ದಿನ ಬೆಳಗ್ಗೆ ಸೈಕಲಲ್ಲೇ 60 ಮನೆಗೆ ಪೇಪರ್ ಹಾಕಿ ಅಮ್ಮನ ಚಿಕಿತ್ಸೆಗೆ ನೆರವಾದ 20ರ ಅಶ್ವತಿ

ನಾವೆಲ್ಲರೂ ಬೆಳಗಿನ ಜಾವದ ಸುಖ ನಿದ್ರೆಯಲ್ಲಿ ಯಾವುದೋ ಕನಸು ಕಾಣುತ್ತಿರುವಾಗ ಕೇರಳದ 20 ವರ್ಷದ ಕಾಲೇಜು ವಿದ್ಯಾರ್ಥಿನಿ ತನ್ನ ಸೈಕಲ್ ಏರಿ ಪೆಡಲ್ ತುಳಿಯಲು ಆರಂಭಿಸುತ್ತಾಳೆ. ಪ್ರತಿದಿನ ಬೆಳಗ್ಗೆ ಬರೋಬ್ಬರಿ 60 ಮನೆಗಳಿಗೆ ದಿನಪತ್ರಿಕೆಗಳನ್ನ ಹಾಕುವ ಈಕೆ, ತನ್ನ ಕಾಲೇಜು ಶುಲ್ಕ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಯ ವೆಚ್ಚವನ್ನ ಭರಿಸಲು ಸ್ವತಃ ಈಕೆಯೇ ಬೆಳಗ್ಗೆಯಿಂದಲೇ ದುಡಿಯಲು ಶುರು ಮಾಡುತ್ತಾಳೆ.

ಇಂತತಹ ಕಷ್ಟದ ಪರಿಸ್ಥಿತಿಯಲ್ಲೂ ಸ್ವಲ್ಪವೂ ಹೆದರದೆ ಕುಟುಂಬಕ್ಕೆ ಆಸರೆಯಾಗಿರುವ ಅಶ್ವತಿ ಎಂಬ ಕಾಲೇಜು ವಿದ್ಯಾರ್ಥಿನಿಯ ಸಾಹಸಗಾಥೆ ಇದೀಗ ಮೆಚ್ಚುಗೆ ಕಾರಣವಾಗುವುದರ ಜೊತೆಗೆ ಎಲ್ಲರಿಗೂ ಸ್ಪೂರ್ತಿಯಾಗಿದೆ.

Kerala Student

ಅಶ್ವತಿಗೆ ಮನೆಗಳಿಗೆ ದಿನಪತ್ರಿಕೆ ಹಾಕುವುದು ಪಾಕೆಟ್ ಮನಿ ಗಳಿಸುವ ಉದ್ದೇಶದಿಂದಲ್ಲ. ಬದಲಿಗೆ ಅದು ಆಕೆಯ ಕುಟುಂಬದ ನಿರ್ವಹಣೆ ಹಾಗೂ ಆಕೆಯ ವಿದ್ಯಾಭ್ಯಾಸ ಮುಂದುವರೆಸಲು ಇರುವ ಏಕೈಕ ಮಾರ್ಗ ಎನ್ನಬಹುದು. ಕಳೆದ ನಾಲ್ಕು ವರ್ಷಗಳಿಂದ ಆಕೆ ಈ ಕೆಲಸವನ್ನ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾಳೆ. ಕೇರಳದಲ್ಲಿ ಎಷ್ಟೇ ಧಾರಾಕಾರ ಮಳೆಯಾಗಲಿ, ಬಿರು ಬಿಸಿಲೇ ಇರಲಿ ಅಥವಾ ಯಾವುದೇ ಸವಾಲುಗಳಿರಲಿ, ಒಂದೇ ಒಂದು ದಿನವೂ ರಜೆ ಹಾಕದೆ ನಿರಂತರವಾಗಿ ದಿನಪತ್ರಿಕೆ ಹಾಕುವ ಕೆಲಸ ಮಾಡೇ ಮಾಡುತ್ತಾಳೆ.

ಬೆಳಗಿನ ಜಾವವೇ ಎದ್ದು ದಿನಪತ್ರಿಕೆಗಳನ್ನ ವಿಂಗಡಿಸಿ, ಸೈಕಲ್ ಮೂಲಕ 60 ಮನೆಗಳ ಬಾಗಿಲಿಗೆ ಪೇಪರ್ ತಲುಪಿಸುತ್ತಾಳೆ. ಪತ್ರಿಕೆ ಹಾಕುವ ಕೆಲಸ ಮುಗಿದ ತಕ್ಷಣ ಮನೆಗೆ ಮರಳಿ, ಅಡುಗೆ ಹಾಗೂ ಇನ್ನಿತರ ಮನೆಕೆಲಸಗಳಲ್ಲಿ ತಾಯಿಗೆ ನೆರವಾಗುತ್ತಾಳೆ. ನಂತರ ಯಾವುದೇ ಅದೇ ಉತ್ಸಾಹದಿಂದ ಕಾಲೇಜಿಗೆ ಹೋಗಿ ಪಾಠಗಳಲ್ಲಿ ತನ್ನನ್ನ ತೊಡಗಿಸಿಕೊಳ್ಳುತ್ತಾಳೆ.

ತಾಯಿಯ ಚಿಕಿತ್ಸೆಗೆ ಆರ್ಥಿಕ ನೆರವು

ಅಶ್ವತಿಯ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಆಕೆಯ ತಂದೆ ದಿನಗೂಲಿ ನೌಕರರು. ಅವರ ತಂದೆ ತರುವ ಸ್ವಲ್ಪ ಆದಾಯದಲ್ಲಿ ಕುಟುಂಬದ ಹೊಟ್ಟೆ ತುಂಬಿಸುವುದು ಹಾಗೂ ಮಕ್ಕಳ ಶೈಕ್ಷಣಿಕ ವೆಚ್ಚಗಳನ್ನ ಭರಿಸುವುದು ತುಂಬ ಕಷ್ಟ. ಇದರ ಜೊತೆಗೆ ತಾಯಿಯ ಅನಾರೋಗ್ಯ ಕೂಡ ಈ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಯಿಗೆ ನಿರಂತರವಾಗಿ ಔಷಧಿ ಮತ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.

ಅಶ್ವಿತಿ ತನ್ನ ಕುಟುಂಬದ ಕಷ್ಟವನ್ನಾ ಕಣ್ಣಾರೆ ಕಂಡಿದ್ದ ಕಾರಣ, ತಂದೆಗೆ ಹೊರೆಯಾಗಬಾರದು ಎಂದು ನಿರ್ಧರಿಸಿದಳು. ದಿನಪತ್ರಿಕೆ ವಿತರಣೆಯಿಂದ ಬರುವ ಆದಾಯದಲ್ಲಿ ತನ್ನ ಕಾಲೇಜಿನ ಶುಲ್ಕವನ್ನು ಭರಿಸುವುದರ ಜೊತೆಗೆ, ತಾಯಿಯ ಚಿಕಿತ್ಸೆ ಹಾಗೂ ಔಷಧಿಗಳ ವೆಚ್ಚವನ್ನ ಸಹ ಸ್ವತಃ ತಾನೇ ನೋಡಿಕೊಳ್ಳುತ್ತಿದ್ದಾಳೆ.

ದಿನಗೂಲಿ ನೌಕರನ ಕುಟುಂಬಕ್ಕೆ ಆಸರೆಯಾದ ಮಗಳು

ಸಾಮಾನ್ಯವಾಗಿ ಈ ವಯಸ್ಸಿನ ಯುವ ಜನರು ತಮ್ಮದೇ ಆದ ಲೋಕ ಅಂದರೆ ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತಾರೆ. ಆದರೆ ಅಶ್ವತಿ ಮಾತ್ರ ತನ್ನ ಜವಾಬ್ದಾರಿಯನ್ನ ಅರಿತುಕೊಂಡು, ದಿನಗೂಲಿ ಮಾಡುವ ತಂದೆಯ ಹೆಗಲ ಭಾರವನ್ನ ಇಳಿಸಿದ್ದಾಳೆ. ಕಷ್ಟದ ಸಮಯದಲ್ಲಿ ಹೆಣ್ಣುಮಕ್ಕಳು ಕುಟುಂಬಕ್ಕೆ ಎಷ್ಟು ದೊಡ್ಡ ಶಕ್ತಿಯಾಗಿ ನಿಲ್ಲುತ್ತಾರೆ ಎಂಬುದಕ್ಕೆ ಅಶ್ವತಿಯೇ ಸಾಕ್ಷಿ. ಶ್ರಮದ ದುಡಿಮೆಗೆ ಯಾವುದೇ ನಾಚಿಕೆ ಇಲ್ಲ ಎಂಬುದನ್ನು ಆಕೆ ತನ್ನ ಕೆಲಸದ ಮೂಲಕ ಸಾಬೀತುಪಡಿಸಿದ್ದಾಳೆ.

ಯುವಜನತೆಗೆ ಸ್ಫೂರ್ತಿಯಾದ ಅಶ್ವತಿ

ಮನುಷ್ಯನ ಮಾನಸಿಕ ಸ್ಥೈರ್ಯ ಮತ್ತು ಶಕ್ತಿಯು ಆತನ ವಯಸ್ಸು ಅಥವಾ ಸನ್ನಿವೇಶಗಳಿಂದ ನಿರ್ಧಾರವಾಗುವುದಿಲ್ಲ; ಬದಲಾಗಿ ಎಷ್ಟೇ ಕಠಿಣ ಹಾದಿಯಿದ್ದರೂ ಮುನ್ನುಗ್ಗುವ ಛಲದಿಂದ ಅಳೆಯಲ್ಪಡುತ್ತದೆ ಎಂಬುದಕ್ಕೆ ಅಶ್ವತಿಯ ಬದುಕು ಉತ್ತಮ ನಿದರ್ಶನವಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ನೆಪಗಳನ್ನು ಹೇಳದೆ, ಬದುಕಿನ ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿರುವ ಈ ಯುವತಿಯ ಶ್ರಮವು ಇಂದಿನ ಯುವಪೀಳಿಗೆಗೆ ನಿಜವಾದ ಸ್ಫೂರ್ತಿಯಾಗಿದೆ. ಕೇರಳದ ಈ ವಿದ್ಯಾರ್ಥಿನಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+