Get Updates
Get notified of breaking news, exclusive insights, and must-see stories!

ಬಿಜೆಪಿ ತೊರೆಯುತ್ತೇನೆಂದು ರಾಜನಾಥ್ ಸಿಂಗ್ ಹೇಳಿದ್ದು ನಿಜಾನಾ?

ನವದೆಹಲಿ, ಜೂನ್ 07: ಕೇಂದ್ರ ಸಂಪುಟ ಸಮಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಡೆಗಣಿಸಿದ್ದ ಕಾರಣ ಅವರು ಪಕ್ಷ ತೊರೆಯುತ್ತೇನೆಂದು ಬೆದರಿಕೆ ಒಡ್ಡಿದ್ದರು, ಆದ್ದರಿಂದ ಅವರನ್ನು ಎಲ್ಲಾ ಸಂಪುಟ ಸಮಿತಿಗೂ ನಂತರ ಸೇರಿಸಿಕೊಳ್ಳಲಾಯಿತು ಎಂಬ ವದಂತಿಯನ್ನು ರಾಜನಾಥ್ ಸಿಂಗ್ ಅವರ ಕಚೇರಿಯ ಮೂಲಗಳು ಅಲ್ಲಗಳೆದಿವೆ.

"ಪಕ್ಷ ತೊರೆಯುವ ಮಾತನ್ನು ರಾಜನಾಥ್ ಸಿಂಗ್ ಅವರು ಆಡಿಯೇ ಇಲ್ಲ. ಈ ವದಂತಿ ಶುದ್ಧ ಸುಳ್ಳು" ಎಂದು ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 8 ಸಂಪುಟ ಸಮಿತಿಯನ್ನು ರಚಿಸಿದ್ದು, ಈ ಎಲ್ಲಾ ಸಮಿತಿಯಲ್ಲೂ ಪ್ರಧಾನಿ ನಂತರದ ಹುದ್ದೆಯನ್ನು ಗೃಹಸಚಿವ ಅಮಿತ್ ಶಾ ಅವರೇ ಪಡೆದಿದ್ದಾರೆ.

Rajanth Singhs office denies rumours of he is quitting BJP

ಕಳೆದ ಸರ್ಕಾರದ ಅವಧಿಯಲ್ಲಿ ರಾಜನಾಥ್ ಸಿಂಗ್ ಅವರು ನಿಭಾಯಿಸುತ್ತಿದ್ದ ಹುದ್ದೆಗಳನ್ನು ಇದೀಗ ಅಮಿತ್ ಶಾ ಅವರೇ ಪಡೆದಿರುವುದು ಲಕ್ನೋ ಸಂಸದ ರಾಜನಾಥ್ ಸಿಂಗ್ ಅವರಿಗೆ ಮುಜುಗರವನ್ನುಂಟು ಮಾಡಿತ್ತು ಎಂಬ ವದಂತಿ ಹಬ್ಬಿತ್ತು. ಸಂಪುಟ ನೇಮಕಾತಿ ಸಮಿತಿ, ಅಕಮಡೇಷನ್ ಸಮಿತಿ, ಆರ್ಥಿಕ ವ್ಯವಹಾರಗಳ ಸಮಿತಿ, ಸಂಸದೀಯ ವ್ಯವಹಾರಗಳ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಭದ್ರತಾ ಸಮಿತಿ, ಹೂಡಿಕೆ ಹಾಗೂ ಅಭಿವೃದ್ಧಿ ಸಮಿತಿ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿಗಳಲ್ಲಿ ಕೇವಲ ಎರಡು ಸಮಿತಿಗಳಲ್ಲಿ ಮಾತ್ರ ರಾಜನಾಥ್ ಸಿಂಗ್ ಅವರ ಹೆಸರು ಕೇಳಿಬಂದಿತ್ತು. ಇದೀಗ ಎಲ್ಲಾ ಸಮಿತಿಗಳಲ್ಲೂ ಅವರ ಹೆಸರನ್ನು ಸೇರಿಸಲು ಪ್ರಧಾನಿ ಮುಂದಾಗಿರುವುದು, ವಂದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+