ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗನ್ ಪಾಯಿಂಟ್ ನಡಿ ಭಾರತೀಯ ಯುವತಿಗೆ ಪಾಕ್ ನಲ್ಲಿ ಮದುವೆ?

ಉಜ್ಮಾ ಎಂಬ ಭಾರತೀಯ ಯುವತಿ ವಿವಾಹವು ಇದೇ ತಿಂಗಳ 3ರಂದು ನಡೆದಿತ್ತು. ಆದರೆ, ಮೇ 5ರಂದು ಭಾರತೀಯ ಹೈ ಕಮೀಷನ್ ಸಂಪರ್ಕಿಸಿದ್ದ ಆಕೆ, ತಮಗೆ ಜೀವ ಬೆದರಿಕೆಯೊಡ್ಡಿ ತನಗೆ ಮದುವೆ ಮಾಡಲಾಗಿದೆ ಎಂದು ಆಕೆ ದೂರಿದ್ದಾಳೆ.

|
Google Oneindia Kannada News

ಇಸ್ಲಾಮಾಬಾದ್, ಮೇ 8: ಗನ್ ಪಾಯಿಂಟ್ ಅಡಿಯಲ್ಲಿ ತಮ್ಮನ್ನು ಬೆದರಿಸಿ ಪಾಕಿಸ್ತಾನದ ಯುವಕನೊಂದಿಗೆ ಮದುವೆ ಮಾಡಿಸಲಾಗಿದೆ ಎಂದು ಭಾರತ ಮೂಲದ ಯುವತಿಯೊಬ್ಬಳು ಪಾಕಿಸ್ತಾನದಲ್ಲಿನ ಭಾರತೀಯ ಹೈ ಕಮೀಷನ್ ಗೆ ದೂರು ನೀಡಿದ್ದಾಳೆ. ಅಲ್ಲದೆ, ಇಸ್ಲಾಮಾಬಾದ್ ನ ನ್ಯಾಯಾಲಯವೊಂದರಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾಳೆ.

ಈಕೆಯ ಹೆಸರು ಉಜ್ಮಾ. ವಯಸ್ಸು 20 ವರ್ಷ. ಈಕೆಯ ವಿವಾಹವು ಇದೇ ತಿಂಗಳ 3ರಂದು ನಡೆದಿತ್ತು. ಆದರೆ, ಮೇ 5ರಂದು ಭಾರತೀಯ ಹೈ ಕಮೀಷನ್ ಸಂಪರ್ಕಿಸಿದ್ದ ಆಕೆ, ತಮಗೆ ಜೀವ ಬೆದರಿಕೆಯೊಡ್ಡಿ ತನ್ನನ್ನು ತಾಹಿರ್ ಅಲಿ ಎಂಬಾತನಿಗೆ ಮದುವೆ ಮಾಡಲಾಯಿತು ಎಂದು ದೂರು ಸಲ್ಲಿಸಿದ್ದಾಳೆ.

Indian Woman Alleges Was Forced To Marry Pak Man On Gunpoint: Report

ಆದರೆ, ಮೂಲಗಳ ಪ್ರಕಾರ, ಈ ಇಬ್ಬರೂ ಇತ್ತೀಚೆಗೆ ಮಲೇಷ್ಯಾದಲ್ಲಿ ಪರಸ್ಪರ ಭೇಟಿಯಾಗಿದ್ದರು. ಈ ಪರಿಚಯ ಪ್ರೇಮದಲ್ಲಿ ಬದಲಾಗಿತ್ತು. ಈ ಹಿನ್ನೆಲೆಯಲ್ಲಿ, ಮೇ 1ರಂದು ಈ ಇಬ್ಬರೂ ಭಾರತದಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು.

ತನಿಖೆಯ ವೇಳೆ ಈ ವಿಚಾರ ಬಹಿರಂಗವಾಗಿರುವುದರಿಂದ, ಉಜ್ಮಾ ಅವರ ಆರೋಪಗಳ ಮೇಲೆಯೇ ಅನುಮಾನ ಹುಟ್ಟಿಸುವಂತಿದೆ.

English summary
A 20-year-old Indian woman Uzma, who approached the Indian High Commission in Islamabad with a request to repatriate her, today alleged that she was forced to marry a Pakistani citizen Tahir Ali, on gunpoint, marking a new turn in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X