ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾಂಗಿಯಾಗಿಯೇ ಮಾಂತ್ರಿಕ ಸಂಖ್ಯೆ ದಾಟಿದ ಬಿಜೆಪಿ, ಎಲ್ಲೆಲ್ಲೂ ಕೇಸರಿ ರಂಗು

|
Google Oneindia Kannada News

Recommended Video

Lok Sabha Elections 2019:ಏಕಾಂಗಿಯಾಗಿ ಮಾಂತ್ರಿಕ ಸಂಖ್ಯೆ ದಾಟಿದ ಬಿಜೆಪಿ ಎಲ್ಲೆಲ್ಲೂ ಕೇಸರಿ ಹವಾ!

ನವದೆಹಲಿ, ಮೇ 23 : ಭಾರತೀಯ ಜನತಾ ಪಕ್ಷ ಈ ಲೋಕಸಭೆ ಚುನಾವಣೆಯಲ್ಲಿ ನೂರೈವತ್ತು ಕ್ಷೇತ್ರಗಳಲ್ಲೂ ಜಯಗಳಿಸುವುದಿಲ್ಲ ಎಂದು ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ವಿರೋಧಿಗಳಿಗೆ ಕಪಾಳಮೋಕ್ಷ ಮಾಡುವಂತೆ ಭಾರತದ ಜನರು ಜನಾದೇಶ ನೀಡಿದ್ದಾರೆ.

ಬೆಳಿಗ್ಗೆ 10.30ರ ಹೊತ್ತಿಗೆ ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿಯೇ 272ರ ಮ್ಯಾಜಿಕಲ್ ನಂಬರ್ ದಾಟಿದೆ. ಇದೀಗ 288 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಆದಕ್ಕೆ ಇನ್ನೂ 8ರಿಂದ 10 ಕ್ಷೇತ್ರಗಳನ್ನು ಸೇರಿಸುವ ಸಾಧ್ಯತೆಯಿದೆ. ಬಿಜೆಪಿ ಏಕಾಂಗಿಯಾಗಿಯೇ 300ರ ಗಡಿಯನ್ನು ದಾಟಿದರೂ ಅಚ್ಚರಿಯಿಲ್ಲ.

ಲೋಕಸಭೆ ಫಲಿತಾಂಶ : ಮ್ಯಾಜಿಕಲ್ ನಂಬರ್ ದಾಟಿದ ಬಿಜೆಪಿ ಮೈತ್ರಿಕೂಟ ಲೋಕಸಭೆ ಫಲಿತಾಂಶ : ಮ್ಯಾಜಿಕಲ್ ನಂಬರ್ ದಾಟಿದ ಬಿಜೆಪಿ ಮೈತ್ರಿಕೂಟ

ಕಳೆದ 2014ರ ಚುನಾವಣೆಯಲ್ಲಿ 282 ಕ್ಷೇತ್ರಗಳಲ್ಲಿ ಗೆದ್ದಿದ್ದ ಭಾರತೀಯ ಜನತಾ ಪಕ್ಷ 300ರ ಗಡಿಯಲ್ಲಿ ನಿಂತು ಭರ್ಜರಿ ನಗೆಬೀರಿದೆ. ಎನ್ಡಿಎ ಒಟ್ಟಾರೆಯಾಗಿ 350 ಕ್ಷೇತ್ರಗಳನ್ನು ಬಾಚುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಎನ್ಡಿಎ 342 ಕ್ಷೇತ್ರಗಳಲ್ಲಿ ಮುನ್ನಡೆ ಕಾದುಕೊಂಡಿದೆ.

Lok Sabha Election Results 2019 : BJP alone crosses magical number

2014ರಲ್ಲಿ 272 ಕ್ಷೇತ್ರಗಳ ಗುರಿಯಿಟ್ಟುಕೊಂಡು ಅಭಿಯಾನವನ್ನು ಬಿಜೆಪಿ ಆರಂಭಿಸಿತ್ತು. ಈ ಬಾರಿ ಅಪನಗದೀಕರಣ, ಜಿಎಸ್ಟಿ ಹೇರಿಕೆ, ರೈತರ ಆತ್ಮಹತ್ಯೆ, ರಫೇಲ್ ಡೀಲ್ ಹಗರಣ, ಕೋಟ್ಯಾಧಿಪತಿಗಳ ಪಲಾಯನ, ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಕಳಂಕ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜನರು ವಿರೋಧಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ವಿರುದ್ಧ ಮಾಡಿದ ವಾಗ್ದಾಳಿಗಳೆಲ್ಲ ಅವರಿಗೇ ತಿರುಗುಬಾಣವಾಗಿವೆ. ಚೌಕಿದಾರ್ ಚೋರ್ ಹೈ ಎಂದಿದ್ದು ಮತದಾರರನ್ನು ಇನ್ನಷ್ಟು ಕೆರಳಿಸಿದೆ. ರಫೇಲ್ ಡೀಲ್ ಹಗರಣದಲ್ಲಿ ಮೋದಿ ಲಂಚ ತಿಂದಿದ್ದಾರೆ ಎಂದು ಅವರು ಅರಚಿಕೊಂಡಿದ್ದನ್ನು ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಜನರು ಬಿಟ್ಟುಬಿಟ್ಟಿದ್ದಾರೆ. ಅವರು ನಡೆಸಿರುವ ನೂರಾರು ಸಮಾವೇಶಗಳು, ರೋಡ್ ಶೋಗಳು ನಿರೀಕ್ಷಿಸಿದಂಥ ಫಲ ನೀಡಿಲ್ಲ.

English summary
Lok Sabha Election Results 2019 in Kannada : BJP alone crosses the magical number. BJP has taken lead in 288 seats across India. Voters have reposed confidence in Narendra Modi again and dumped Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X