ಮಣಿಪುರದ 62 ನಕಲಿ ಎನ್‌ಕೌಂಟರ್‌ಗಳ ತನಿಖೆ ಸಿಬಿಐ ಹೆಗಲಿಗೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಮಣಿಪುರ, ಜುಲೈ 14: ಪ್ರಮುಖ ತೀರ್ಮಾನವೊಂದರಲ್ಲಿ ಸುಪ್ರಿಂ ಕೋರ್ಟ್ ಮಣಿಪುರದಲ್ಲಿ ನಡೆದಿದೆ ಎನ್ನಲಾದ 62 ನಕಲಿ ಎನ್ಕೌಂಟರ್ ಗಳ ತನಿಖೆಯನ್ನು ಸಿಬಿಐಗೆ ವಹಿಸಿದೆ.

ಪೊಲೀಸರು ಮತ್ತು ಸೇನೆ ಈ 62 ಕೊಲೆಗಳನ್ನು ಸುಖಾಸುಮ್ಮನೆ ಮಾಡಿದೆ ಎಂಬ ಆರೋಪಗಳಿವೆ. ಈ ಹಿನ್ನಲೆಯಲ್ಲಿ ಎಲ್ಲಾ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ ಸುಪ್ರಿಂ ಕೋರ್ಟ್ 2018ರ ಜನವರಿ ಮೊದಲು ವರದಿ ಸಲ್ಲಿಸಲು ಸೂಚಿಸಿದೆ.

SC orders probe into 62 extra judicial killings in Manipur

ಇನ್ನು ವಿಚಾರಣೆ ವೇಳೆ ಸೇನೆ 62ರಲ್ಲಿ 30 ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದು ವಾದಿಸಿತ್ತು. ಆದರೆ ಸೇನೆ ವಾದವನ್ನು ಪುರಸ್ಕರಿಸದ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ.

'ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ - 1958 (ಎಎಫ್ಎಸ್‌ಪಿಎ) ಜಾರಿಯಲ್ಲಿರುವ ಪ್ರದೇಶಗಳಲ್ಲಿ ಕೂಡಾ ಸೇನೆ ಮತ್ತು ಅರೆಸೇನಾ ಪಡೆಗಳು ಮಿತಿಮೀರಿದ ವರ್ತಿಸುವಂತಿಲ್ಲ. ಮತ್ತು ನಿಯಮ ಉಲ್ಲಂಘಿಸಿ ಪ್ರತೀಕಾರದಂಥ ಕ್ರಮಕ್ಕೆ ಮುಂದಾಗುವಂತಿಲ್ಲ' ಎಂದು ನ್ಯಾಯಪೀಠ ಈ ಹಿಂದೆ ಸೇನೆಗೆ ಸ್ಪಷ್ಟ ಸೂಚನೆ ನೀಡಿತ್ತು.

'2000ರಿಂದ 2012ರ ಅವಧಿಯಲ್ಲಿ ಮಣಿಪುರದಲ್ಲಿ 1,528 ನಕಲಿ ಎನ್‌ಕೌಂಟರ್‌ಗಳು ನಡೆದಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು' ಎಂದು ಮಾನವ ಹಕ್ಕು ಹೋರಾಟಗಾರರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸದ್ಯ ಇದರಲ್ಲಿ 62 ಪ್ರಕರಣಗಳ ತನಿಖೆಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a major decision the Supreme Court has ordered a CBI probe into the killing of 62 persons allegedly by the Army and police in Manipur. The SC sought a compliance report from the CBI by January 2018.
Please Wait while comments are loading...