ಜೋಶ್ ಆ್ಯಪ್ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿ, ಬಹುಮಾನ ಗೆಲ್ಲಿ
ಬೆಂಗಳೂರು, ಆಗಸ್ಟ್ 14: ನಿಮಗೂ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರುವ ಆಸೆ ಇದೆಯೇ ಹಾಗಾದರೆ ಜೋಶ್ ಆ್ಯಪ್ ಮೂಲಕ ನಿಮ್ಮ ಆಕಾಂಕ್ಷೆ ಈಡೇರಲಿದೆ. ಜತೆಗೆ ಆಕರ್ಷಕ ಉಡುಗೊರೆಯನ್ನೂ ಪಡೆಯಬಹುದಾಗಿದೆ.
ಜೋಶ್ ವರ್ಲ್ಡ್ ಫೇಮಸ್ ಇನ್ ಇಂಡಿಯಾ ಸ್ಪರ್ಧೆ ಇದಾಗಿದೆ. #SaluteIndia ಹ್ಯಾಷ್‌ಟ್ಯಾಗ್‌ನೊಂದಿಗೆ ಈ ಸ್ಪರ್ಧೆ ನಡೆಯಲಿದೆ.
ಈ ಬಾರಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷವು ಭಾರತೀಯರು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಾರೆ.
ಈ ದಿನವು ಭಾರತೀಯರಿಗೆ ಬ್ರಿಟಿಷರಿಂದ ಮುಕ್ತಿ ಸಿಕ್ಕ ದಿನ. ಭಾರತೀಯರೆಲ್ಲರು ಬ್ರಿಟಿಷರ ಸರ್ವಾಧಿಕಾರಿ ನಿಯಮಗಳಿಂದ ಸ್ವತಂತ್ರಗೊಂಡ ದಿನ. ಇಂದು ನಾವು 75ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಈ ವರ್ಷ ಭಾನುವಾರದಂದು ನಮ್ಮ ದೇಶ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಗೆ ನೀವು ಕೂಡ ಜೋಶ್ ಆ್ಯಪ್ ಮೂಲಕ ಶುಭ ಕೋರಬಹುದು. ಹಾಗೆಯೇ ಆಕರ್ಷಕ ಬಹುಮಾನಗಳನ್ನು ಕೂಡ ಗೆಲ್ಲುವ ಅವಾಕಾಶ ನಿಮ್ಮದಾಗಲಿದೆ.
ನೀವು ಮಾಡಬೇಕಾಗಿದ್ದಿಷ್ಟು.
* Independence Day filters ಮೂಲಕ ವಿಡಿಯೋವನ್ನು ಚಿತ್ರೀಕರಿಸಬೇಕು.
* ನಿಮ್ಮ ಒಂದು ವಿಡಿಯೋ ಕನಿಷ್ಠ 5 ಸೆಕೆಂಡ್‌ಗಳಿರಬೇಕು
* ನಿಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರಿಗೂ ವಿಡಿಯೋ ಮಾಡುವಂತೆ ತಿಳಿಸಿ
*ಕನಿಷ್ಠ 10 ವಿಡಿಯೋಗಳನ್ನು ಕ್ರಿಯೇಟ್ ಮಾಡಿ, ಆದರೆ ಪ್ರತಿ ವಿಡಿಯೋದಲ್ಲೂ ಬೇರೆ ಬೇರೆಯವರ ಮುಖಗಳಿರಬೇಕು.
* ನಿತ್ಯ 5 ಮಂದಿ ವಿಶೇಷ ಉಡುಗೊರೆಯನ್ನು ಪಡೆಯಲಿದ್ದಾರೆ.

ಜೋಶ್ ಆ್ಯಪ್‌ನಲ್ಲಿ 115 ಮಿಲಿಯನ್‌ಗೂ ಹೆಚ್ಚು ಬಳಕೆದಾರರಿದ್ದಾರೆ, 56 ಮಿಲಿಯನ್‌ಗೂ ಅಧಿಕ ಮಂದಿ ನಿತ್ಯ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಬಹುತೇಕ ಸೆಲೆಬ್ರಿಟಿಗಳು ಕೂಡ ಈ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ.












Click it and Unblock the Notifications