₹1.5 ಲಕ್ಷ ಸಂಬಳದ ಕೆಲಸ ಬಿಟ್ಟು ಸ್ವಂತ ಉದ್ಯಮ ಪ್ರಾರಂಭಿಸಿದ ಯುವತಿ; ಲಿಂಕ್ಡ್‌ಇನ್‌ನ ಈ ಟ್ರಿಕ್ಸ್‌ನಿಂದ 6 ಪಟ್ಟು ಹೆಚ್ಚು ಆದಾಯ!
ಕೆಲವೊಮ್ಮೆ ಸಣ್ಣ ನಿರ್ಧಾರಗಳು ಸಹ ಜೀವನವನ್ನು ಬದಲಾಯಿಸಬಲ್ಲದು ಎನ್ನುವುದಕ್ಕೆ ಶಿವಾಂಗಿ ಎನ್ನುವ ಯುವತಿ ಸಾಕ್ಷಿಯಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಇದೀಗ ಅವರೇ ಸ್ವಂತವಾಗಿ ಹಾಗೂ ಅದಕ್ಕಿಂತಲೂ 6 ಪಟ್ಟು ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಬಿಗ್ ಫೋರ್ ಸಂಸ್ಥೆಯಲ್ಲಿ ತಿಂಗಳಿಗೆ 1.5 ಲಕ್ಷ ರೂ.ಗಳ ಕೆಲಸ ಮಾಡುತ್ತಿದ್ದ ಯುವತಿ ಆ ಕೆಲಸದಲ್ಲಿ ಹೆಚ್ಚು ಸ್ವಾತಂತ್ರ್ಯವಿಲ್ಲ - ಆದಾಯವೂ ಹೆಚ್ಚಾಗಿಲ್ಲ ಎಂದು ತಾವೇ ಇರುವ ಅವಕಾಶಗಳಲ್ಲಿಯೇ ಮಾಡಿದ ಪ್ರಯೋಗವೊಂದು ಭಾರೀ ಯಶಸ್ಸು ಕಂಡಿದೆ. ಗುರುಗ್ರಾಮ್‌ನ ಈ ವೃತ್ತಿಪರರು ತಮ್ಮ ಸ್ನೇಹಿತರು ವ್ಯವಹಾರ ಮಾಡುವುದನ್ನು ನೋಡುತ್ತಿದ್ದರು ಮತ್ತು ಅವರು ಅದೇ ರೀತಿ ಮಾಡಬಾರದ್ಯಾಕೆ ಎಂದಾಗಲೇ ಸಣ್ಣ ಐಡಿಯಾ ಬಂದಿದೆ. ಈ ಐಡಿಯಾ ಇದೀಗ ಅವರ ಬದುಕನ್ನೇ ಬದಲಾಯಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಹೊಸದಾಗಿ ಏನನ್ನಾದರೂ ಪ್ರಾರಂಭಿಸಬೇಕು ಎನ್ನುವ ಆಲೋಚನೆ ಬಂತಾದರೂ ಅದರಲ್ಲಿ ಒಂದು ಸಮಸ್ಯೆ ಇತ್ತು. ಕಂಟೆಂಟ್ ಕ್ರಿಯೇಟರ್ ಆಗುವುದು ಅಥವಾ ಆನ್‌ಲೈನ್‌ನಲ್ಲಿ ತಮ್ಮನ್ನು ತಾವು ಪ್ರಸ್ತುತಪಡಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ರಾತ್ರೋರಾತ್ರಿ ಪೂರ್ಣಾವಧಿಯ ಕಂಟೆಂಟ್ ಕ್ರಿಯೇಟರ್ ಆಗಲು ಪ್ರಯತ್ನಿಸುವ ಬದಲು ಅವರು ಲಿಂಕ್ಡ್‌ಇನ್‌ನಲ್ಲಿಯೇ ಸಣ್ಣ ಹೆಜ್ಜೆ ಇರಿಸಿದರು. ಲಿಂಕ್ಡ್‌ಇನ್‌ನಲ್ಲಿ ತಮ್ಮ ಕೆಲಸ ಮತ್ತು ವೃತ್ತಿಪರ ಅನುಭವದ ಬಗ್ಗೆ ಪೋಸ್ಟ್ ಮಾಡಲು ಪ್ರಾರಂಭಿಸಿದರು.

ಕ್ರಮೇಣ, ಜನರು ತಮ್ಮ ಲಿಂಕ್ಡ್‌ಇನ್ ಖಾತೆಯನ್ನು ಉತ್ತಮವಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಅವರನ್ನು ಸಂಪರ್ಕಿಸಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಅವರು 8 ರಿಂದ 9 ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತದ ಹೊರಗಿನವರು. ಈ ಮೂಲಕ ಶಿವಾಂಗಿ ಅವರು ತಮ್ಮ ಉದ್ಯೋಗದಲ್ಲಿ ಗಳಿಸುತ್ತಿದ್ದ ಆದಾಯಕ್ಕಿಂತ ಐದರಿಂದ ಆರು ಪಟ್ಟು ಹೆಚ್ಚು ಗಳಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವೃತ್ತಿಯನ್ನು ಪ್ರಾರಂಭಿಸುವುದಕ್ಕೆ ಮುಖ್ಯವಾಗಿ ಏನು ಕಾರಣವಾಯಿತು ಎನ್ನುವ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಬಿಗ್ ಫೋರ್ ಸಂಬಳದಿಂದ ತಮ್ಮ ಸ್ವಂತ ವ್ಯವಹಾರವನ್ನು ನಿರ್ಮಿಸುವವರೆಗಿನ ಪಯಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಿವಾಂಗಿ ಎನ್ನುವ ಯುವತಿ ಗುರುಗ್ರಾಮ್‌ನಲ್ಲಿರುವ ಬಿಗ್ ಫೋರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕೆಲಸದಿಂದ ಅವರು ಪ್ರತಿ ತಿಂಗಳು ಸುಮಾರು 1.5 ಲಕ್ಷ ರೂ. ಗಳಿಸುತ್ತಿದ್ದರು. ಆದರೆ ಆ ಕೆಲಸ ಆಕೆಗೆ ಸ್ವಾತಂತ್ರ್ಯವನ್ನು ನೀಡಲಿಲ್ಲ.
ಶಿವಾಂಗಿ ಕೆಲಸ ಬದಲಾಯಿಸಲು ಕಾರಣವೇನು
ತಮ್ಮ ಜೀವನವನ್ನು ಬೇರೊಬ್ಬರ ಕಂಪನಿಯನ್ನು ನಿರ್ಮಿಸುವುದರಲ್ಲಿ ಕಳೆಯಲು ಅವರು ಬಯಸಲಿಲ್ಲ. ಆಕೆಯ ಹತ್ತಿರವಿರುವ ಯಾರಾದರೂ ತಮ್ಮದೇ ಉದ್ಯಮವನ್ನು ನಿರ್ಮಿಸುವಾಗ ನಾನೂ ಯಾಕೆ ಪ್ರಾರಂಭಿಸಬಾರದು ಎಂದು ಅವರು ನಿರ್ಧರಿಸಿದರು. ಆದರೂ, ಆನ್‌ಲೈನ್‌ನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಕೆಲಸಕ್ಕೆ ಅವರು ಮುಂದಾಗಲಿಲ್ಲ. ಆದರೆ ಹಂತ ಹಂತವಾಗಿ ಕಂಟೆಂಟ್ ಕ್ರಿಯೇಟಿವಿಟಿ ಪ್ರಾರಂಭಿಸಿದರು. ಶಿವಾಂಗಿಯನ್ನು ಸಣ್ಣದಾಗಿ ಪ್ರಾರಂಭಿಸಲು ನಿರ್ಧರಿಸಿದರು.
ಶಿವಾಂಗಿ ಅವರ ವ್ಯವಹಾರವು ಮೊದಲ ಲಿಂಕ್ಡ್‌ಇನ್ ಪೋಸ್ಟ್‌ಗಳಿಂದ ಬೆಳೆದಿದೆ. ಅವರು ಈಗ ಸುಮಾರು 8-9 ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡುತ್ತಾರೆ, ಅವರಲ್ಲಿ ಹೆಚ್ಚಿನವರು ಭಾರತದ ಹೊರಗೆ ನೆಲೆಸಿದ್ದಾರೆ. ಬಿಗ್ ಫೋರ್ ಕೆಲಸದಲ್ಲಿ ತಿಂಗಳಿಗೆ ಗಳಿಸುತ್ತಿದ್ದ 1.5 ಲಕ್ಷ ರೂ.ಗಿಂತ ಐದರಿಂದ ಆರು ಪಟ್ಟು ಹೆಚ್ಚು ಗಳಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಲಿಂಕ್ಡ್‌ಇನ್ ಈಗ ಸಾಕಷ್ಟು ಬದಲಾಗಿದೆ
ಲಿಂಕ್ಡ್‌ಇನ್ ಅನ್ನು ಕೇವಲ ಉದ್ಯೋಗ ಅರ್ಜಿಗಳು ಮತ್ತು ನೇಮಕಾತಿಗಾಗಿ ಮಾತ್ರ ಬಳಸಲಾಗುತ್ತಿಲ್ಲ. ವೃತ್ತಿಪರರು ತಮ್ಮ ಪ್ರತಿಭೆ ಪ್ರದರ್ಶಿಸಲು, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮತ್ತು ಗ್ರಾಹಕರನ್ನು ಹುಡುಕಲು ಹೆಚ್ಚಾಗಿ ಬಳಸುತ್ತಿದ್ದಾರೆ. ಬರವಣಿಗೆ, ಸಲಹೆ, ಮಾರ್ಕೆಟಿಂಗ್, ವಿನ್ಯಾಸ ಅಥವಾ ವೈಯಕ್ತಿಕ ಬ್ರ್ಯಾಂಡಿಂಗ್‌ನಂತಹ ಸೇವೆಗಳನ್ನು ನೀಡುವ ಜನರಿಗೆ, ವೃತ್ತಿಪರ ಆನ್‌ಲೈನ್ ಬಳಕೆಗೂ ಲಿಂಕ್ಡ್‌ಇನ್ ಬಳಕೆ ಮಾಡುತ್ತಿದ್ದಾರೆ ಎಂದು ಶಿವಾಂಗಿ ಅವರು ಹೇಳಿದ್ದಾರೆ. ಇದರಿಂದ ಅವರ ಪ್ರಯತ್ನವು ಯಶಸ್ಸು ಕಂಡಿದೆ ಎಂದೂ ಹೇಳಲಾಗಿದೆ.
Even after earning ₹1.5L/month at a Big 4 in Gurugram, my friend Shivangi didn’t want to work.
— Riya Upreti (@riyaelity) August 17, 2026
She didn’t want to spend her life working for someone else.
She had watched me build my business and knew it was possible to build something of her own.
But she wasn’t comfortable… pic.twitter.com/omOd6y7zkT


Click it and Unblock the Notifications
