• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಕ್ತಾರ ಸ್ಥಾನದಿಂದ ಖುಷ್ಬೂ ತೆಗೆದು ಹಾಕಿದ ಕಾಂಗ್ರೆಸ್!

|
Google Oneindia Kannada News

ನವದೆಹಲಿ, ಅಕ್ಟೋಬರ್ 12 : ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ನಟಿ ಖುಷ್ಬೂ ಸುಂದರ್ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ತೆಗೆದುಹಾಕಲಾಗಿದೆ. ಇಂದು ಮಧ್ಯಾಹ್ನ ಖುಷ್ಬೂ ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಣವ್ ಝಾ ಸೋಮವಾರ ಬೆಳಗ್ಗೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಖುಷ್ಬೂ ಅವರನ್ನು ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ನಟಿ ಖುಷ್ಬೂ ಕಾಂಗ್ರೆಸ್‌ಗೆ ಗುಡ್‌ಬೈ: ಬಿಜೆಪಿಗೆ ಸೇರ್ಪಡೆ ಸಾಧ್ಯತೆ ನಟಿ ಖುಷ್ಬೂ ಕಾಂಗ್ರೆಸ್‌ಗೆ ಗುಡ್‌ಬೈ: ಬಿಜೆಪಿಗೆ ಸೇರ್ಪಡೆ ಸಾಧ್ಯತೆ

2014ರಿಂದ ಕಾಂಗ್ರೆಸ್ ಪಕ್ಷದ ಜೊತೆ ಖುಷ್ಬೂ ಗುರುತಿಸಿಕೊಂಡಿದ್ದರು. ಅವರನ್ನು ರಾಷ್ಟ್ರೀಯ ವಕ್ತಾರೆಯಾಗಿ ನೇಮಿಸಲಾಗಿತ್ತು. 2021ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿಯೇ ಖುಷ್ಬೂ ಬಿಜೆಪಿ ಸೇರುತ್ತಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ: ಮೂರು ಭಾಷೆಯ ಸೂತ್ರ ತಿರಸ್ಕರಿಸಿದ ತಮಿಳುನಾಡುರಾಷ್ಟ್ರೀಯ ಶಿಕ್ಷಣ ನೀತಿ: ಮೂರು ಭಾಷೆಯ ಸೂತ್ರ ತಿರಸ್ಕರಿಸಿದ ತಮಿಳುನಾಡು

ಭಾನುವಾರ ಸಂಜೆಯೇ ಖುಷ್ಬೂ ದೆಹಲಿಗೆ ಆಗಮಿಸಿದ್ದಾರೆ. ಸೋಮವಾರ ಮಧ್ಯಾಹ್ನ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸಮ್ಮುಖದಲ್ಲಿ ಅವರು ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಬಿಹಾರ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಹಾರ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ

ದೆಹಲಿಯಲ್ಲಿ ರಾಜಕೀಯ

ದೆಹಲಿಯಲ್ಲಿ ರಾಜಕೀಯ

ತಮಿಳುನಾಡು ರಾಜಕೀಯ ದೆಹಲಿಗೆ ಸ್ಥಳಾಂತರವಾಗಿದೆ. ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಎಲ್. ಮುರುಗನ್ ಶನಿವಾರದಿಂದ ದೆಹಲಿಯಲ್ಲಿಯೇ ಇದ್ದಾರೆ. ವಿವಿಧ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. 2014ರ ತನಕ ಡಿಎಂಕೆಯಲ್ಲಿದ್ದ ಖುಷ್ಬೂ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.

ಖುಷ್ಬೂ ಅವರಿಗೆ ಟಿಕೆಟ್ ನೀಡಿರಲಿಲ್ಲ

ಖುಷ್ಬೂ ಅವರಿಗೆ ಟಿಕೆಟ್ ನೀಡಿರಲಿಲ್ಲ

2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್ ನೀಡಲಿಲ್ಲ. ಅಲ್ಲದೇ ರಾಜ್ಯಸಭಾ ಸ್ಥಾನವನ್ನು ನೀಡಿಲ್ಲ ಎಂದು ಖುಷ್ಬೂ ಅವರು ಅಸಮಾಧಾನಗೊಂಡಿದ್ದರು. ಕಾಂಗ್ರೆಸ್ ಸೇರಿದ್ದ ಸಮಯದಲ್ಲಿ "ಕಾಂಗ್ರೆಸ್ ಪಕ್ಷ ಮಾತ್ರವೇ ದೇಶದ ಜನರಿಗೆ ಒಳಿತು ಮಾಡಲು ಸಾಧ್ಯ ಹಾಗೂ ದೇಶವನ್ನು ಒಗ್ಗೂಡಿಸಲು ಸಾಧ್ಯ" ಎಂದು ಖುಷ್ಬೂ ಹೇಳಿದ್ದರು.

ತಮಿಳುನಾಡು ರಾಜಕೀಯ

ತಮಿಳುನಾಡು ರಾಜಕೀಯ

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದೆ. ಖುಷ್ಬೂ ಅವರು ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಲು ಹೊರಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸಹ ಚುನಾವಣೆಗಾಗಿ ಕರಸತ್ತನ್ನು ಈಗ ಆರಂಭಿಸಿದೆ.

ದೇವಾಲಯವನ್ನು ಕಟ್ಟಿದ್ದರು

ದೇವಾಲಯವನ್ನು ಕಟ್ಟಿದ್ದರು

ಖುಷ್ಬೂ ತಮಿಳುನಾಡಿನ ಅತ್ಯಂತ ಜನಪ್ರಿಯ ನಟಿ. ರಾಜ್ಯದಲ್ಲಿ ಅವರಿಗಾಗಿಯೇ ಅಭಿಮಾನಿಗಳು ದೇವಾಲಯವನ್ನು ಕಟ್ಟಿದ್ದರು. ಟಿವಿ ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ, ನಿರೂಪಣೆಯನ್ನು ಮಾಡಿದ್ದಾರೆ. ಸಿನಿಮಾ ವರ್ಚಸ್ಸು ರಾಜಕೀಯ ಲಾಭ ತಂದುಕೊಡಲಿದೆಯೇ? ಕಾದು ನೋಡಬೇಕು.

English summary
Khushbu removed as Congress party spokesperson with immediate effect. Khushbu all set to join the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X