• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಕೊರಳಿಗೆ ವಿಜಯಮಾಲೆ, ಮೋದಿಗೆ ಗಣ್ಯರ ಶುಭಾಶಯ

|

ನವದೆಹಲಿ, ಮೇ 23: ಹದಿನೇಳನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ದೇಶದ್ಯಂತ 300 ಸೀಟುಗಳನ್ನು ಗಳಿಸುವಲ್ಲಿ ಯಶಸ್ವಿಯಾದ ನರೇಂದ್ರ ಮೋದಿಗೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 11 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿ 24, ಕಾಂಗ್ರೆಸ್ ಮೂರು ಹಾಗೂ ಜೆಡಿಎಸ್ 1 ಸ್ಥಾನವನ್ನು ಗಳಿಸುವದರಲ್ಲಿ ಮಾತ್ರ ಯಶಸ್ವಿಯಾಗಿದೆ. ಇನ್ನು ದೇಶದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಪುನಃ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೂಪರ್ ಸ್ಟಾರ್ ರಜನೀಕಾಂತ್ ಶುಭಾಶಯ

ಫಲಿತಾಂಶ ಬರುತ್ತಿದಂತೆ ಟ್ವೀಟ್ ಮಾಡಿರುವ ರಜನೀಕಾಂತ್ ನರೇಂದ್ರ ಮೋದಿಯವರಿಗೆ ಶುಭಾಶಯ ತಿಳಿಸಿದ್ದು, ನೀವು ಅಂದುಕೊಂಡಿದ್ದನ್ನು ಸಾಧಿಸಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ಭಾರತ ಜನತೆಗೆ ನಮನ

ದೇಶದ ಜನತೆ ಯಾರನ್ನು ಪ್ರೀತಿಸುತ್ತದೆ ಜನಾದೇಶ ಏನು ಎನ್ನುವುದು ಇಂದು ಇಡೀ ದೇಶಕ್ಕೆ ಗೊತ್ತಾಗಿದೆ. ಜಾತಿವಾದ, ಪರಿವಾರವಾದವನ್ನು ಎಸೆದು ವಿಕಾಸವಾದದ ಕಡೆಗೆ ಜನರು ಒಲವು ತೋರಿಸಿದ್ದಾರೆ. ಬಿಜೆಪಿಯನ್ನು ಗೆಲ್ಲಿದ್ದಕ್ಕೆ ಭಾರತದ ಜನತೆಗೆ ಧನ್ಯವಾದ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಬೃಹತ್ ಗೆಲುವಿಗೆ ಮೋದಿಗೆ ಶುಭಾಶಯ

ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಗೆಲುವಿಗೆ ಕಾರಣರಾಗಿರುವ ನಿಮಗೆ ಶುಭಾಶಯಗಳು ಎಂದು ಸಚಿವೆ ಸುಷ್ಮಾ ಸ್ವರಾಜ್ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ಸಬಕಾ ಸಾಥ್, ಸಬಕಾ ವಿಕಾಸ್, ಸಬಕಾ ಸಾಥ್ ವಿಜಯದ ಮಂತ್ರ

ಎಲ್ಲರೂ ಬಿಜೆಪಿಯನ್ನು ನಂಬಿ ಮತ ಹಾಕಿದ್ದಾರೆ, ಸಬಕಾ ಸಾಥ್, ಸಬಕಾ ವಿಕಾಸ್, ಸಬಕಾ ವಿಶ್ವಾಸ್ ಇದೇ ವಿಜಯೀ ಭಾರತದ ಮಂತ್ರ, ಇದೇ ಇಂದು ಬಿಜೆಪಿ ಗೆಲವಿಗೆ ಕಾರಣವಾಗಿದೆ ನಾವು ಮತ್ತೆ ಗೆದ್ದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ ಬಿಎಸ್ ಯಡಿಯೂರಪ್ಪ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆಗಳು. ಬಿಜೆಪಿಗೆ ಆಶೀರ್ವದಿಸಿದ ಮತದಾರ ಬಾಂಧವರಿಗೆ ಧನ್ಯವಾದಗಳು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

English summary
Lok sabha election results 2019: With leads in the election results showing the BJP crossing the halfway mark on its own steam and a sweep by the National Democratic Alliance (NDA) in the Lok Sabha election, leaders of Prime Minister Narendra Modi's party tweeted to congratulate party workers and supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X