ಉತ್ತರ ಪ್ರದೇಶದಲ್ಲಿ ಪುರುಷ ಪೊಲೀಸರಿಂದ ಮಹಿಳೆಯರ ಮೇಲೆ ಹಲ್ಲೆ
ಉತ್ತರ ಪ್ರದೇಶ, ನವೆಂಬರ್ 7: ಉತ್ತರ ಪ್ರದೇಶದ ಪೋಲಿಸರು ಸಾಮಾನ್ಯ ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಮಹಿಳೆಯರನ್ನು ಥಳಿಸಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ಪೋಲಿಸರ ಹಾಗೂ ಪ್ರತಿಭಟನಾನಿರತ ಮಹಿಳೆಯರ ಮಧ್ಯದಲ್ಲಿ ತೀವ್ರ ಘರ್ಷಣೆಯಾಗಿದ್ದು ಪುರುಷ ಪೊಲೀಸ್ ಪೇದೆಯೊಬ್ಬರು ಮಹಿಳೆಯನ್ನು ಹಲ್ಲೆ ಮಾಡಿ, ಥಳಿಸಿಸುತ್ತಿರುವ ಘಟನೆ ವಿಡಿಯೋದಲ್ಲಿ ಕಾಣುತ್ತಿದೆ. ಈ ವೇಳೆ ಪೋಲಿಸರ ವಾಹನಗಳ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ ನಂತರ ಪೋಲಿಸರು ಲಾಠಿಯಿಂದ ಮಹಿಳೆಯರಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದ್ದಾಗಿದ್ದು, ಇತ್ತೀಚೆಗೆ ಈ ಪ್ರದೇಶದಲ್ಲಿ ಬಿಆರ್ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ವಿರುದ್ಧ ಪೊಲೀಸರು ಈ ರೀತಿ ವರ್ತಿಸಿದ್ದರು. ಪ್ರತಿಮೆ ಇರುವ ಭೂಮಿಯ ವಿವಾದ ಈ ಪ್ರತಿಭಟನೆಗೆ ಕಾರಣವಾಯಿತು. ಮತ್ತೊಂದು ವಿಡಿಯೋದಲ್ಲಿ ಕೆಲವು ಮಹಿಳೆಯರು ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕೂದಲನ್ನು ಎಳೆದಾಡುತ್ತಿರುವುದು ಕಂಡುಬಂದಿದೆ.
ಯುಪಿ ಪೊಲೀಸರು ಮಹಿಳೆಯರನ್ನು ಲಾಠಿಯಿಂದ ಥಳಿಸುವುದು ಮತ್ತು ಅವರ ಮೇಲೆ ನಿಂದನೆಗಳನ್ನು ಮಾಡಿರುವುದು ಕಂಡುಬಂದಿದೆ. ಪೊಲೀಸರ ಅತಿರೇಕದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಆದರೆ, ಪೊಲೀಸರು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಮಹಿಳೆಯರು ತಮ್ಮ ಮತ್ತು ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಅವರು ಸಣ್ಣ ಬಲ ಪ್ರಯೋಗ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

'ಈ ಪರಿಸ್ಥಿಯನ್ನು ನಿಭಾಯಿಸಲು ನಾವು ಹಗುರವಾಗಿ ಲಾಠಿ ಪ್ರಹಾರ ಮಾಡಿದ್ದೇವೆ ಆದರೆ, ಕೆಲವು ಪ್ರತಿಭಟನಾಕಾರರು ಪೊಲೀಸ್ ಕಾರಿನ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು' ಎಂದು ಹಿರಿಯ ಅಂಬೇಡ್ಕರ್ ನಗರ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಅಂಬೇಡ್ಕರ್ ನಗರ ರೈಸಿಂಗ್‌ನಲ್ಲಿ ಯುಪಿ ಪೊಲೀಸರು ಮಹಿಳೆಯರ ಮೇಲೆ ಥಳಿಸಿದ್ದಾರೆ. ಭಾರತೀಯ ಕಾನೂನು ತನ್ನ ಹಿಂದಿನ ವಸಾಹತುಶಾಹಿ ಪರಂಪರೆಯನ್ನೇ ಮುಂದುವರಿಸಿದೆ ಎಂದು ಉತ್ತರ ಪ್ರದೇಶದ ಅನೇಕ ಮಹಿಳೆಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
उत्तर प्रदेश: @Uppolice द्वारा अम्बेडकर नगर मे महिलाओं पर बर्बरतापूर्ण लाठी चलाना उन्हें भद्दी गालियाँ देना क्या उचित तरीका है?
— Bahujan4India (@Bahujan4India) November 6, 2022
Modi ji talks about women's honor and on the other hand, the BJP govt of UP respects women by beating them with sticks. #DalitLivesMatter pic.twitter.com/VDexWrqxN0












Click it and Unblock the Notifications