ಓಣಂ ಹಬ್ಬದ ಲಾಟ್ರಿ 10 ಕೋಟಿ ಬಂಪರ್ ಯಾರಿಗೆ?

ತಿರುವನಂತಪುರಂ, ಸೆ. 24: ಓಣಂ ಹಬ್ಬದ ಸಂಭ್ರಮದ ಬಹು ನಿರೀಕ್ಷಿತ ರಾಜ್ಯ ಲಾಟರಿ ಟಿಕೆಟ್ ಫಲಿತಾಂಶ ಪ್ರಕಟವಾಗಿದ್ದು, 10 ಕೋಟಿ ರು ಗಳ ಮೊದಲ ಬಹುಮಾನ ಸಿಕ್ಕಿರುವ ವ್ಯಕ್ತಿ ಯಾರೆಂದು ತಿಳಿದು ಬಂದಿದೆ.

ವೃತ್ತಿಯಿಂದ ಡ್ರೈವರ್ ಆಗಿರುವ 48 ವರ್ಷದ ಮುಸ್ತಾಫಾ ಮೋಟ್ಟತರಮ್ಮಲ್ ಅವರಿಗೆಗೆ 10 ಕೋಟಿ ರೂಪಾಯಿ ಲಾಟ್ರಿ ಹೊಡೆದಿದೆ.
AJ 2876 ನಂಬರಿನ ಲಾಟರಿ ಟಿಕೆಟಿಗೆ10 ಕೋಟಿ ರುಪಾಯಿ ಬಹುಮಾನ ಲಭಿಸಿದ್ದು, ಲಾಟರಿ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ನಗದು ಬಹುಮಾನ ಪಡೆದ ಖ್ಯಾತಿಗೆ ಮುಸ್ತಫಾ ಪಾತ್ರರಾಗಿದ್ದಾರೆ.

Kerala Lottery: Onam Bumper 2017 results out

ಪರಪ್ಪನಂಗಡಿಯ ಐಶ್ವರ್ಯ ಲಾಟರಿ ಏಜೆನ್ಸಿಯಲ್ಲಿ ಕೊಂಡುಕೊಂಡಿದ್ದರು. ಏಜೆನ್ಸಿ ಕಮಿಷನ್​ ಆಗಿ ಒಂದು ಕೋಟಿ ರೂಪಾಯಿಯನ್ನು ಮುಸ್ತಫಾ ನೀಡಿದ್ದಾರೆ.

ಕಳೆದ 20 ವರ್ಷಗಳಿಂದ ಲಾಟರಿಯನ್ನು ಕೊಂಡುಕೊಳ್ಳುತ್ತಿದ್ದೇನೆ, ಓಣಂ ಹಬ್ಬದ ದಿನ ಕೊಂಡುಕೊಂಡ ಲಾಟರಿಯಿಂದ ಖಂಡಿತವಾಗಿಯೂ ಬಹುಮಾನ ಬರುತ್ತೆ ಅಂತಾ ನಿರೀಕ್ಷೆಯಿತ್ತು ಎಂದು ಮುಸ್ತಫಾ ಅವರು ಪ್ರತಿಕ್ರಿಯಿಸಿದ್ದಾರೆ.

ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ಮುಸ್ತಫಾ ಅವರು ಡ್ರೈವರ್, ತೆಂಗಿನ ಕಾಯಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಹುಮಾನದ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+