ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ಸಿಡಿ ಸಹಿತ- ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ

ಸರ್ಕಾರಿ ಸ್ವಾಮ್ಯ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸಬ್ಸಿಡಿ ಸಹಿತ ಹಾಗೂ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ

By Mahesh
|
Google Oneindia Kannada News

ನವದೆಹಲಿ, ನವೆಂಬರ್ 01: ಸರ್ಕಾರಿ ಸ್ವಾಮ್ಯ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸಬ್ಸಿಡಿ ಸಹಿತ ಹಾಗೂ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ.

ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಮೇಲೆ 37.50ರಷ್ಟು ಏರಿಕೆ ಮಾಡಿದ್ದರೆ, ಸಬ್ಸಿಡಿವುಳ್ಳ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಮೇಲೆ 2 ರು ಏರಿಕೆಯಾಗಿದೆ.[ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]

Non-subsidised LPG hiked by Rs 37.5 per cylinder

ವಾರ್ಷಿಕ 12 ಸಿಲಿಂಡರ್ ಕೋಟಾ ನಂತರ ಪಡೆಯುವ 14.2ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಅಕ್ಟೋಬರ್ 31ರ ಮಧ್ಯರಾತ್ರಿಯ ನಂತರ ಜಾರಿಗೆ ಬರುವಂತೆ ಏರಿಕೆ ಮಾದಲಾಗಿದೆ.ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 529.50ರಷ್ಟಿದ್ದರೆ, ಚೆನ್ನೈನಲ್ಲಿ 538.50ರು ನಷ್ಟಿದೆ. [10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 2 ರು ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ 430.64 ಪ್ರತಿ ಸಿಲಿಂಡರ್ ಗೆ ತಗುಲುತ್ತದೆ. ಚೆನ್ನೈನಲ್ಲಿ 418.15ರಷ್ಟಿದೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

English summary
State-run oil marketer Indian Oil Corp. (IOC) on Monday hiked prices of non-subsidised LPG, or cooking gas, by Rs 37.50 per cylinder and by Rs 2 for a subsidised one, effective from midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X