ಇಸ್ರೋದಿಂದ ಶುಕ್ರಗ್ರಹಕ್ಕೆ ನೌಕೆ; 2024 ಡಿಸೆಂಬರ್ ದಿನ ಯಾಕೆ?
ನವದೆಹಲಿ, ಮೇ 4: ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಗಗನನೌಕೆಗಳನ್ನ ಯಶಸ್ವಿಯಾಗಿ ಕಳುಹಿಸಿರುವ ಭಾರತದ ಮುಂದಿನ ಗಗನಯೋಜನೆ ಟಾರ್ಗೆಟ್ ಶುಕ್ರ ಗ್ರಹವಾಗಿದೆ. ನಮ್ಮ ಸೌರಮಂಡಲದ ಅತ್ಯಂತ ಬಿಸಿ ಗ್ರಹ ಎನಿಸಿದ ಶುಕ್ರನ ಗರ್ಭದೊಳಗೆ ಅಡಗಿರುವ ರಹಸ್ಯವನ್ನು ಭೇದಿಸುವ ನಿಟ್ಟನಲ್ಲಿ ಇಸ್ರೋದ ಶುಕ್ರಯಾನ ಯೋಜನೆ ಉದ್ದೇಶ ಇರಲಿದೆ.
2024 ಡಿಸೆಂಬರ್ ತಿಂಗಳಿನಲ್ಲಿ ಶುಕ್ರ ಗ್ರಹಕ್ಕೆ ನೌಕೆ ಕಳುಹಿಸುವ ಯೋಜನೆಯನ್ನು ಇಸ್ರೋ ರೂಪಿಸಿದೆ. ಶುಕ್ರ ಗ್ರಹದ ಸುತ್ತ ಇರುವ ಸಲ್‌ಫ್ಯೂರಿಕ್ ಆ್ಯಸಿಡ್ ಕ್ಲೌಡ್‌ಗಳ ರಹಸ್ಯವನ್ನು ಪತ್ತೆ ಮಾಡುವುದು, ಗ್ರಹದ ಜ್ವಾಲಾಮುಖಿ ಪ್ರದೇಶಗಳು, ಲಾವಾ ಸ್ಫೋಟ, ಗ್ರಹದ ರಚನೆ, ಅದರ ಪರಿಸರ ವಿವರ ಇತ್ಯಾದಿಯನ್ನು ಅಧ್ಯಯನ ನಡೆಸಲು ಇಸ್ರೋದ ಶುಕ್ರ ಯೋಜನೆಯಲ್ಲಿ ಉದ್ದೇಶಿಸಲಾಗಿದೆ.
ಯೋಜನೆಗೆ 2024, ಡಿಸೆಂಬರ್ ಕಾಲ ಯಾಕೆ?; ಈ ಅವಧಿಯಲ್ಲಿ ಭೂಮಿಗೆ ಶುಕ್ರ ಗ್ರಹ ಸಮೀಪ ಬರುತ್ತದೆ. ಆಗ ಗಗನ ನೌಕೆಯನ್ನ ಹೆಚ್ಚು ಶಕ್ತಿಯ ಅಗತ್ಯ ಇಲ್ಲದೇ ಶುಕ್ರ ಗ್ರಹ ಕಕ್ಷೆಗೆ ಸೇರಿಸಲು ಸಾಧ್ಯವಾಗುತ್ತದೆ ಎಂಬುದು ಇಸ್ರೋದ ಚಿಂತನೆ. ಮತ್ತೆ ಇಂಥ ಕಾಲ ಸಿಗಲು 2031ರವರೆಗೆ ಕಾಯಬೇಕಾಗುತ್ತದೆ. ಹೀಗಾಗಿ, 2024ಕ್ಕೆ ಶುಕ್ರ ಯೋಜನೆ ಪೂರ್ಣಗೊಳಿಸಲು ಇಸ್ರೋ ನಿರ್ಧರಿಸಿದೆ.

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಶುಕ್ರಯಾನ-1 ಯೋಜನೆ ಬಗ್ಗೆ ಮಾತನಾಡಿ, "ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಾಗಿದ್ದು, ವೆಚ್ಚವನ್ನು ಅಂದಾಜಿಸಲಾಗಿದೆ. ಭಾರತದಲ್ಲಿ ಇಂದು ತಾಂತ್ರಿಕ ನಿಪುಣತೆ ಲಭ್ಯ ಇರುವುದರಿಂದ ಬಹಳ ಕಡಿಮೆ ಅವಧಿಯಲ್ಲಿ ಶುಕ್ರ ಗ್ರಹ ಯೋಜನೆ ನಡೆಸಲು ಸಾಧ್ಯವಾಗುತ್ತಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳ, ಚಂದ್ರ ಯೋಜನೆಗಳು: ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಎರಡು ಬಾರಿ ಭಾರತ ಚಂದ್ರಯಾನ ಯೋಜನೆ ಕೈಗೊಂಡಿದೆ. ಎರಡೂ ಕೂಡ ಯಶಸ್ವಿಯಾಗಿದೆ. ಚಂದ್ರನಲ್ಲಿ ನೀರು ಇರುವುದನ್ನು ಮೊದಲು ಗುರುತಿಸಿದ್ದು ಭಾರತವೇ. ನಂತರ ಮಂಗಳಯಾನ ಯೋಜನೆ ನಡೆಸಲಾಯಿತು. ಆದರೆ, ಗ್ರಹದ ನೆಲದ ಮೇಲೆ ರೋವರ್ ಅನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗದೇ ಹೋಗಿದ್ದು ಬಿಟ್ಟರೆ ಮಂಗಳಯಾನ ಬಹುತೇಕ ಯಶಸ್ವಿಯಾಗಿದೆ. ಮಂಗಳನ ಕಕ್ಷೆಯಲ್ಲಿ ನೌಕೆ ಇದ್ದು ಅಲ್ಲಿಂದಲೇ ಗ್ರಹದ ಅಧ್ಯಯನ ನಡೆಸಲಾಗುತ್ತಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಚಂದ್ರಯಾನ್-3 ನಡೆಯಲಿದೆ.
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications