅಂಶಗಳ ಕಾರ್ಯಸೂಚಿ ನಿಗದಿ ಆಗಿದೆ. ಆದರೆ, ಅದರಲ್ಲಿ ಇನ್ನೂ ಇದರಲ್ಲೂ 19 ಪಾಯಿಂಟ್ಸ್‌ಗಳು ಇವೆ.

ಟ್ರಂಪಾಪತಿಗಳ ಸರ್ವ ಪ್ರಯತ್ನಗಳನ್ನೂ ಮೀರಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಈ ಬಾರಿ ಮರಿಯಾ ಕೊರಿನಾ ಮಚಾದೊ (ವೆನಿಜುವೆಲಾ) ಅವರಿಗೆ ನೀಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದು, ನೊಬೆಲ್ ಪ್ರಶಸ್ತಿ ವಿಚಾರದಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನಗೆಪಾಟಲಿಗೆ ಗುರಿಯಾಗಿದ್ದಾರೆ.

ಯಾರು ಈ ಮರಿಯಾ ಕೊರಿನಾ ಮಚಾಡೊ ?

ಇನ್ನು ಈ ಬಾರಿಯ ನೊಬೆಲ್ ಪ್ರಶಸ್ತಿಯು ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವದ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದ, ಸರ್ವಾಧಿಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಶಾಂತಿಯುತ ಪರಿವರ್ತನೆಗೆ ಶ್ರಮಿಸಿದ ಮಾರಿಯಾ ಕೊರಿನಾ ಮಚಾಡೊ ಅವರಿಗೆ ಸಂದಿದೆ. ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರೀ ಪೈಪೋಟಿ ಇತ್ತು. ಅಲ್ಲದೇ ಒಟ್ಟು 338 ಗಣ್ಯರು ಹಾಗೂ ಸಂಸ್ಥೆಗಳು ಈ ಬಾರಿ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಇದಲ್ಲದೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸಹ ಪೈಪೋಟಿ ನಡೆಸಿದ್ದರು.

ಮರಿಯಾ ಕೊರಿನಾ ಮಚಾಡೊ ಪ್ಯಾರಿಸ್ಕಾಃ ವೆನೆಜುವೆಲಾದ ರಾಜಕಾರಣಿಯಾಗಿ ಗುರಿತಿಸಿಕೊಂಡಿದ್ದಾರೆ. ಕೈಗಾರಿಕಾ ಎಂಜಿನಿಯರ್ ಆಗಿರುವ ಅವರು ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿಯಾಗಿದ್ದರು. ಅಲ್ಲದೇ 2011 ರಿಂದ 2014ನೇ ಅವಧಿಯಲ್ಲಿ ರಾಷ್ಟ್ರೀಯ ವಿಧಾನಸಭೆಯ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜನಪರ ಮತ್ತು ಸಾಮಾಜಿಕ ಕಾರ್ಯಗಳಿಂದ ಅವರು ವಿಶ್ವದಾದ್ಯಂತ ಪ್ರಸಿದ್ಧಿ ಗಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+