ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾದಿ ವಿವಾದಕ್ಕೆ ಇರಾನ್‌ ಕಳವಳ: ಕ್ರಮದ ಭರವಸೆ ನೀಡಿದ ದೋವಲ್

|
Google Oneindia Kannada News

ನವದೆಹಲಿ, ಜೂ. 9: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಕುರಿತ ಅವಹೇಳನಕಾರಿ ಹೇಳಿಕೆ ವಿವಾದದಿಂದ ಭಾರತಕ್ಕೆ ತೀವ್ರ ಮುಜುಗರದ ಸನ್ನಿವೇಶ ಬಂದೊದಗಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ರನ್ನು ಭೇಟಿ ಮಾಡಿರುವ ಇರಾನ್‌ ವಿದೇಶಾಂಗ ಸಚಿವ ಡಾ. ಹೊಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಈ ಸಂಬಂಧ ಕಳವಳ ವ್ಯಕ್ತಪಡಿಸಿದ್ದಾರೆ.

ಇರಾನ್‌ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್‌ ದೋವಲ್‌ ಅವರು ಪ್ರವಾದಿ ಕುರಿತ ವಿವಾದವನ್ನು ಸರ್ಕಾರ ಹಾಗೂ ಸಂಬಂಧಿತ ಹಂತದಲ್ಲಿ ಬಗೆಹರಿಸಲಾಗುವುದು. ಪ್ರವಾದಿ ಬಗ್ಗೆ ಭಾರತವು ಅಪಾರ ಗೌರವವನ್ನು ಹೊಂದಿದೆ. ಇದರ ಬಗ್ಗೆ ಎಲ್ಲರು ಕೂಡ ಗೌರವಯುತರೇ ಆಗಿದ್ದಾರೆ ಎಂದು ಹೇಳಿದ್ದಾರೆ.

ಇರಾನ್‌ ಅಣು ವಿಜ್ಞಾನಿ ಹತ್ಯೆಗೆ ಅತ್ಯಾಧುನಿಕ ರೋಬೋ ಬಳಕೆ! ಇರಾನ್‌ ಅಣು ವಿಜ್ಞಾನಿ ಹತ್ಯೆಗೆ ಅತ್ಯಾಧುನಿಕ ರೋಬೋ ಬಳಕೆ!

ಆಗಸ್ಟ್‌ 2021ರಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಭಾರಿ ಭಾರತಕ್ಕೆ ಜೂ. 8ರಂದು ಬಂದಿರುವ ಹೋಸೈನ್‌ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರನ್ನು ಭೇಟಿ ಮಾಡಿದರು. ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಅವರನ್ನು ಭೇಟಿ ಮಾಡಿದರು.

ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ನೆದರ್‌ಲ್ಯಾಂಡ್‌ ಸಂಸದ ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ನೆದರ್‌ಲ್ಯಾಂಡ್‌ ಸಂಸದ

ಮುಸ್ಲಿಮರ ಸೂಕ್ಷ್ಮತೆಯ ಬಗ್ಗೆ ಗಮನ

ಮುಸ್ಲಿಮರ ಸೂಕ್ಷ್ಮತೆಯ ಬಗ್ಗೆ ಗಮನ

ಹೋಸೈನ್‌ ಅವರು ಭಾರತದ ಜನರು ಮತ್ತು ಸರ್ಕಾರವನ್ನು ದೈವಿಕ ನಂಬಿಕೆಗಳಿಗೆ ವಿಶೇಷವಾಗಿ ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರಿಗೆ ನೀಡುವ ಗೌರವಕ್ಕಾಗಿ ಮತ್ತು ಧಾರ್ಮಿಕ ಸಹಿಷ್ಣುತೆ, ಐತಿಹಾಸಿಕ ಸಹಬಾಳ್ವೆ ಮತ್ತು ದೇಶದ ವಿವಿಧ ಧರ್ಮಗಳ ಅನುಯಾಯಿಗಳ ನಡುವಿನ ಸ್ನೇಹಕ್ಕಾಗಿ ಶ್ಲಾಘಿಸಿದರು. ಬಳಿಕ ಭಾರತದಲ್ಲಿ ಧಾರ್ಮಿಕ ನಂಬಿಕೆಗಳು ಹಾಗೂ ಮುಸ್ಲಿಮರ ಸೂಕ್ಷ್ಮತೆಯ ಬಗ್ಗೆ ಗಮನಹರಿಸುವಂತೆ ಕರೆ ನೀಡಿದರು. ವಿವಾದಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸೌರ್ಹಾದತೆಗೆ ಸೂಚನೆ ನೀಡಿದರು.

ದಕ್ಷಿಣ- ಉತ್ತರ ಕಾರಿಡಾರ್ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಮತ್ತು ವಿಶೇಷವಾಗಿ ಚಬಹಾರ್ ಬಂದರು, ಹೂಡಿಕೆ, ವ್ಯಾಪಾರ ಮತ್ತು ಶಿಕ್ಷಣ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಳಸುವ ಮೂಲಕ ಭಾರತ- ಇರಾನ್ ಬಾಂಧವ್ಯವನ್ನು ಇನ್ನೂ ವರ್ಧಿಸುವ ವಿವಿಧ ಪ್ರಸ್ತಾವನೆಗಳನ್ನು ಎರಡು ದೇಶದ ಸಚಿವರು ಈ ಸಂದರ್ಭದಲ್ಲಿ ಚರ್ಚಿಸಿದರು.

ವಾಣಿಜ್ಯ ಪ್ರದೇಶಕ್ಕೆ ಸಾರಿಗೆ ಕೇಂದ್ರ

ವಾಣಿಜ್ಯ ಪ್ರದೇಶಕ್ಕೆ ಸಾರಿಗೆ ಕೇಂದ್ರ

ಪ್ರಾದೇಶಿಕ ಸಂಪರ್ಕ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಮಹತ್ವವನ್ನು ಸಚಿವರು ಒಪ್ಪಿಕೊಂಡರು. ಚಬಹಾರ್ ಬಂದರಿನ ಶಾಹಿದ್ ಬೆಹೆಷ್ಟಿ ಟರ್ಮಿನಲ್‌ನಲ್ಲಿನ ಬೆಳವಣಿಗೆ ಬಗ್ಗೆ ಪರಿಶೀಲನೆ ನಡೆಸಿದರು. ಚಬಹಾರ್ ಬಂದರು ಅಫ್ಘಾನಿಸ್ತಾನಕ್ಕೆ ಹೆಚ್ಚು ಅಗತ್ಯವಿರುವ ಸಮುದ್ರ ವ್ಯಾಪಾರದ ಪ್ರವೇಶವನ್ನು ಒದಗಿಸಿದೆ. ಮಧ್ಯ ಏಷ್ಯಾ ಸೇರಿದಂತೆ ವಾಣಿಜ್ಯ ಪ್ರದೇಶಕ್ಕೆ ಸಾರಿಗೆ ಕೇಂದ್ರವಾಗಿ ಇದು ಹೊರಹೊಮ್ಮಿದೆ ಎಂದು ಶ್ಲಾಘಿಸಿರು. ಚಬಹಾರ್ ಬಂದರಿನ ಅಭಿವೃದ್ಧಿಗೆ ಸಹಕಾರವನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ವಾಣಿಜ್ಯ ಕಾರ್ಯಾಚರಣೆಯ ವಿವಿಧ ಅಂಶಗಳ ಬಗ್ಗೆ ಎರಡೂ ದೇಶಗಳ ತಂಡಗಳು ಶೀಘ್ರದಲ್ಲೇ ಸಭೆ ನಡೆಸಲಿವೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಯಿತು.

ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು

ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು

ಜೈಶಂಕರ್‌ ಮತ್ತು ಹೋಸೈನ್‌ ಭದ್ರತೆ ಮತ್ತು ಮಿಲಿಟರಿ ಸಂಬಂಧಗಳು ಮತ್ತು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ಅಫ್ಘಾನಿಸ್ತಾನದ ಸಾಮಾನ್ಯ ಜನರಿಗೆ ಸಹಾಯ ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಮಾತನಾಡಿ, ಅಫ್ಘಾನಿಸ್ತಾನದ ಜನರಿಗೆ ತಕ್ಷಣದ ಮಾನವೀಯ ನೆರವು ನೀಡುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು. ಶಾಂತಿಯುತ, ಸುರಕ್ಷಿತ ಮತ್ತು ಸ್ಥಿರವಾದ ಅಫ್ಘಾನಿಸ್ತಾನವನ್ನು ಬೆಂಬಲಿಸಲು ಪ್ರತಿನಿಧಿಕ ರಾಜಕೀಯ ವ್ಯವಸ್ಥೆಯ ಅಗತ್ಯವನ್ನು ಪುನರುಚ್ಚರಿಸಿದರು.

ಉಕ್ರೇನ್ ಸಂಘರ್ಷ ಸಚಿವರ ಅಭಿಪ್ರಾಯ

ಉಕ್ರೇನ್ ಸಂಘರ್ಷ ಸಚಿವರ ಅಭಿಪ್ರಾಯ

ನವದೆಹಲಿಯಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಸಮ್ಮುಖದಲ್ಲಿ ಇರಾನ್ ಮತ್ತು ಭಾರತದ ವ್ಯಾಪಾರ ಹಾಗೂ ವ್ಯವಹಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ನೆರವು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜೆಸಿಪಿಒಎಗೆ ಸಂಬಂಧಿಸಿದ ಪ್ರಸ್ತುತ ಪರಿಸ್ಥಿತಿಯ ಕುರಿತು ಇರಾನ್ ವಿದೇಶಾಂಗ ಸಚಿವರು ಜೈಶಂಕರ್‌ಗೆ ವಿವರಿಸಿದರು. ಉಕ್ರೇನ್ ಸಂಘರ್ಷ ಮತ್ತು ಅದರ ಪರಿಣಾಮಗಳ ಬಗ್ಗೆ ಇಬ್ಬರು ಸಚಿವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

English summary
India has been embarrassed by a derogatory statement about the Prophet Mohammed Pygambar around the world. Iran Foreign Minister Dr. Hossein Amir Abdullahiyan met Indian Foreign Minister jaishankar and National Security Adviser Ajit Doval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X