ಇರಾನ್ ದೇಶದ ಸಾಲು ಸಾಲು ನಾಯಕರ ಕಥೆ ಮುಗಿಯಿತು, ಯುದ್ಧ ಮತ್ತಷ್ಟು ಜೋರಾಯ್ತು | Iran Conflict
ಇರಾನ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿರುವ ಅಮೆರಿಕ & ಇಸ್ರೇಲ್ ಸೇನೆಗಳು ಯಾರೂ ಊಹೆ ಮಾಡಲು ಆಗದ ಹಂತಕ್ಕೆ ತಲುಪಿವೆ. ಒಂದು ಕಡೆ ಇರಾನ್ ತನ್ನ ದೊಡ್ಡ ದೊಡ್ಡ ನಾಯಕರನ್ನ ಕಳೆದುಕೊಂಡು ರೊಚ್ಚಿಗೆದ್ದಿದೆ, ಅದರಲ್ಲೂ ಇರಾನ್ ಸರ್ವಾಧಿಕಾರಿ ಆಗಿದ್ದ ಖಮೇನಿ ಸಾವಿನ ನಂತರ ಇಡೀ ಮಧ್ಯಪ್ರಾಚ್ಯ ಕೊತಕೊತ ಕುದಿಯುತ್ತಿದೆ. ಇಂತಹ ಸಮಯದಲ್ಲೇ ಇಸ್ರೇಲ್ & ಅಮೆರಿಕ ಜಂಟಿಯಾಗಿ ದಾಳಿ ಶುರು ಮಾಡಿ ಇನ್ನಷ್ಟು ದೊಡ್ಡ ಮಟ್ಟದ ಹವಾ ಎಬ್ಬಿಸಿವೆ. ಈ ಮೂಲಕ ಈ ಯುದ್ಧದಲ್ಲಿ ಹೇಗಾದರೂ ಇರಾನ್ ಶರಣಾಗಬೇಕು ಎಂಬ ತಂತ್ರವನ್ನು ಕೂಡ ಹೂಡಿವೆ. ಹೀಗೆಲ್ಲಾ ತಮ್ಮ ನಾಯಕರನ್ನು ಕಳೆದುಕೊಂಡು ರೊಚ್ಚಿಗೆದ್ದಿರುವ ಇರಾನ್ ಸೇನೆಯು ಇಸ್ರೇಲ್ ಮೇಲೆ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಕ್ಷಿಪಣಿ ದಾಳಿಗೆ ಸಜ್ಜಾಗಿದೆ.
ಇಸ್ರೇಲ್ ಸೇನೆಯಿಂದ ಇರಾನ್ ಮೇಲೆ ಮಾರಣಾಂತಿಕ ದಾಳಿ ಮುಂದುವರಿದ ಹಿನ್ನೆಲೆ ಈಗ ಮತ್ತೊಬ್ಬ ಸಚಿವ ಜೀವ ಬಿಟ್ಟಿರುವುದು ಕನ್ಫರ್ಮ್ ಆಗಿದೆ. ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಈಗ ಇಸ್ರೇಲ್ ದಾಳಿಗೆ ಬಲಿಯಾಗಿದ್ದು, ಇಸ್ಮಾಯಿಲ್ ಖತೀಬ್ ಹತ್ಯೆ ಮಾಡಿದ್ದೀವಿ ಎಂದು ಇಸ್ರೇಲ್ ಕೆಲವು ಗಂಟೆಗಳ ಹಿಂದೆ ಹೇಳಿಕೊಂಡಿತ್ತು. ಇರಾನ್ ಕೂಡ ಈ ವಿಚಾರವನ್ನು ಈಗ ಕನ್ಫರ್ಮ್ ಮಾಡಿದ್ದು, ಆ ಮೂಲಕ ಯುದ್ಧ ಇನ್ನಷ್ಟು ತೀವ್ರವಾಗುವ ಮುನ್ಸೂಚನೆ ಸಿಕ್ಕಿದೆ.

ಸಾಲು ಸಾಲು ಸಾವಿನ ಸುದ್ದಿ
ಅಂದಹಾಗೆ ಖತೀಬ್ ಸಾವು ಇದೀಗ ಬಿರುಗಾಳಿಯ ಅಲೆ ಎಬ್ಬಿಸಿದ್ದು, ನೋಡ ನೋಡುತ್ತಲೇ ಇರಾನ್ ಕೂಡ ದೊಡ್ಡ ಮಟ್ಟದಲ್ಲಿ ದಾಳಿ ಆರಂಭಿಸಿದೆ. ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೆ ಮತ್ತಷ್ಟು ಕ್ಷಿಪಣಿಗಳ ಮೂಲಕ ಇರಾನ್‌ನ ಸೇನೆ ದಾಳಿ ಶುರು ಮಾಡಿದ್ದು, ಈಗಾಗಲೇ ನೂರಾರು ಕಟ್ಟಡಗಳಿಗೆ ಹಾನಿಯಾಗಿದೆ. ಇರಾನ್ ದೇಶದ ಅತ್ಯುನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹತ್ಯೆ ನಂತರ ಇನ್ನೂ ಒಬ್ಬ ಪ್ರಮುಖ ನಾಯಕನ ಸಾವು ಸಹಜವಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ತಲ್ಲಣ ಎಬ್ಬಿಸಿದೆ. ಅಲ್ಲದೆ ಈ ತಿಕ್ಕಾಟ ಸೌದಿ ಅರೇಬಿಯಾ, ಕತಾರ್, ಯುಎಇ ಸೇರಿದಂತೆ ಇರಾನ್ ಅಕ್ಕಪಕ್ಕ ಇರುವ ದೇಶಗಳಿಗೂ ಭಾರಿ ತಲೆನೋವು ತಂದಿದೆ.
ಬಂಕರ್ ನಾಶಕ್ಕೆ ಬಲಿಷ್ಠ ಬಾಂಬ್
ಮತ್ತೊಂದು ಕಡೆ ಈ ಸಾವುಗಳಿಗೆ ಪ್ರತಿಕಾರ ತೀರಿಸಿಕೊಳ್ಳುವ ಘೋಷಣೆ ಹೊರಡಿಸಿರುವ, ಇರಾನ್ ದೇಶದ ನೂತನ ಸುಪ್ರೀಂ ಲೀಡರ್ ಶತ್ರು ದೇಶಗಳ ವಿರುದ್ಧ ಗುಡುಗಿರುವುದು ಗಮನ ಸೆಳೆದಿದೆ. ಇರಾನ್ ದೇಶದ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಹೀಗೆ ಶತ್ರು ದೇಶಗಳಿಗೆ ಎಚ್ಚರಿಕೆ ನೀಡಿದ್ದು, ಇನ್ನೊಂದು ಕಡೆ ಅಮೆರಿಕ ಹಾಗೂ ಇಸ್ರೇಲ್ ಕೇರ್ ಮಾಡದೆ ದಾಳಿ ಮಾಡುತ್ತಿವೆ. ಹಾಗೇ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಇನ್ನೂ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ. ಹಾಗೇ ಇರಾನ್ ದೇಶದ ಬಂಕರ್‌ಗಳನ್ನ ನಾಶ ಮಾಡಲು ಹೊಸ ಹೊಸ ಬಾಂಬ್ ಬಳಕೆ ಮಾಡುತ್ತಿದೆ ಅಮೆರಿಕ ಸೇನೆ.












Click it and Unblock the Notifications