ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಹಯ್ಯ ಕುಮಾರ್‌ಗೆ ಹೈದರಾಬಾದ್ ವಿವಿ ಪ್ರವೇಶಕ್ಕೆ ತಡೆ

|
Google Oneindia Kannada News

ಹೈದರಾಬಾದ್, ಮಾರ್ಚ್, 24: ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಗೆ ಹೈದರಾಬಾದ್ ಸಂಶೋಧನಾ ವಿವಿ ಪ್ರವೇಶಿಸದಂತೆ ತಡೆ ಒಡ್ಡಲಾಗಿದೆ.

ಬುಧವಾರ ಸಂಜೆ ವಿವಿಯ ಆವರಣದಲ್ಲಿ ಭಾಷಣ ಮಾಡಲು ಕನ್ಹಯ್ಯ ಕುಮಾರ್ ಅವರಿಗೆ ಬಿಡಲಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಮಾತನಾಡಿ ಕನ್ಹಯ್ಯ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಆತ್ಮಹತ್ಯೆ ತೆಡೆಗೆ ರೋಹಿತ್ ವೇಮುಲ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದರು.[ರೋಹಿತ್ ವೇಮುಲ ಪರ ಕನ್ಹಯ್ಯ ಕುಮಾರ್ ಬ್ಯಾಟಿಂಗ್]

jnu

ಇದಾದ ಮೇಲೆ ಕನ್ಹಯ್ಯ ಕುಮಾರ್ ವಿವಿಯ ಕಡೆ ತೆರಳಿದಾಗ ಅವರನ್ನು ಪೊಲೀಸರು ಗೇಟ್ ಬಳಿಯೇ ತಡೆದರು. ಈ ವೇಳೆ ಪೊಲೀಸರ ಹಾಗೂ ಕನ್ಹಯ್ಯ ಕುಮಾರ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.[ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಪ್ಪರಾವ್ ಅವರ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕನ್ಹಯ್ಯ ಕುಮಾರ್ ಅವರಿಗೆ ವಿವಿ ಆವರಣ ಪ್ರವೇಶಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

English summary
As unrest continued at the Hyderabad Central University, the varsity authorities today prevented JNU student leader Kanhaiya Kumar from entering the campus to address the students agitating over the suicide of Dalit scholar Rohith Vemula. Kanhaiya, who came with Rohith's mother and brother to express solidarity with the students, was greeted with slogans for and against him at the gate. "I came from JNU to HCU to support Rohith Vemula's cause. ....we will have to fulfil Rohith Vemula's dreams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X