200 ಸೇನಾ ತಜ್ಞರನ್ನ ಮಧ್ಯಪ್ರಾಚ್ಯಕ್ಕೆ ಕಳುಹಿಸಿದ ಉಕ್ರೇನ್, ನಿಮಗೆ ಟೈಂ ಬಂತು ಅಂತಿದ್ದಾರೆ ಜನ | Iran Conflict
ಉಕ್ರೇನ್ ಸುಮ್ಮನೆ ತನ್ನ ಪಾಡಿಗೆ ತಾನು ಇರದೆ ಏನೋ ದೊಡ್ಡ ಎಡವಟ್ಟು ಮಾಡಿಕೊಳ್ಳಲು ಇದೀಗ ಮುಂದೆ ಬಂದಂತೆ ಕಾಣುತ್ತಿದೆ. ಒಂದು ಕಡೆ ಇರಾನ್ ಹಾಗೂ ಅಮೆರಿಕ ನಡುವೆ ಭೀಕರ ಯುದ್ಧವು ನಡೆಯುತ್ತಿರುವ ಸಮಯದಲ್ಲಿ, ಮಧ್ಯಪ್ರಾಚ್ಯ ಭಾಗದ ಶ್ರೀಮಂತ ದೇಶಗಳಿಗೆ ಸಹಾಯ ಮಾಡುವಂತೆ ನಾಟಕ ಮಾಡುತ್ತಾ ಕಾಸು ಸಂಪಾದಿಸಲು ಉಕ್ರೇನ್ ಮುಂದಾಗಿದೆ. ಅದರಲ್ಲೂ, ಡ್ರೋನ್ ಮೂಲಕ ಇರಾನ್ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿರುವ ಸಮಯದಲ್ಲಿ ನಾವು ನಿಮಗೆ ಸಹಾಯ ಮಾಡ್ತೀವಿ ಅಂತಾ ಉಕ್ರೇನ್ ಬೇಡಿಕೊಂಡಿತ್ತು. ಈಗ ನೇರವಾಗಿ 200 ಸೇನಾ ತಜ್ಞರನ್ನ ಮಧ್ಯಪ್ರಾಚ್ಯಕ್ಕೆ ಕಳುಹಿಸಿರುವ ಉಕ್ರೇನ್ ತನ್ನ ಗುಂಡಿ ತಾನೇ ತೋಡಿಕೊಳ್ಳುತ್ತಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಧ್ಯಪ್ರಾಚ್ಯ ಸಂಘರ್ಷದ ವಿಚಾರವಾಗಿ ಮಹತ್ವದ ಮಾಹಿತಿ ನೀಡಿದ್ದು, ಈಗ ತಮ್ಮ ದೇಶದಿಂದ 200 ಸೇನಾ ತಜ್ಞರನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿರುವ ಬಗ್ಗೆ ತಿಳಿಸಿದ್ದಾರೆ. ಇದು ಮತ್ತಷ್ಟು ಸೂಕ್ಷ್ಮ ವಾತಾವರಣ ನಿರ್ಮಾಣ ಮಾಡುವ ಜೊತೆಗೆ ಇರಾನ್ ಈಗ ನೇರವಾಗಿ ಉಕ್ರೇನ್‌ನ ಮೇಲೂ ದಾಳಿ ಮಾಡುವ ವಾತಾವರಣ ಸೃಷ್ಟಿಸಿದೆ. ಇರಾನ್ ವಿನ್ಯಾಸದ ಶಾಹೀದ್ ಡ್ರೋನ್‌ಗಳ ವಿರುದ್ಧ ರಕ್ಷಣೆ ನೀಡಲು ಉಕ್ರೇನ್‌ನ 201 ಆಂಟಿ-ಡ್ರೋನ್ ತಜ್ಞರನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಬಗ್ಗೆ ಮಾಹಿತಿ ನೀಡಿದ್ದು, 34 ತಜ್ಞರು ಸಿದ್ಧ ಸ್ಥಿತಿಯಲ್ಲಿದ್ದಾರೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಇರಾನ್ ಸೇನೆಯಿಂದ ಉಕ್ರೇನ್ ಮೇಲೂ ದಾಳಿ?
ಉಕ್ರೇನ್ ಕಳುಹಿಸಿರುವುದು ಸೈನಿಕ ತಜ್ಞರನ್ನ, ಶಾಹೀದ್ ಡ್ರೋನ್‌ಗಳಿಂದ ಹೇಗೆ ರಕ್ಷಿಸಬೇಕು ಮತ್ತು ಹೇಗೆ ಎದುರಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದವರು ಇವರು ಎಂದಿದ್ದಾರೆ ವೊಲೊಡಿಮಿರ್ ಝೆಲೆನ್ಸ್ಕಿ. ಈ ಮೂಲಕ ಇರಾನ್ ಸೇನೆ ಉಕ್ರೇನ್ ವಿರುದ್ಧ ಕೂಡ ರೊಚ್ಚಿಗೆದ್ದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಸೌದಿ ಅರೇಬಿಯಾ ದೇಶಗಳಿಗೆ ತನ್ನ ಡ್ರೋನ್ ತಜ್ಞರನ್ನು ಕಳುಹಿಸಿರುವ ಉಕ್ರೇನ್ ಅಧ್ಯಕ್ಷನಿಗೆ ರಷ್ಯಾ ಕೂಡ ಎಚ್ಚರಿಕೆ ಸಂದೇಶ ರವಾನಿಸಲು ಸಜ್ಜಾಗಿದೆ. ಬ್ರಿಟನ್ ನೆಲದಲ್ಲಿ ನಿಂತು ವೊಲೊಡಿಮಿರ್ ಝೆಲೆನ್ಸ್ಕಿ ಈ ಮಾಹಿತಿ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.
ಇರಾನ್ ವಿರುದ್ಧ ಉಕ್ರೇನ್‌ಗೆ ದ್ವೇಷ?
ಉಕ್ರೇನ್ ಈಗಾಗಲೇ ರಷ್ಯಾ ಕೈಯಲ್ಲಿ ಸರಿಯಾಗಿ ಏಟು ತಿನ್ನುತ್ತಿದ್ದರೂ, ಬುದ್ಧಿ ಕಲಿತಂತೆ ಕಾಣ್ತಿಲ್ಲ. ಅಮೆರಿಕಗೆ ಒಂದಾದ ನಂತರ ಒಂದೊಂದು ದೊಡ್ಡ ಹಿನ್ನಡೆ ಎದುರಾಗುತ್ತಿದೆ, ಮಧ್ಯಪ್ರಾಚ್ಯದಲ್ಲಿ ಸೇನಾ ಕಾರ್ಯಾಚರಣೆ ಶುರು ಮಾಡಿದ್ದ ಅಮೆರಿಕ ನರಳುವಂತೆ ಆಗಿದೆ. ಹೇಗಾದರೂ ಇರಾನ್ ಸೋಲಿಸಿ, ಇಡೀ ಮಧ್ಯಪ್ರಾಚ್ಯ ಭಾಗದ ತಮ್ಮ ಶತ್ರುಗಳ ಹುಟ್ಟಡಗಿಸಿ ಪವರ್ ಕೈಗೆ ತೆಗೆದುಕೊಳ್ಳಬೇಕು ಎಂಬ ಭಾರಿ ಪ್ಲಾನ್ ಫ್ಲಾಪ್ ಆಗಿದೆ. ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ಮಾಡಿದರೆ ಕೆಲ ದಿನದಲ್ಲಿ ಇರಾನ್ ಸೋಲು ಒಪ್ಪಿಕೊಳ್ಳಬಹುದು ಎಂಬ ನಿರೀಕ್ಷೆ ಇದೀಗ ಹುಸಿಯಾಗಿದೆ. ಹೀಗಿದ್ದಾಗಲೇ ಉಕ್ರೇನ್ ಕೂಡ ಈ ಯುದ್ಧದಲ್ಲಿ ಹಸ್ತಕ್ಷೇಪ ಮಾಡಿರುವುದು ತಲ್ಲಣ ಎಬ್ಬಿಸಿದೆ.












Click it and Unblock the Notifications