ಐದನೇ ಮದುವೆಗೆ ಸಜ್ಜಾಗಿದ್ದ ವರನಿಗೆ ಧರ್ಮದೇಟು
ಇಸ್ಲಾಮಾಬಾದ್,
ಜ. 5 : ನಾಲ್ಕು ಪತ್ನಿಯರಿಗೆ ಕೈಕೊಟ್ಟು ಇನ್ನೊಂದು ಮದುವೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಆತನ ಇಬ್ಬರು ಪತ್ನಿಯರು ಸೇರಿ ಮದುವೆ ಹಾಲ್ ನಲ್ಲೇ ಹಿಗ್ಗಾ ಮುಗ್ಗಾ ಧರ್ಮದೇಟು ಹಾಕಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನವಾಲಾ ಎಂಬಲ್ಲಿ ನಡೆದಿದೆ. id="toptextpromo">ಪತ್ನಿಯರಿಂದ
ಸಕತ್ತಾಗಿ ಗೂಸಾ ತಿಂದ ಮಹಾನುಭಾವನ ಹೆಸರು ಮಿಯಾನ್ ಇಸಾಕ್. ನಾಲ್ಕು ಪತ್ನಿಯರಿಗೆ ಕೈಕೊಟ್ಟು ಮತ್ತೊಂದು ಮದುವೆಯಾಗುತ್ತಿದ್ದಾನೆ ಎಂಬ ಸುದ್ದಿ ಕಿವಿಗೆ ಬಡಿಯುತ್ತಿದ್ದಂತೆಯೇ ಎಚ್ಚತ್ತುಕೊಂಡು ಆತನ ಮೊದಲೆರಡು ಪತ್ನಿಯರಾದ ಮೆಹವಿಶ್ ಮತ್ತು ಉಜ್ಮಾ ಎಂಬಿಬ್ಬರು, ಸ್ನೇಹಿತನ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಮಿಯಾನ್ ಇಸಾಕ್ ನನ್ನು ಮನಬಂದಂತೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಾಲ್ಕು
ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಿರುವ ಇವನು ಮತ್ತೊಂದು ಮದುವೆಯಾಗಿ ಆಕೆಯ ಜೀವನವನ್ನೂ ಹಾಳು ಮಾಡಲು ಯತ್ನಿಸುತ್ತಿದ್ದಾನೆ. ಹೀಗಾಗಿ ಆಕೆಯ ಜೀವನ ಹಾಳಾಗಬಾರದು ಎಂದು ನಿರ್ಧರಿಸಿ ನಾವು ಆತನಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ಮೆಹವಿಶ್ ಮತ್ತು ಉಜ್ಮಾ ಹೇಳಿದ್ದಾರೆ. ಇಸ್ಲಾಂ ಧರ್ಮದಲ್ಲಿ ಮೂರು ಮಂದಿಯನ್ನು ಮದುವೆಯಾಗಲು ಯಾವುದೇ ಅಡ್ಡಿಯಿಲ್ಲ. ಇದೀಗ ನಾನು ಇಬ್ಬರನ್ನು ಮದುವೆಯಾಗಿದ್ದು, ಮೂರನೇ ಮದುವೆ ಆಗುವುದರಲ್ಲಿ ತಪ್ಪೇನಿದೆ. ನಾನು ನಾಲ್ಕು ಮದುವೆಯಾಗಿದ್ದೇನೆ ಎಂದು ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಮಿಯಾನ್ ಇಸಾಕ್ ಹೇಳಿದ್ದಾನೆ.











Click it and Unblock the Notifications