ಹುಟ್ಟುಹಬ್ಬದ ದಿನ ಅಮ್ಮನ ಆಶೀರ್ವಾದ ಪಡೆದ ಮೋದಿ

Posted By:
Subscribe to Oneindia Kannada

ಅಹಮದಾಬಾದ್, ಸೆಪ್ಟೆಂಬರ್ 17 : ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 66ನೇ ಹುಟ್ಟುಹಬ್ಬ. ಗುಜರಾತ್‌ ಪ್ರವಾಸದಲ್ಲಿರುವ ಮೋದಿ, ತಾಯಿಯನ್ನು ಭೇಟಿಯಾಗುವ ಮೂಲಕ ತಮ್ಮ ಹುಟ್ಟುಹಬ್ಬದ ದಿನವನ್ನು ಆರಂಭಿಸಿದರು.

ಶನಿವಾರ ಬೆಳಗ್ಗೆ ಗುಜರಾತ್‌ನ ರಾಜಭವನದಿಂದ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿರುವ ಮನೆಗೆ ಭೇಟಿ ನೀಡಿ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದರು. ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು, ನಂತರ ಮನೆಯಿಂದ ಹೊರಬಂದು ಸುತ್ತಮುತ್ತಲಿನ ಜನರತ್ತ ಕೈ ಬೀಸಿದರು.[ಮೋದಿ 66ನೇ ಹುಟ್ಟುಹಬ್ಬ ಗಿನ್ನಿಸ್ ದಾಖಲೆಗಳ ಪಟ್ಟಿಗೆ]

narendra modi

ಶುಕ್ರವಾರ ರಾತ್ರಿ ಅಹಮದಾಬಾದ್‌ಗೆ ಬಂದ ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಬರಮಾಡಿಕೊಂಡರು. 66ನೇ ಹುಟ್ಟುಹಬ್ಬದ ಪ್ರಯುಕ್ತ ದೆಹಲಿಯಿಂದ ಗುಜರಾತ್‌ಗೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತು.[ನಾಡಿಗೆ ರಾಜನಾದರೂ ತಾಯಿಗೆ ಮಗ]

ನರೇಂದ್ರ ಮೋದಿ ಅವರು ನವಸಾರಿ ಜಿಲ್ಲೆಯ ಬುಡಕಟ್ಟು ಅಂಗವಿಕಲ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಬುಡಕಟ್ಟು ಜಿಲ್ಲೆಯಾದ ದಾಹೋದ್‌ಗೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister of India Narendra Modi began his 66th birthday with a visit to his mother Heeraben Modi in Gandhinagar, on Saturday, September 17, 2016.
Please Wait while comments are loading...