Get Updates
Get notified of breaking news, exclusive insights, and must-see stories!

ನರಕದಿಂದ ತಪ್ಪಿಸಿಕೊಂಡು ತವರಿಗೆ ಬಂದ ತಂಗಿ

ಪಾಕಿಸ್ತಾನದಲ್ಲಿ ಬೆದರಿಕೆಗೊಳಗಾಗಿ ಅಲ್ಲಿನ ಯುವಕನೊಬ್ಬನನ್ನು ಮದುವೆಯಾಗಿದ್ದ ಉಜ್ಮಾ, ಕೊನೆಗೂ ಅಲ್ಲಿಂದ ತಪ್ಪಿಸಿಕೊಂಡು ಕಾನೂನು ಹೋರಾಟ ನಡೆಸಿ, ಅದರಲ್ಲಿ ಜಯ ಕಂಡು ಭಾರತಕ್ಕೆ ವಾಪಸ್ಸಾಗಿದ್ದಾಳೆ.

ನವದೆಹಲಿ, ಮೇ 25: ಕಳೆದ ತಿಂಗಳು ಪಾಕಿಸ್ತಾನದಲ್ಲಿ ಬಲವಂತವಾಗಿ ಮದುವೆಯಾಗಿದ್ದ ಭಾರತೀಯ ಯುವತಿ ಉಜ್ಮಾ, ಮೇ 25ರಂದು ಭಾರತಕ್ಕೆ ವಾಪಸ್ಸಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಅವರಿಗೆ ಶುಭಾಷಯ ತಿಳಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸ್ವಾಗತ ಕೋರಿದ್ದಾರೆ. ಇದರ ಜತೆಗೆ ಉಜ್ಮಾ ಅವರಿಗಾದ ಪರಿಸ್ಥಿತಿಯ ಬಗ್ಗೆ ಖೇದವನ್ನೂ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ತನ್ನ ಪಾಕಿಸ್ತಾನದ ಗೆಳೆಯ ತಾಹಿರ್ ಅಲಿ ಎಂಬಾತನ ಜತೆಗೆ ಆ ದೇಶಕ್ಕೆ ಪ್ರಯಾಣ ಬೆಳೆಸಿದ್ದ ಉಜ್ಮಾರನ್ನು ಅಲ್ಲಿ ಬಲವಂತವಾಗಿ ಅಲಿ ತನ್ನೊಂದಿಗೆ ಮದುವೆ ಮಾಡಿಕೊಂಡಿದ್ದಾಗಿ ಉಜ್ಮಾ ಪಾಕಿಸ್ತಾನದಲ್ಲಿರುವ ಭಾರತೀಯ ಧೂತಾವಾಸಕ್ಕೆ ದೂರು ನೀಡಿದ್ದರು.[ಗನ್ ಪಾಯಿಂಟ್ ನಡಿ ಭಾರತೀಯ ಯುವತಿಗೆ ಪಾಕ್ ನಲ್ಲಿ ಮದುವೆ?]

Sushma Swaraj Welcomes Uzma who forcibly married a pak youth, on her return to India

ಏಪ್ರಿಲ್ ತಿಂಗಳಲ್ಲಿ ಮದುವೆಯಾಗಿ ಗಂಡನ ಮನೆಯಲ್ಲಿ ನರಕ ಯಾತನೆ ಅನುಭವಿಸಿದ್ದ ಆಕೆ, ಅದೊಂದು ದಿನ ತಪ್ಪಿಸಿಕೊಂಡು ಭಾರತೀಯ ಧೂತಾವಾಸಕ್ಕೆ ದೂರು ನೀಡುವಲ್ಲಿ ಯಶಸ್ವಿಯಾಗಿದ್ದಳು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಭಾರತ ಸರ್ಕಾರ, ಆ ಯುವತಿಗೆ ಪಾಕಿಸ್ತಾನದಲ್ಲಿನ ಧೂತಾವಾಸದಲ್ಲೇ ಉಳಿದುಕೊಳ್ಳಲು ಅನುಕೂಲ ಕಲ್ಪಿಸಿಕೊಟ್ಟಿತ್ತು. ಅಲ್ಲದೆ, ಆಕೆಯ ರಕ್ಷಣೆಗೆ ಕ್ರಮ ಕೈಗೊಂಡಿತ್ತು.

ಇದರ ಜತೆಯಲ್ಲೇ ಆಕೆ ಇಸ್ಲಾಮಾಬಾದ್ ನ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿದ್ದಳು. ಆ ಕೇಸು ಜಯಿಸಿರುವ ಆಕೆ, ನ್ಯಾಯಾಲಯಕ್ಕೆ ತನ್ನನ್ನು ಭಾರತಕ್ಕೆ ಕಳುಹಿಸಬೇಕೆಂದು ಕೋರಿದ್ದರು.[ಐದನೇ ಮದುವೆಗೆ ಸಜ್ಜಾಗಿದ್ದ ವರನಿಗೆ ಧರ್ಮದೇಟು]

ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಆಕೆಗೆ ಬಿಗಿ ಭದ್ರತೆಯೊಂದಿಗೆ ಭಾರತ-ಪಾಕಿಸ್ತಾನದ ಗಡಿಯಲ್ಲಿನ ವಾಘಾ ಪ್ರಾಂತ್ಯದಿಂದ ನೆಲ ಮಾರ್ಗವಾಗಿ ಕಾರಿನಲ್ಲಿ ಭಾರತಕ್ಕೆ ಕಳುಹಿಸಿದೆ. ಗುರುವಾರ ಬೆಳಗ್ಗೆ ಆಕೆ ನವದೆಹಲಿಗೆ ಬಂದಿಳಿದಿದ್ದಾರೆ.

Sushma Swaraj Welcomes Uzma who forcibly married a pak youth, on her return to India

ಏತನ್ಮಧ್ಯೆ, ಊಜ್ಮಾಳನ್ನು ಭಾರತಕ್ಕೆ ಯಶಸ್ವಿಯಾಗಿ ಕರೆತರುವಲ್ಲಿ ಮಹತ್ವದ ಸಹಾಯ ಮಾಡಿದ ಭಾರತ ಸರ್ಕಾರಕ್ಕೆ ಉಜ್ಮಾ ಅವರ ಕುಟುಂಬ ಧನ್ಯವಾದ ಅರ್ಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಜ್ಮಾ ಸಹೋದರ ವಾಹೀಂ ಅಹ್ಮದ್, ''ಉಜ್ಮಾ ಅವರು ಪಾಕಿಸ್ತಾನದಿಂದ ಸುರಕ್ಷಿತವಾಗಿ ಮರಳಿ ಭಾರತಕ್ಕೆ ಬಂದಿದ್ದು ಖುಷಿ ಕೊಟ್ಟಿದೆ. ನಮ್ಮ ಮನೆ ಮಗಳನ್ನು ನಾವು ಮತ್ತೆ ನೋಡುವಂತಾಗಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸತತ ಪ್ರಯತ್ನದಿಂದ. ಪ್ರಕರಣ ಬೆಳಕಿಗೆ ಬಂದಾಗಿನಿಂದ ನಮ್ಮ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದ ಅವರು, ನಮ್ಮಲ್ಲಿ ಧೈರ್ಯ ತುಂಬಿದ್ದಲ್ಲದೆ, ನಮ್ಮ ಮನೆ ಮಗಳನ್ನು ಸುರಕ್ಷಿತವಾಗಿ ಕರತರುವಲ್ಲಿ ದೊಡ್ಡ ಮಟ್ಟದ ಸಹಾಯ ಮಾಡಿದರು. ಅವರಿಗೆ ನಾವು ಆಭಾರಿ'' ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+